ತೊಟ್ಟಿಲಗುರಿ ದುರಂತಕ್ಕೆ ಒಂದು ವರ್ಷ

 ಬಜಪೆ : ಅಂದು ಜೂನ್ 18, 2012 ಬೆಳಗಿನ ಜಾವ 5 ಗಂಟೆಯ ಸಮಯ. ತೊಟ್ಟಿಲಗುರಿಯಲ್ಲಿ ರಾತ್ರಿಯಿಂದಲೂ ಜೋರಾದ ಗಾಳಿ-ಮಳೆ ಸುರಿಯುತ್ತಿದ್ದು, ಚಿಕ್ಕ ಚಿಕ್ಕ ಗುಡಿಸಲಿನಂತಿದ್ದ ಮನೆಗಳಲ್ಲಿ ಹಲವು ಮಂದಿ ಗಾಢನಿದ್ದೆಯಲ್ಲಿದ್ದರು ಅವರ ಮೇಲೆ ಮನೆಯ ಗೋಡೆ ಕುಸಿದು ಬಿದ್ದು ಕಲ್ಲು-ಮಣ್ಣುಗಳ ಮಧ್ಯೆ ಸಿಲುಕಿ ಸಾವು ಬದುಕಿನ ಮದ್ಯೆ ಹೋರಾಟ ನಡೆಸುತ್ತಿದ್ದರು ಕೆಲವರು ಅಸುನೀಗಿದರು. ಕೂಡಲೇ ಅಗ್ನಿಶಾಮಕದಳ, ಪೊಲೀಸ್ ಇಲಾಖೆ ಹಾಗೂ ಊರ ನಾಗರೀಕರು ಕಲ್ಲು ಮಣ್ಣುಗಳನ್ನು ಸರಿಸಿ ನಾಲ್ಕು ಮೃತದೇಹಗಳನ್ನು ಹೊರಗೆ ತಂದು ಮಲಗಿಸಿದಾಗ ಇಡೀ ಬಜಪೆ ದುರಂತದ ಬಗ್ಗೆ ಕಣೀರಿಟ್ಟಿತು. ಈ ಘಟನೆಯಲ್ಲಿ ಸವಿತಾ ಸುಂದರ, ಸುಂದರಿ ಹಾಗೂ ಬೇಬಿ ಸೇರಿದಂತೆ ನಾಲ್ಕು ಮಂದಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು.
ಬಜ್ಪೆ ಪೇಟೆಯ ಪಕ್ಕದಲ್ಲಿರುವ ತೊಟ್ಟಿಲಗುರಿ ದಲಿತ ಕಾಲನಿಯಲ್ಲಿ ದುರಂತ ಘಟನೆ ನಡೆದ ನಂತರ ಸಂತ್ರಸ್ತರಿಗೆ ತಾಲೂಕು ಪಂಚಾಯತ್ ಗೆ ಸಂಬಂಧಪಟ್ಟ ಕಟ್ಟಡದಲ್ಲಿ ತತ್ಕಾಲಿಕ ವಸತಿ ವ್ಯವಸ್ಥೆ ಕಲ್ಪಿಸಿದರೂ ಇಂದಿಗೂ ಅವರು ಆ ಕಟ್ಟಡದಲ್ಲೆ ಇದ್ದಾರೆ, ದುರ್ಘಟನೆ ಸಂಭವಿಸಿದಾಗ ಜಿಲ್ಲಾಡಳಿತದ ಅಧಿಕಾರಿಗಳು, ಸಚಿವರು, ಶಾಸಕರು ಮಾತ್ರವಲ್ಲದೆ ರಾಜ್ಯ ಗೃಹಸಚಿವರೂ ಭೇಟಿ ನೀಡಿದ್ದರು. ಈ ಘಟನೆಗೆ ಮುಖ್ಯವಾಗಿ ಸಮೀಪದಲ್ಲೇ ಇರುವ ಆಕ್ರಮ ಕಟ್ಟಡಗಳು, ಈ ಕಟ್ಟಡಗಳ ನೀರು ಈ ಗುಡಿಸಲುಗಳ ಸಮೀಪದ್ದಲ್ಲೇ ಹರಿದು ಜೋರಾಗಿ ಸುರಿದ ಮಳೆಗೆ ಈ ಘಟನೆ ಸಂಭವಿಸಿದೆ ಎನ್ನಲಾಗುತ್ತಿದೆ. ಈ ಆಕ್ರಮ ಕಟ್ಟಡಗಳ ಕಾನೂನು ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಬಜಪೆ ಪಂಚಾಯತ್ ಜಿಲ್ಲಾದಿಕಾರಿ ಮತ್ತು ಸಂಬಂದ್ದಪಟ್ಟವರಿಗೆ ಮನವಿ ಸಲ್ಲಿಸಿದ್ದರೂ ಇದುವರೆಗೆ ಪ್ರಯೋಜನವಾಗಿಲ್ಲ, ಸಂತ್ರಸ್ತರಿಗೆ ಮೊದಲು ಇಲಾಖೆ ತೋರಿಸಿದ್ದ ಜಾಗ ಪೊರ್ಕೋಡಿ. ಆದರೆ ಪೊರ್ಕೋಡಿಯಲ್ಲಿ ಮೂಲಭೂತ ಸೌಕರ್ಯ ಇಲ್ಲ ಎಂಬ ಕಾರಣ ನೀಡಿ ಆ ಜಾಗವನ್ನು ನಿರಾಕರಿಸಿದರು, ಆದರೆ ಸಂತ್ರಸ್ತರ ಬೇಡಿಕೆಯಂತೆ ಬಜ್ಪೆ ಪೋಲಿಸ್ ಠಾಣೆ ಸಮೀಪದ ಜಾಗದಲ್ಲಿ ವಾಸಿಸುವುದು ಅವರ ಕನಸಾಗಿತ್ತು. ಇದರ ಬಗ್ಗೆ ಪಂಚಾಯತ್ ಗೆ ಮನವಿ ಸಲ್ಲಿಸಿದ್ದರು ಆದರೆ ಪೋಲಿಸ್ ಠಾಣೆಯ ಬಳಿ, ಸರ್ವೆಯಲ್ಲಿ ತಿಳಿದು ಬಂದಂತೆ ಯಾವುದೇ ಸರಕಾರಿ ಜಾಗವಿಲ್ಲ ಎಂದು ಬಜಪೆ ಪಂಚಾಯತ್ ಹೇಳಿದರೂ ಪೊರ್ಕೋಡಿ ಜಾಗಕ್ಕೆ ಸಂತ್ರಸ್ಥರು ಹೋಗಲು ತಯಾರಿಲ್ಲ, ಆದರೆ ಇತ್ತೀಚೆಗೆ 18 ಕುಟುಂಬಗಳಲ್ಲಿ 7 ಕುಟುಂಬಗಳು ಇದಕ್ಕೆ ಒಪ್ಪಿಗೆ ಸೂಚಿಸಿದ್ದು ಅವರಿಗೆ ಹಕ್ಕುಪತ್ರವನ್ನು ನೀಡಲಾಗಿದೆ, ಬಸವ ಇಂದಿರಾ ಯೋಜನೆಯಡಿಯಲ್ಲಿ ಪ್ರತಿಯೊಬ್ಬರಿಗೂ 1.25 ಲಕ್ಷ ಅನುದಾನ ದೊರೆಯಲಿದ್ದು ಶಿಘ್ರದಲ್ಲೇ ಮನೆ ನಿರ್ಮಾಣ ವಾಗಲಿದೆ, 1ಕುಟುಂಬದಲ್ಲಿ ಯಾರೂ ಬದುಕುಳಿಯಲಿಲ್ಲ ಇನ್ನು ಉಳಿದ 10 ಕುಟುಂಬಗಳು ಪೊರ್ಕೋಡಿ ಜಾಗಕ್ಕೆ ಅಸಮ್ಮತಿ ಸೂಚಿಸಿದ್ದರಿಂದ ಇಂದಿಗೂ ಜಾಗದ ವಿವಾದ ಪರಿಹಾರಗೊಂಡಿಲ್ಲ.

Kinnigoli-18061404

Nishanth Kilenjoor

Comments

comments

Comments are closed.

Read previous post:
Kinnigoli-18061403
ಪಂಜ ಉಚಿತ ಪುಸ್ತಕ ವಿತರಣೆ

ಕಿನ್ನಿಗೋಳಿ : ಪ್ರಕಾಶ್ ಶೆಟ್ಟಿ ನಲ್ಯಗುತ್ತು ಮುಂಬೈ ಸೀತಾರಾಮ ಎಲ್. ಶೆಟ್ಟಿ ಮುಂಬೈ ಸುಧಾಕರ್ ಎಸ್. ಪೂಂಜ ಹಾಗೂ ದೇಜಪ್ಪ ಅಮೀನ್ ಅವರ ಕೊಡುಗೆಯಾಗಿ ಬ್ಯಾಗ್, ಪುಸ್ತಕ, ಕೊಡೆಗಳನ್ನು...

Close