ಶ್ರೀ ರಾಮ ಭಜನಾ ಮಂದಿರಕ್ಕೆ ಒಂದು ಲಕ್ಷ ಕೊಡುಗೆ

ಕಿನ್ನಿಗೋಳಿ : ಶ್ರೀಕ್ಷೇತ್ರ ಧರ್ಮಸ್ಥಳದಿಂದ ಕಿನ್ನಿಗೋಳಿ ಸಮೀಪದ ಗೋಳಿಜೋರ ಶ್ರೀ ಹರಿಹರ ಶ್ರೀ ರಾಮ ಭಜನಾ ಮಂದಿರದ ಜೀಣೋದ್ಧಾರ ಕಾರ್ಯಕ್ಕೆ ಒಂದು ಲಕ್ಷ ಕೊಡುಗೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜಾನಾಧಿಕಾರಿ ರಾಘವ ಎಂ, ಗುರುವಾರ ಗೋಳಿಜೋರ ಭಜನಾ ಮಂದಿರದಲ್ಲಿ ಹಸ್ತಾಂತರಿಸಿದರು. ಈ ಸಂದರ್ಭ ಯುಗಪುರುಷದ ಸಂಪಾದಕ ಭುವನಾಭಿರಾಮ ಉಡುಪ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕ ಸತೀಶ್, ಭಜನಾ ಮಂಡಳಿಯ ಸದಸ್ಯರಾದ ಶಂಕರ, ರಾಮ, ಶ್ಯಾಮ, ವೀರಪ್ಪ ಚೇತನ್, ಸುಜಯ, ಬೇಬಿ, ನವಿತಾ, ತುಳಸಿ ಮತ್ತಿತರರು ಉಪಸ್ಥಿತರಿದ್ದರು.

Kinnigoli-20061401

 

Comments

comments

Comments are closed.

Read previous post:
ಜೂ. 22 ಕಿನ್ನಿಗೋಳಿ ರೋಟರ‍್ಯಾಕ್ಟ್ ರಜತ ಸಂಭ್ರಮ

ಕಿನ್ನಿಗೋಳಿ :ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್‌ನ ರಜತ ಸಂಭ್ರಮದ ಸಮಾರೋಪ ಸಮಾರಂಭ ಹಾಗೂ ಶಾಶ್ವತ ಯೋಜನೆಯ ಉದ್ಘಾಟನೆ ಭಾನುವಾರ ಜೂನ್ 22 ರಂದು ಯುಗಪುರುಷದ ಸಭಾಭವನದಲ್ಲಿ ನಡೆಯಲಿದೆ. ಈ ಸಂದರ್ಭ...

Close