ರೋಟರ‍್ಯಾಕ್ಟ್ ಕ್ಲಬ್ : ರಜತ ಸಂಭ್ರಮ

ಕಿನ್ನಿಗೋಳಿ : ಸಂಘ ಸಂಸ್ಥೆಗಳು ನಿರಂತರವಾಗಿ ಜನಪರ ಸೇವಾ ಕಾರ್ಯಕ್ರಮಗಳನ್ನು ಮಾಡಿಕೊಂಡು ಹಾಗೂ ಶೈಕ್ಷಣಿಕತೆಗೆ ಹೆಚ್ಚಿನ ಒತ್ತುಕೊಟ್ಟು ಸಮಾಜದ ಉನ್ನತಿಗಾಗಿ ಸೇವೆ ಮಾಡಬೇಕು. ಎಂದು ರೋಟರಿ ಜಿಲ್ಲೆ ೩೧೮೦ ರ ಮಾಜಿ ಜಿಲ್ಲಾ ಗವರ್ನರ್ ಸೂರ್ಯಪ್ರಕಾಶ್ ಭಟ್ ಹೇಳಿದರು.
ಭಾನುವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್‌ನ ರಜತ ಸಂಭ್ರಮ ಸಮಾರೋಪ ಹಾಗೂ ಶಾಶ್ವತ ಯೋಜನೆ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭ ಕಳೆದ 25 ವರ್ಷಗಳಲ್ಲಿ ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್‌ಗೆ ಸೇವೆ ಸಲ್ಲಿಸಿದ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.
ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ರಾಬರ್ಟ್ ರೊಸಾರಿಯೋ, ನಿಯೋಜಿತ ಅಧ್ಯಕ್ಷ ವಿಲಿಯಂ ಸಿಕ್ವೇರಾ, ಮಾಜಿ ಜಿಲ್ಲಾ ಜಿಲ್ಲಾ ಪ್ರತಿನಿಧಿ ರೋಟರ‍್ಯಾಕ್ಟ್ ಶೈಲೆಂದ್ರ ರಾವ್, ಸಂತೋಷ್ ಮೂಡಬಿದ್ರಿ, ರೋಟರ‍್ಯಾಕ್ಟ್ ಮಾಜಿ ಜಿಲ್ಲಾ ಪ್ರತಿನಿಧಿ ಸುಮಿತ್ ಕುಮಾರ್, ನಿಯೋಜಿತ ರೋಟರ‍್ಯಾಕ್ಟ್ ಸಭಾಪತಿ ಸಂತೋಷ್ ಕುಮಾರ್, ನಿಯೋಜಿತ ರೋಟರ‍್ಯಾಕ್ಟ್ ಕ್ಲಬ್ ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ರೋಟರ‍್ಯಾಕ್ಟ್ ಕ್ಲಬ್ ಸ್ಥಾಪಕ ಅಧ್ಯಕ್ಷ ಜೋಸ್ಸಿ ಪಿಂಟೋ ಸ್ವಾಗತಿಸಿದರು. ಮಾಜಿ ರೋಟರ‍್ಯಾಕ್ಟ್ ಚೆಯರ್‌ಮನ್ ಪಿ. ಸತೀಶ್ ರಾವ್ ವಂದಿಸಿದರು. ರೋಟರಿ ನಿಯೋಜಿತ ವಲಯ ಸೇನಾನಿ ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-23061401

Comments

comments

Comments are closed.

Read previous post:
ಪೊಂಪೈ: ಅಕ್ಷರದಾಸೋಹ ಕಟ್ಟಡ ಉದ್ಘಾಟನೆ

ಕಿನ್ನಿಗೋಳಿ : ಪೊಂಪೈ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಅಕ್ಷರ ದಾಸೋಹ ಕಟ್ಟಡದ ಉದ್ಘಾಟನೆಯನ್ನು ಇತ್ತೀಚೆಗೆ ದ.ಕ. ಜಿ.ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ನೆರವೇರಿಸಿದರು. ಪೊಂಪೈ...

Close