ವಿದ್ಯಾರ್ಥಿಗಳ ನಡತೆ ಬಗ್ಗೆ ಹೆತ್ತವರ ಕಾಳಜಿ ಅಗತ್ಯ

ಮೂಲ್ಕಿ: ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಿ. ವಿದ್ಯೆ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರೋ ಅದೇ ರೀತಿ ಗುಣ ಮಟ್ಟ, ಶಿಸ್ತು, ನಡತೆ ಬಗ್ಗೆ ಹೆತ್ತವರು ಕಾಳಜಿ ವಹಿಸಿಕೊಳ್ಳಬೇಕೆಂದು ಭಗಿನಿ ಅಗ್ನೇಶಿಯ ಹೇಳಿದರು. ಅವರು ಮೆಡಲಿನ್ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ-ರಕ್ಷಕ ಸಭೆಯನ್ನು ಉದ್ಘಾಟಿಸಿ ಮಕ್ಕಳ ಅಬಿವೃದ್ದಿಯಲ್ಲಿ ಹೆತ್ತವರ ಪಾತ್ರದ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಭಗಿನಿ ಅಗ್ನೇಸ್ ಪಿಂಟೋ ವಹಿಸಿದ್ದರು. ಶಾಲೆಯ ಮುಖ್ಯೋಪಾದ್ಯಾಯಿನಿ ಭಗಿನಿ ಗ್ರೇಸಿ ಮಾತನಾಡಿ ಶಾಲೆಯ ಆಗು ಹೋಗುಗಳ ಬಗ್ಗೆ ಹೇಳಿ ಹೊಸದಾಗಿ ನೃತ್ಯ ಹಾಗೂ ಯೋಗ ತರಗತಿಗಳನ್ನು ಆರಂಭಿಸುವ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರೊನಾಲ್ಡ್ ಕರ್ಕಡ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ಕಮಿಟಿಯನ್ನು ರಚಿಸಲಾಯಿತು. ಶಿಕ್ಷಕಿ ಹಿಲ್ಡಾ ಡೇಸಾ ಸ್ವಾಗತಿಸಿದರು.ಶಿಕ್ಷಕಿ ಮೋನಿಕಾ ಡಿಸೋಜ ಕಾರ‍್ಯಕ್ರಮ ನಿರೂಪಿಸಿದರು.

Kinnigoli-25061401Puneethakrishna 

Comments

comments

Comments are closed.

Read previous post:
Kateel-24061401
ಕಟೀಲು ಕ್ಷೇತ್ರ : ಜಿಲ್ಲಾಧಿಕಾರಿ ಪರಿಶೀಲನೆ

ಕಟೀಲು : ಇಲ್ಲಿನ ದುರ್ಗಾಪರಮೇಶ್ವರೀ ದೇಗುಲಕ್ಕೆ ಸೋಮವಾರ ಭೇಟಿ ನೀಡಿದ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ದೇಗುಲದಲ್ಲಿ ಸ್ವಚ್ಛತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಗಮನ ಕೊಡುವಂತೆ ಸೂಚಿಸಿದರು. ಈ...

Close