ಮೂಲ್ಕಿ ಪಂಚಾಯತ್ ಬಿಜೆಪಿ ಸದಸ್ಯರಿಗೆ ಮಾಹಿತಿ

ಮೂಲ್ಕಿ: ನಗರ ಪಂಚಾಯತ್ ಕಾರ್ಯ ಕಲಾಪಗಳು, ಅಧಿಕಾರದ ವ್ಯಾಪ್ತಿ ಹಾಗೂ ಕಾರ್ಯವೈಖರಿ ಮತ್ತು ನಿಯಮಾವಳಿಯ ಬಗ್ಗೆ ಸದಸ್ಯರು ಸರಿಯಾಗಿ ತಿಳಿದುಕೊಂಡರೆ ಮಾತ್ರ ತಮ್ಮ ಪ್ರದೇಶದ ಅಭಿವೃದ್ಧಿ ಹಾಗೂ ಜನತೆಗೆ ನ್ಯಾಯ ಒದಗಿಸಲು ಸಹಕಾರಿಯಾಗುತ್ತದೆ ಎಂದು ಹಿರಿಯ ಲೆಕ್ಕ ಪರಿಶೋಧಕರು ಮತ್ತು ಉಡುಪಿ ನಗರ ಸಭೆಯ ಮಾಜಿ ಅಧ್ಯಕ್ಷ ಗುಜ್ಜಾಡಿ ಪ್ರಭಾಕರ ನಾಯಕ್ ಹೇಳಿದರು.

ಶುಕ್ರವಾರ ಮೂಲ್ಕಿ ಸ್ವಾಗತ್ ಸಂಕೀರ್ಣದಲ್ಲಿ ಭಾರತೀಯ ಜನತಾ ಪಾರ್ಟಿಯ ಮೂಲ್ಕಿ ಶಕ್ತಿ ಕೇಂದ್ರದ ಆಶ್ರಯದಲ್ಲಿ ಮೂಲ್ಕಿ ಪಟ್ಟಣ ಪಂಚಾಯತ್‌ನ ಬಿಜೆಪಿ ಸದಸ್ಯರಿಗೆ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಮಂಡಲ ಅಧ್ಯಕ್ಷ ಕೆ.ಪಿ.ಸುಚರಿತ ಶೆಟ್ಟಿ,ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರತಾಪ್ ಕುಮಾರ್, ಮಂಡಲ ಪ್ರಧಾನ ಕಾರ್ಯದರ್ಶಿ ದೇವ ಪ್ರಸಾದ್ ಪುನರೂರು,ಜಿಲ್ಲಾ ಸಮಿತಿ ಸದಸ್ಯ ಸುದರ್ಶನ ಎಂ,ಮೂಲ್ಕಿ ಶಕ್ತ ಕೇಂದ್ರ ಸಂಚಾಲಕ ಸತೀಶ್ ಅಂಚನ್, ಸಹ ಸಂಚಾಲಕ ನವೀನ್ ಮೂಲ್ಕಿ ನಗೆ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಎಂ. ಬಂಗೇರಾ ,ಉಪಾಧ್ಯಕ್ಷೆ ವಸಂತಿ ಭಂಡಾರಿ, ಸ್ಥಾಯೀ ಸಮಿತಿ ಅಧ್ಯಕ್ಷ ಸುನಿಲ್ ಆಳ್ವಾ ಮತ್ತು ಪಂ.ಸದಸ್ಯರು ಉಪಸ್ಥಿತರಿದ್ದರು.

Kinnigoli-26061403Bhagyavan Sanil

Comments

comments

Comments are closed.

Read previous post:
Kinnigoli-25061401
ವಿದ್ಯಾರ್ಥಿಗಳ ನಡತೆ ಬಗ್ಗೆ ಹೆತ್ತವರ ಕಾಳಜಿ ಅಗತ್ಯ

ಮೂಲ್ಕಿ: ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸಿ. ವಿದ್ಯೆ ಬಗ್ಗೆ ಎಷ್ಟು ಕಾಳಜಿ ವಹಿಸುತ್ತೀರೋ ಅದೇ ರೀತಿ ಗುಣ ಮಟ್ಟ, ಶಿಸ್ತು, ನಡತೆ ಬಗ್ಗೆ ಹೆತ್ತವರು ಕಾಳಜಿ ವಹಿಸಿಕೊಳ್ಳಬೇಕೆಂದು ಭಗಿನಿ...

Close