ತೆರಿಗೆ ಬಾಕಿ ಅಭಿವೃದ್ಧಿಗೆ ತೊಡಕು????

ಕಿನ್ನಿಗೋಳಿ : ಐಕಳ ಏಳಿಂಜೆ ಉಳೆಪಾಡಿ ಗ್ರಾಮಗಳನ್ನು ಒಳಗೊಂಡ ಐಕಳ ಗ್ರಾಮ ಪಂಚಾಯಿತಿಯ 2014-15ನೇ ಪ್ರಥಮ ಸಾಲಿನ ಗ್ರಾಮ ಸಭೆ ಗುರುವಾರ ಪಂಚಾಯಿತಿ ಸಭಾ ಭವನದಲ್ಲಿ ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಅಧ್ಯಕ್ಷತೆಯಲ್ಲಿ ನಡೆಯಿತು.
ಗ್ರಾಮದಲ್ಲಿ ದಾರಿ ದೀಪ ಅವ್ಯವಸ್ಥೆ, ರಸ್ತೆ ನಾದುರಸ್ತಿ ಹಾಗೂ ಅಭಿವೃದ್ಧಿ ಯಾಕೆ ಮಾಡುವುದಿಲ್ಲ ಎಂದು ಪ್ರಶ್ನೆಗಳ ಮೇಲೆ ಪ್ರಶ್ನೆಗಳು ಗ್ರಾಮಸ್ಥರಿಂದ ಎದುರಾದಾಗ ಐಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ದಿವಾಕರ ಚೌಟ ಗ್ರಾಮಸ್ಥರಲ್ಲಿ ವಿನಂತಿಸಿ ಐಕಳ ಗ್ರಾಮ ಪಂಚಾಯಿತಿಗೆ ಉಳ್ಳವರಿಂದ ಹಾಗೂ ವಿದ್ಯಾವಂತರಿಂದಲೇ ತೆರಿಗೆ ಬಾಕಿ ಇದೆ. ಒಟ್ಟಾರೆ ಸುಮಾರು 5 ಲಕ್ಷದಷ್ಟು ತೆರಿಗೆ ಗ್ರಾಮಸ್ಥರಿಂದ ಬರಲು ಬಾಕಿ ಇದೆ. ಕೆಲವರು ಹಲವು ವರ್ಷಗಳಿಂದ ತೆರಿಗೆ ಬಾಕಿ ಇರಿಸಿದ್ದಾರೆ ಹೀಗಾದರೆ ಗ್ರಾಮಸ್ಥರಿಗೆ ಮೂಲ ಸೌಕರ್ಯ ನೀಡಲು ಕಷ್ಟ ಸಾಧ್ಯವಾಗಿದೆ ದಯವಿಟ್ಟು ತಿಂಗಳೊಳಗೆ ತೆರಿಗೆ ಪಾವತಿಸಿ. ಸರಕಾರದ ಯೋಜನೆಗಳ ಅನುದಾನವನ್ನು ಹೆಚ್ಚು ತರಲು ಸದಸ್ಯರು ಪ್ರಯತ್ನಿಸುತ್ತಿದ್ದೇವೆ ಎಂದು ಪಂಚಾಯಿತಿ ಆಡಳಿತದ ಪರವಾಗಿ ಮಾತನಾಡಿದರು.

ತೀವ್ರ ಸಮಸ್ಯೆಗಳ ಬಗ್ಗೆ ಒತ್ತು ಕೊಟ್ಟು ಕಾರ್ಯನಿರ್ವಹಿಸಬೇಕು ಅಲ್ಲದೆ ಗ್ರಾಮ ಸಭೆ ಇದೆ ಎಂದು ಗ್ರಾಮಸ್ಥರಿಗೆ ಸರಿಯಾಗಿ ಮಾಹಿತಿ ನೀಡದ ಪಂಚಾಯಿತಿಯು ಅಭಿವೃದ್ಧಿಯಲ್ಲಿ ರಾಜಕೀಯ ತರುತ್ತಿದೆ. ದಾಮಸ್‌ಕಟ್ಟೆ- ಸುಂಕದ ಕಟ್ಟೆ ರಸ್ತೆ ಹಲವಾರು ವರ್ಷಗಳು ಆದರೂ ಡಾಮರೀಕರಣಗೊಂಡಿಲ್ಲ ಇದು ಹರಿಜನ ಗಿರಿಜನರ ಕಾಲನಿಗೂ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಾಗಿದೆ. ಹಾಳಾಗದ ರಸ್ತೆಗೆ ತುರ್ತಾಗಿ ಡಾಮರೀಕರಣ ಕಾಂಕ್ರೀಟಿಕರಣ ಆಗುತ್ತದೆ ಎಂದು ಗ್ರಾಮಸ್ಥರ ಪರವಾಗಿ ದುರ್ಗಾಪ್ರಸಾದ್ ಹೆಗ್ಡೆ ಮಾತನಾಡಿದರು.
ಏಳಿಂಜೆ, ಕಮ್ಮಾಜೆ, ಮುಂಚಿಗುಡ್ಡೆ ಪ್ರದೇಶದಲ್ಲಿ ಹದಗೆಟ್ಟ ರಸ್ತೆಗಳಿವೆ, ಕೈ ಕೊಡುವ ವಿದ್ಯುತ್ ಅಲ್ಲದೆ ಉಳೆಪಾಡಿ ಪರಿಸರದಲ್ಲಿ ವಿದ್ಯುತ್ ಹಳೇ ತಂತಿಗಳನ್ನು ಬದಲಾಯಿಸಲು ಈ ಹಿಂದೆ ಹಲವಾರು ಬಾರಿ ಮನವಿ ಮಾಡಿದರು ಸೂಕ್ತ ಸ್ಪಂದನೆ ಇಲ್ಲ. ಗ್ರಾಮ ಸಭೆಯಲ್ಲಿನ ನಿರ್ಣಯಗಳಿಗೆ ಈಗೀಗ ಬೆಲೆಯಿಲ್ಲದೇ ದೊಂಬರಾಟದಂತೆ ನಡೆಯುತ್ತಿದೆ ಎಂದು ಗ್ರಾಮಸ್ಥ ರಘುರಾಮ ಶೆಟ್ಟಿ ಅವರ ವ್ಯಾಖ್ಯಾನ.
ಪಡಿತರ ಚೀಟಿ ವ್ಯವಸ್ಥೆಯ ಬಗ್ಗೆ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ಸಿಗದೇ ಇರುವುದರಿಂದ ಗೊಂದಲಗಳು ಹೆಚ್ಚಾಗಿದೆ. ಪಡಿತರ ವ್ಯವಸ್ಥೆಯಲ್ಲಿನ ಆನ್ ಲೈನ್ ವ್ಯವಸ್ಥೆಯ ಬಗ್ಗೆ ಸರಿಯಾದ ಮಾಹಿತಿ ಸಿಗಬೇಕಾಗಿದೆ, ಎಪಿಕ್ ಕಾರ್ಡ್ ಆಧಾರ್ ಕಾರ್ಡ್ ಎಸ್ ಎಮ್.ಎಸ್. ಜೋಡಣೆ ಸಮಸ್ಯೆಗಳ ಬಗ್ಗೆ ನಿಖರ ಮಾಹಿತಿನೀಡಿ ಎಂದು ಗ್ರಾಮಸ್ಥರು ಸಭೆಯಲ್ಲಿ ಒತ್ತಾಯಿಸಿದರು.

ಸಾರ್ವಜನಿಕವಾಗಿ ಉಪಯೋಗಕ್ಕೆ ಪಂಚಾಯಿತಿಯು ಖಾಸಗಿ ರಸ್ತೆಯನ್ನು ಕಾಂಕ್ರೀಟೀಕರಣ ಮಾಡಿದ್ದು ಪಂಚಾಯಿತಿಯು ಇದನ್ನು ಸ್ವಾಧೀನ ಪಡಿಸಿದಿದ್ದರೆ ದುರ್ಬಳಕೆ ಆಗುವ ಸಂಭವವಿದೆ. ಕುಂಟುತ್ತಾ ಸಾಗುವ ಬಹುಗ್ರಾಮ ಯೋಜನೆ, ಕೆಟ್ಟಿರುವ ಶುಂಠಿಪಾಡಿ ಭಾಗದ ರಸ್ತೆ, ಕುದ್ರಿಪದವು ಚರಂಡಿ ಸಮಸ್ಯೆ, ಮೂಲ್ಕಿಯ ಕಾರ್ನಾಡು ರೈತ ಸಂಪರ್ಕ ಕೇಂದ್ರದಲ್ಲಿ ಬಿತ್ತನೆ ಬೀಜದ ಅಭಾವ ಹಾಗೂ ಮುಚ್ಚಿರುವ ಕೇಂದ್ರದ ಬಗ್ಗೆ ಚರ್ಚೆ ನಡೆಯಿತು.
ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಎನ್. ರಾಜಣ್ಣ ನೋಡೆಲ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.
ಜಿಲ್ಲಾ ಪಂಚಾಯಿತಿ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯ ನೆಲ್ಸನ್ ಲೋಬೋ, ಪಿಡಿಒ ನಾಗರತ್ನ ಜಿ. ಕಾರ್ಯದರ್ಶಿ ರವೀಂದ್ರ ಪೈ, ಪಂಚಾಯತ್ ರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಗ್ರಾಮ ಲೆಕ್ಕಿಗ ಮಂಜುನಾಥ್, ಪಶು ಸಂಗೋಪನ ಇಲಾಖೆಯ ಸತ್ಯ ಶಂಕರ್ ಮತ್ತಿತರರು ಉಪಸ್ಥಿತರಿದ್ದರು. ವಿವಿಧ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದರು.

Kinnigoli-26061402

 

Comments

comments

Comments are closed.

Read previous post:
Kinnigoli-26061401
ಬಳ್ಕುಂಜೆ ಗ್ರಾಮ ಸಭೆ : ಉಪ್ಪು ನೀರು ಸಮಸ್ಯೆ

ಬಳ್ಕುಂಜೆ : ಬಳ್ಕುಂಜೆ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಲ್ಲೂರು, ಕವತ್ತಾರು, ಕರ್ನಿರೆ, ಹಾಗೂ ಬಳ್ಕುಂಜೆ ಗ್ರಾಮಗಳ 2014-15ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಬಳ್ಕುಂಜೆ ವಿಠೋಬಾ ರಕುಮಾಯಿ...

Close