ಕಟೀಲು : ಸೀಯಾಳಾಭಿಷೇಕದ ಬಗ್ಗೆ ಗೊಂದಲ

ಕಿನ್ನಿಗೋಳಿ: ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಅತ್ತೂರು ಕೊಡೆತ್ತೂರು ಸಂಬಂಧಪಟ್ಟ ಮಾಗಣೆಯಾಗಿದೆ. ದೇವಳದ ಜಾತ್ರೆ ಉತ್ಸವಾದಿಗಳು ಹಾಗೂ ರಾಶಿ ಪೂಜೆಯಲ್ಲಿ ಈ ಮಾಗಣೆಗೆ ಸಂಬಂಧಪಟ್ಟ ಗುತ್ತು ಮನೆತನದವರು ಮತ್ತು ಭಕ್ತಾಧಿಗಳ ಪಾಲ್ಗೊಳ್ಳುವಿಕೆ ಹಾಗೂ ಕೂಡುವಿಕೆ ಅನಾದಿಕಾಲದಿಂದಲೂ ನಡೆದು ಬರುತಿದ್ದು ಪ್ರತೀ ವರ್ಷ ಜೂನ್ ತಿಂಗಳಲ್ಲಿ ಅತ್ತೂರು ಕೊಡೆತ್ತೂರು ಮಾಗಣೆಗೆ ಸಂಬಂಧಪಟ್ಟ ಗ್ರಾಮಸ್ಥರು ಮೆರವಣಿಗೆಯ ಮೂಲಕ ದೇವಳಕ್ಕೆ ಬಂದು ಗ್ರಾಮದ ಒಳಿತಿಗೆ ಹಾಗೂ ಲೋಕ ಶಾಂತಿಗಾಗಿ ದೇವರಿಗೆ ಹರಕೆ ಮತ್ತು ಕಾಣಿಕೆ ಹಾಕಿ ಸೀಯಾಳಾಭಿಷೇಕ ನೇರವೇರಿಸುವುದು ಸಂಪ್ರದಾಯವಾಗಿರುತ್ತದೆ.
ಅನಾದಿಕಾಲದಿಂದಲೂ ಹಿರಿಯರಿಂದ ಅನುಸರಿಸಿದ ಸಂಪ್ರದಾಯಬದ್ಧ ದಾರ್ಮಿಕ ವಿಧಿ ವಿಧಾನ ಇದಾಗಿದ್ದು ಹಗಲು ಹೊತ್ತಿನಲ್ಲಿಯೇ ಊರವವರ ಸಮ್ಮುಖದಲ್ಲಿ ದಾರ್ಮಿಕ ವಿಧಿ ನೇರವೇರುತ್ತಿದ್ದು ಈದೀಗ ಏಕಾಎಕಿ ಸಂಪ್ರದಾಯ ಮುರಿಯುವ ಹುನ್ನಾರ ದೇವಳದಿಂದ ಆಗುತ್ತಿದೆ ಎಂದು ಊರ ಗ್ರಾಮಸ್ಥರು ಕಟೀಲು ದೇವಳದ ಆಡಳಿತಾಧಿಕಾರಿ ನಿಂಗಯ್ಯ ಅವರಲ್ಲಿ ದೂರಿ ಹಿಂದಿನ ಸಂಪ್ರದಾಯವನ್ನೇ ಉಳಿಸುವಂತೆ ಮನವಿ ನೀಡಿದರು.
ಈ ಸಂದರ್ಭ ಕೊಡೆತ್ತೂರು ಹೊಸಮನೆ ದೇವಿಪ್ರಸಾದ್ ಶೆಟ್ಟಿ, ಮೂಡ್ರಗುತ್ತು ರಘುನಾಥ ಶೆಟ್ಟಿ, ಅತ್ತೂರು ಗುತ್ತು ಪ್ರಸನ್ನ ಎಲ್. ಶೆಟ್ಟಿ, ಕುಡ್ತಿಮಾರುಗುತ್ತು ಸುಖೀರಾಜ್ ಶೆಟ್ಟಿ, ರಾಮಚಂದ್ರ ಶೆಟ್ಟಿ ಕೆಮ್ರಾಲ್ ಗುತ್ತು, ಜಯರಾಮ ಮುಕ್ಕಾಲ್ದಿ ಕೊಡೆತ್ತೂರು, ಪ್ರೇಮ್ ರಾಜ್ ಶೆಟ್ಟಿ, ಜಯಪಾಲ್ ಶೆಟ್ಟಿ, ಮಿತ್ತಬೈಲ್ ಗಣೇಶ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

Kinnigoli 27061403

Comments

comments

Comments are closed.

Read previous post:
Kinnigoli 27061402
ಕಿನ್ನಿಗೋಳಿ : ಪರಿಹಾರ ನಿಧಿಯಿಂದ ಸಹಾಯ

ಕಿನ್ನಿಗೋಳಿ: ಕರ್ನಾಟಕ ಸರಕಾರದ ಮುಖ್ಯ ಮಂತ್ರಿ ಪರಿಹಾರ ನಿಧಿಯಿಂದ ಶೋಭ ರಾವ್ ಅವರಿಗೆ ವೈದ್ಯಕೀಯ ಚಿಕಿತ್ಸೆಗಾಗಿ 25000 ರೂ. ಗಳ ಚೆಕ್ ನ್ನು ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ...

Close