ಸಮಾಜಸೇವೆಯೇ ಸಾರ್ಥಕ ಬದುಕು

ಕಿನ್ನಿಗೋಳಿ : ಸಾರ್ಥಕ ಬದುಕು ಕಂಡುಕೊಳ್ಳಲು ಸಮಾಜ ಸೇವೆ ಅತ್ಯುತ್ತಮ ಮಾರ್ಗವಾಗಿದ್ದು ಸಹಾಯ ಪ್ರವೃತ್ತಿ, ವ್ಯಕ್ತಿತ್ವ ವಿಕಸನದ ಮೂಲಕ ಸಮಾಜವನ್ನು ಬಲಪಡಿಸಬೇಕು ಎಂದು ಕಿನ್ನಿಗೋಳಿ ರೋಟರಿ ಅಧ್ಯಕ್ಷ ರಾಬರ್ಟ್ ರುಸಾರಿಯೋ ಹೇಳಿದರು.
ಕಿನ್ನಿಗೋಳಿಯ ಸಹಕಾರ ಸೌಧದಲ್ಲಿ ನಡೆದ ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷರ ಸಂಜೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿಕಟಪೂರ್ವ ಅಧ್ಯಕ್ಷ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ರೋಟರಿ ಕಾರ್ಯದರ್ಶಿ ಜೊಕಿಂ ಸಿಕ್ವೇರಾ, ನಿಯೋಜಿತ ಅಧ್ಯಕ್ಷ ವಿಲಿಯಂ ಸಿಕ್ವೇರಾ, ನಿಯೋಜಿತ ಕಾರ್ಯದರ್ಶಿ ಗಂಗಾಧರ ಶೆಟ್ಟಿ ಉಪಸ್ಥಿತರಿದ್ದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli 29061403

Comments

comments

Comments are closed.