ಶಿಸ್ತು ಮತ್ತು ಸಂಸ್ಕಾರದ ಬದುಕು ಕಲ್ಪಿಸಬೇಕು

ಕಿನ್ನಿಗೋಳಿ: ಮಕ್ಕಳು ಮತ್ತು ಯುವಜನರಿಗೆ ಶಿಸ್ತು ಮತ್ತು ಸಂಸ್ಕಾರದ ಬದುಕನ್ನು ಕಲ್ಪಿಸುವಲ್ಲಿ ಪೋಷಕರು ಮಹತ್ತರ ಪಾತ್ರ ವಹಿಸಿದಾಗ ಸದೃಡ ಸಮಾಜದ ನಿರ್ಮಾಣ ಸಾಧ್ಯ ಎಂದು ಮೂಡಬಿದ್ರಿ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಮೊಕ್ತೇಸರ ಸುಂದರ ಆಚಾರ್ಯ ಹೇಳಿದರು.
ಕಿನ್ನಿಗೋಳಿಯ ರಾಜರತ್ನಪುರ ಸರಾಫ್ ಅಣ್ಣಯ್ಯಾಚಾರ್ಯ ಸಭಾ ಭವನದಲ್ಲಿ ನಡೆದ ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಹಾಗೂ ಕಾಳಿಕಾಂಬ ಮಹಿಳಾ ವೃಂದದ 2014-15 ನೇ ಸಾಲಿನ ನೂತನ ಪದಾಧಿಕಾರಿಗಳ ಪದವಿ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು.
ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘದ ನೂತನ ಅಧ್ಯಕ್ಷ ದಿನೇಶ್ ಆಚಾರ್ಯ ಹಾಗೂ ಕಾಳಿಕಾಂಬಾ ಮಹಿಳಾ ವೃಂದದ ನೂತನ ಅಧ್ಯಕ್ಷೆ ಹೇಮ ವಿಶ್ವನಾಥ ಆಚಾರ್ಯ ಅಧಿಕಾರ ಸ್ವೀಕರಿಸಿದರು.
ಮೂಡಬಿದ್ರಿ ಭಾರತೀಯ ಜನತಾ ಪಕ್ಷದ ಯುವ ಮಹಿಳಾಮೋರ್ಚಾ ಅಧ್ಯಕ್ಷೆ ಗೀತಾ ಯೋಗೀಶ್ ಆಚಾರ್ಯ, ಕೊಲಕಾಡಿ ಶ್ರೀ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರ ಜಗದೀಶ ಆಚಾರ್ಯ, ಸಭಾಭವನ ಸಮಿತಿ ಅಧ್ಯಕ್ಷ ಪ್ರಥ್ವಿರಾಜ್ ಆಚಾರ್ಯ, ಮಹಿಳಾ ವೃಂದದ ನಿರ್ಗಮನ ಅಧ್ಯಕ್ಷೆ ರತ್ನಾ ಪ್ರಭಾಕರ ಆಚಾರ್ಯ ಉಪಸ್ಥಿತರಿದ್ದರು.
ಕೆ.ಬಿ.ಸುರೇಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli 29061402

Comments

comments

Comments are closed.

Read previous post:
Kinnigoli 29061401
ನಾಯಕತ್ವ ಸಂಘ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ

ಮೂಲ್ಕಿ: ವಿದ್ಯಾರ್ಥಿ ಜೀವನದಲ್ಲಿ ಸಹಜೀವನ ಸಂಘಟಕನಾತ್ಮಕ ಮನೋಭಾವನೆ ಹಾಗೂ ನಾಯಕತ್ವ ಗುಣಗಳನ್ನು ಹೆಚ್ಚಿಸಲು ಶಾಲಾ ವಿದ್ಯಾರ್ಥಿ ಸಂಘಗಳು ಉತ್ತಮ ವೇದಿಕೆ ನಿರ್ಮಿಸುತ್ತದೆ ಎಂದು ಮೂಲ್ಕಿ ಶ್ರೀ ನಾರಾಯಣ...

Close