ನಾಯಕತ್ವ ಸಂಘ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆ

ಮೂಲ್ಕಿ: ವಿದ್ಯಾರ್ಥಿ ಜೀವನದಲ್ಲಿ ಸಹಜೀವನ ಸಂಘಟಕನಾತ್ಮಕ ಮನೋಭಾವನೆ ಹಾಗೂ ನಾಯಕತ್ವ ಗುಣಗಳನ್ನು ಹೆಚ್ಚಿಸಲು ಶಾಲಾ ವಿದ್ಯಾರ್ಥಿ ಸಂಘಗಳು ಉತ್ತಮ ವೇದಿಕೆ ನಿರ್ಮಿಸುತ್ತದೆ ಎಂದು ಮೂಲ್ಕಿ ಶ್ರೀ ನಾರಾಯಣ ಗುರು ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಡಳಿತಾಧಿಕಾರಿ ಅಡ್ವೆ ರವೀಂದ್ರ ಪೂಜಾರಿ ಹೇಳಿದರು.
ಮೂಲ್ಕಿ ಕಾರ್ನಾಡು ಸಿಎಸ್‌ಐ ಆಂಗ್ಲ ಮತ್ತು ಕನ್ನಡ ಮಾದ್ಯಮ ಪ್ರ್ವಾಢ ಶಾಲೆಯ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.
ಸಂಘಟಕನಾತ್ಮಕ ಮನೋಭಾವನೆ ಹಾಗೂ ನಾಯಕತ್ವ ಗುಣಗಳು ವಿದ್ಯಾರ್ಥಿ ಜೀವನದ ಬಳಿಕವು ವ್ಯಕ್ತಿತ್ವ ವಿಕಸನಗೊಳ್ಲಲು ಹಾಗೂ ಜೀವನದ ವ್ಯವಹಾರಿಕ ಮತ್ತು ಸಂಸಾರಿಕ ಕ್ಷೇತ್ರದಲ್ಲಿ ಉನ್ನತಿಗಳಿಸಲು ಬಹು ಸಹಕಾರಿಯಾಗಿದೆ ಎಂದರು.
ಸಿಎಸ್‌ಐ ಸಮೂಹ ವಿದ್ಯಾ ಸಂಸ್ಥೆಗಳ ಅಧ್ಯಕ್ಷ ರೆ.ಸಂತೋಷ್ ಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಯುಬಿಎಂಸಿ ಶಾಲೆಯ ಮುಖ್ಯ ಶಿಕ್ಷಕಿ ಐರಿನ್ ಶಶಿಕಲ ಅತಿಥಿಯಾಗಿದ್ದರು.
ಈ ಸಂದರ್ಭ ಶಾಲೆಯ ಪ್ರತಿಭಾನ್ವಿತ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಉಮಾವತಿ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.ಹರಿಶ್ಚಂದ್ರ ಎಂ ಸ್ವಾಗತಿಸಿದರು.ಝೀಟಾ ಮೆಂಡೋನ್ಸಾ ನಿರೂಪಿಸಿದರು. ದೀಪಕ್ ವಂದಿಸಿದರು.

Kinnigoli 29061401Bhagyavan Sanil

Comments

comments

Comments are closed.

Read previous post:
Kinnigoli 27061403
ಕಟೀಲು : ಸೀಯಾಳಾಭಿಷೇಕದ ಬಗ್ಗೆ ಗೊಂದಲ

ಕಿನ್ನಿಗೋಳಿ: ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಅತ್ತೂರು ಕೊಡೆತ್ತೂರು ಸಂಬಂಧಪಟ್ಟ ಮಾಗಣೆಯಾಗಿದೆ. ದೇವಳದ ಜಾತ್ರೆ ಉತ್ಸವಾದಿಗಳು ಹಾಗೂ ರಾಶಿ ಪೂಜೆಯಲ್ಲಿ ಈ ಮಾಗಣೆಗೆ ಸಂಬಂಧಪಟ್ಟ ಗುತ್ತು...

Close