ಪಂಚಾಯಿತಿಗೆ ಬೀಗ ಹಾಕಿ

ಕಿನ್ನಿಗೋಳಿ : ಕೆಮ್ರಾಲ್ ಪಂಚಾಯಿತಿ ಆಡಳಿತ ಸುಸ್ಥಿತಿಯಲ್ಲಿದ್ದ ಪಕ್ಷಿಕೆರೆ ಪ್ರಯಾಣಿಕರ ತಂಗುದಾಣವನ್ನು ಕೆಡವಿದ್ದು ಈಗ ಎರಡು ವರ್ಷ ಸಂದರೂ ಹೊಸ ತಂಗುದಾಣ ಮರೀಚಿಕೆಯಾಗಿಯೇ ಉಳಿದಿದೆ. ಕೆಡವಿದ ಬಗ್ಗೆ ಹಾಗೂ ತಂಗುದಾಣ ನಿರ್ಮಿಸುವ ಬಗ್ಗೆ ಸೂಕ್ತ ಸ್ಪಷ್ಟನೆ ನೀಡಬೇಕೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಸಭೆಯ ಎದುರುಗಡೆ ಪ್ರತಿಭಟಿಸಿ ಧರಣಿ ನಿಂತರು. ಅಂಗಡಿ ಮುಂಗಟ್ಟುಗಳಿಗೆ ವ್ಯಾಪಾರಕ್ಕೆ ತೊಂದರೆಯಾಗುತ್ತದೆ ಕ್ಷುಲ್ಲಕ ಕಾರಣ ನೀಡಿ ತಂಗುದಾಣ ಕೆಡವಿದ್ದೀರಿ ಆದರೆ ಇದೇ ರೀತಿ ಬೇರೆ ಅಂಗಡಿಗಳಿಗೆ ಕೂಡ ತೊಂದರೆಯಾಗುವ ಕಟ್ಟಡ ಇದೆಯೆಂದು ತೆಗೆಯುವ ತಾಕತ್ತು ಪಂಚಾಯಿತಿ ಆಡಳಿತಕ್ಕಿದೆಯಾ? ಎಂದು ಕೆಮ್ರಾಲ್ ಗ್ರಾಮಸ್ಥರು ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿಗಾರ್ ಅವರನ್ನು ತರಾಟೆಗೆ ತೆಗೆದುಕೊಂಡ ವಿದ್ಯಮಾನ ಸೋಮವಾರ ಕೆಮ್ರಾಲ್ ಗ್ರಾಮ ಪಂಚಾಯಿತಿ 2014-15 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯಲ್ಲಿ ನಡೆಯಿತು.

ಗ್ರಾಮಸ್ಥರ ಪ್ರಶ್ನೆಗೆ ನಿರುತ್ತರರಾದ ಕೆಮ್ರಾಲ್ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊನೆಗೆ ಜಿ.ಪಂ.ಸದಸ್ಯ ಈಶ್ವರ್ ಕಟೀಲ್ ಅವರ ಮದ್ಯಸ್ಥಿಕೆಯಿಂದ ಮುಂದಿನ ಗ್ರಾಮಸಭೆಯೊಳಗೆ ನೂತನ ಬಸ್ಸು ತಂಗುದಾಣ ನಿರ್ಮಾಣ ಮಾಡುತ್ತೇವೆ ಎಂಬ ಭರವಸೆಯೊಂದಿಗೆ ತಾರ್ಕಿಕ ಅಂತ್ಯಗೊಂಡಿತು.

ಕಾಪಿಕಾಡು ರಸ್ತೆ ಡಾಮರೀಕರಣ ಯಾಕೆ ಆಗಿಲ್ಲ ಉಪಯೋಗವಿದ್ದ ಕಡೆ ಕಾಮಗಾರಿ ಸರಿಯಾಗಿ ಮಾಡುತ್ತಿಲ್ಲ ಯಾಕೆ? ಪಕ್ಷಿಕೆರೆ ಸುರಗಿರಿ ರಸ್ತೆ ಹದಗೆಟ್ಟಿದ್ದು ಐದು ಲಕ್ಷ ರೂಪಾಯಿಗಳ ಕಾಮಗಾರಿ ನಡೆದಿದ್ದು ರಸ್ತೆ ಮಧ್ಯದಲ್ಲಿ ಮೋರಿಗಾಗಿ ಸ್ಥಳ ಬಿಟ್ಟಿದ್ದು ಇದನ್ನು ಯಾವ ಉದ್ದೇಶಕ್ಕಾಗಿ ಖಾಲಿ ಬಿಟ್ಟಿದ್ದೀರಾ??? ಎಂಬ ಪ್ರಶ್ನೆ ಅನುದಾನ ಕಡಿಮೆ ಬಂದಿದೆ ಎಂದು ಉತ್ತರ ದೊರಕಿದಾಗ ಆಕ್ರೋಶಗೊಂಡ ಗ್ರಾಮಸ್ಥರು ಪಂಚಾಯಿತಿಗೆ ಅನುದಾನ ಸರಿಯಾಗಿ ತರಲಾಗದಿದ್ದರೆ ಪಂಚಾಯಿತಿಗೆ ಬೀಗ ಹಾಕಿ ಎಂದು ಲೇವಡಿ ಮಾಡಿದರು.

ಪಂಜದ ಉಲ್ಯದ ನೆರೆಪೀಡಿತ ಪ್ರದೇಶದವರಿಗೆ ಮನೆ ನಿವೇಶನ ಹಂಚುವ ಬದಲು ಇತರರು ಮನೆ ಕಟ್ಟುವ ಹುನ್ನಾರದಲ್ಲಿದ್ದಾರೆ. ಕಳೆದ ಆರು ವರ್ಷಗಳಿಂದ ಇದು ನಡೆಯುತ್ತಿದೆ ಪಂಚಾಯಿತಿ ಯವುದೇ ಕ್ರಮ ಕೈಗೊಳ್ಳಿಲ್ಲ ಯಾಕೆ ಅರ್ಹರಿಗೆ ಮಾತ್ರ ಬೂಮಿ ನೀಡಿ ಎಂದು ಕಂದಾಯ ಇಲಾಖೇಯನ್ನು ಹಿಗ್ಗಾ ಮುಗ್ಗ ಪ್ರಶ್ನಿಸಿದರು.
ಗುಂಪು ಮನೆ ನಿವೇಶನಗಳಿಗೆ ಪರವಾನಿಗೆ ನೀಡುವಾಗ ಸರಿಯಾದ ಗಟಾರ ಚರಂಡಿ ವ್ಯವಸ್ಥೆ ಗಮನಿಸಬೇಕು ಇಲ್ಲದಿದ್ದಲ್ಲಿ ನಮ್ಮ ತೋಟ ಹಾಗೂ ಗದ್ದೆಗಳಿಗೆ ಮಲೀನ ನೀರು ಹರಿದು ಬರುವ ಸಾಧ್ಯತೆ ಇದೆಯೆಂದು ಗ್ರಾಮಸ್ಥರು ಹೇಳಿದರು. .

ಕಾಫಿಕಾಡು ಮತ್ತು ಕೊಯಿಕುಡೆ ಪರಿಸರದಲ್ಲಿ ಕುಡಿಯುವ ನೀರಿನಲ್ಲಿ ಮಣ್ಣು ಮಿಶ್ರಿತ ನೀರು ನಳ್ಳಿಯಲ್ಲಿ ಬರುತ್ತಿದ್ದೆ ಎಂದು ಗ್ರಾಮಸ್ಥರೊರ್ವರು ಸಭೆಗೆ ತೋರಿಸಿ ಅಧ್ಯಕ್ಷರ ಗಮನ ಸೆಳೆದರು.
ಪಂಜ ಸರಕಾರಿ ಶಾಲೆಗೆ ಮುಖ್ಯೋಪಾದ್ಯಾಯರ ನೇಮಕ, ಸರಕಾರಿ ಶಾಲೆಯ ಆವರಣ ಗೋಡೆ ಕಟ್ಟುವ ಬಗ್ಗೆ ಗೊಂದಲದ ಚರ್ಚೆ ನಡೆಯಿತು.

ನೋಡಲ್ ಅಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್ ನಾಗರಾಜ ಕಾರ್ಯ ನಿರ್ವಹಿಸಿದರು. ಕಿನ್ನಿಗೋಳಿ ಮೆಸ್ಕಾಂ ಅಧಿಕಾರಿ ಇಲ್ಯಾಸ್, ತಾಲೂಕು ಪಂಚಾಯಿತಿ ಸದಸ್ಯೆರಾದ ಸಾವಿತ್ರಿ ಜಿ. ಸುವರ್ಣ, ಬೇಬಿ ಸುಂದರ ಕೋಟ್ಯಾನ್, ಪಿಡಿಒ ರಮೇಶ್ ರಾಥೋಡ್, ಪಂಚಾಯಿತಿರಾಜ್ ಇಂಜೀನಿಯರ್ ಪ್ರಶಾಂತ್ ಆಳ್ವ, ಗ್ರಾಮ ಕರಣಿಕ ಲೋಕೇಶ್, ಕೆಮ್ರಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಬಾಸ್ಕರ್ ಮತ್ತಿತರರು ಉಪಸ್ಥಿತರಿದ್ದರು.

Kinnigoli-02071402 Kinnigoli-02071403 Kinnigoli-02071404

Comments

comments

Comments are closed.