ಪೊಂಪೈ ಪ. ಪೂ. ಕಾಲೇಜು ಸಂಘ ಚಟುವಟಿಕೆಗಳ ಉದ್ಘಾಟನೆ

ಕಿನ್ನಿಗೋಳಿ : ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ಪಠ್ಯದೊಂದಿಗೆ ಪಠ್ಯಪೂರಕ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಅವರಲ್ಲಿ ಆತ್ಮಸ್ಥೈರ್ಯ ತುಂಬಿ ಜೀವನವನ್ನು ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಬೆಳೆಯುತ್ತದೆ ಎಂದು ಯುಗಪುರುಷದ ಕೆ. ಭುವನಾಭಿರಾಮ ಉಡುಪ ಹೇಳಿದರು.
ಕಿನ್ನಿಗೋಳಿಯ ತಾಳಿಪಾಡಿ ಪೊಂಪೈ ಪದವಿ ಪೂರ್ವ ಕಾಲೇಜಿನ ೨೦೧೪-೧೫ನೇ ಶೈಕ್ಷಣಿಕ ವರ್ಷದ ವಿವಿಧ ಕ್ಲಬ್ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಪೊಂಪೈ ಪ. ಪೂ. ಕಾಲೇಜು ಪ್ರಿನ್ಸಿಪಾಲ್ ಫಾ| ಜೆರೋಮ್ ಡಿಸೋಜ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕಾಲೇಜಿನ ಭಿತ್ತಿಪತ್ರಿಕೆಯಲ್ಲಿ ವರ್ಷದುದ್ದಕ್ಕೂ ಪ್ರಕಟಿಸಲಾಗುತ್ತಿದ್ದ ಬರಹಗಳ ಪುಸ್ತಕರೂಪ “ಸಿರಿಗಂಧ”ವನ್ನು ಬಿಡುಗಡೆಗೊಳಿಸಿದರು. ವಿವಿಧ ಕ್ಲಬ್‌ಗಳ ಸಮನ್ವಯಕಾರರಾದ ಶ್ರೀ ಅನಂತ ಮೂಡಿತ್ತಾಯ (ಮಾನವಿಕ, ಸಿರಿಗಂಧ), ಜ್ಯೋತಿ ಕಾಮತ್, ರೇಖಾ ಕೆ.(ಹಸಿರುಪಡೆ), ರೋಸ್ ಮರಿಯಾ (ಸಾಂಸ್ಕೃತಿಕ), ಆಲ್ವಿನ್ ಮಿರಾಂದ (ಕ್ರೀಡಾ ಹಾಗೂ ಐಕಫ್), ಜಾಯ್ಸನ್ ಡಿಸೋಜ (ವಿಜ್ಞಾನ ಸಂಘ) ರಾಮಚಂದ್ರ ಭಟ್, ಎಚ್. ಎಸ್. ಗೋಪಾಲ್ ಉಪಸ್ಥಿತರಿದ್ದರು.
ಪ್ರೀತಿ ವೀರಾ ಡಿಸೋಜ, ಬೀನಾ ಕಾರ್ಯಕ್ರಮ ನಿರೂಪಿಸಿದರು.

Kinnigoli-02071401

Comments

comments

Comments are closed.

Read previous post:
Kinnigoli 29061406
ಪುಸ್ತಕ ಲೇಖನ ಸಾಮಗ್ರಿ ವಿತರಣೆ

ಕಿನ್ನಿಗೋಳಿ: ಕಟೀಲು ಬಲ್ಲಣದಲ್ಲಿರುವ ಪ್ರೀತಿಸದನ ಅನಾಥಾಶ್ರಮದ ಶಾಲಾ ಮಕ್ಕಳಿಗೆ ಬ್ಯಾಗ್, ಪುಸ್ತಕ ಲೇಖನ ಸಾಮಗ್ರಿಗಳನ್ನು ಭಾನುವಾರ ಕಿನ್ನಿಗೋಳಿಯ ತಾಳಿಪಾಡಿ ಫ್ರೆಂಡ್ಸ್ ಕ್ರಿಕಟರ‍್ಸ್ ವತಿಯಿಂದ ನೀಡಲಾಯಿತು. ಈ ಸಂದರ್ಭ ಯುಗಪುರುಷದ...

Close