ದ.ಕ.ಜಿ.ಪಂ. ಅಧ್ಯಕ್ಷೆ ಕಟೀಲು ಪರಿಸರ ಅಭಿವೃದ್ದಿ ಪರಿಶೀಲನೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪರಿಸರ ಹಾಗೂ ಕಿನ್ನಿಗೋಳಿ ಸಮೀಪದ ಕೊಲ್ಲೂರು ಬಳಿ ಸುಮಾರು 17 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪರಿಶೀಲಿಸಲು ಬುಧವಾರ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅವರ ನೇತೃತ್ವದ ತಂಡ ಭೇಟಿ ನೀಡಿ ಅಭಿವೃದ್ಧಿ ಕಾಮಾಗಾರಿಗಳನ್ನು ಪರಿಶೀಲಿಸಿದರು.
ಈ ಹಿಂದಿನ ದ.ಕ. ಜಿ. ಪಂ ಅಧ್ಯಕ್ಷರು ಹಾಗೂ ಅಧಿಕಾರಿಗಳು ಕಟೀಲಿಗೆ ಬೇಟಿ ನೀಡಿ ಸಮಸ್ಯೆ ಬಗ್ಗೆ ಅವಲೋಕನ ಮಾಡಿ ಸ್ವಚ್ಚತೆಯ ಬಗ್ಗೆ ಸಲಹೆ ಸೂಚನೆ ನೀಡಿದ್ದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ.
ಕಟೀಲು ದೇವಳದ ಬಳಿಯ ಸಾರ್ವಜನಿಕ ಶೌಚಾಲಯದ ಡ್ರೈನೇಜ್ ಅವ್ಯವಸ್ಥೆ, ಕಾರ್ಯಗತಗೊಳ್ಳದ ಬಯೋಗ್ಯಾಸ್ ಯೋಜನೆ, ಕಟೀಲು ದೇವರಗುಡ್ಡೆ ಬಳಿ ನೂತನವಾಗಿ ೫೦ ಲಕ್ಷ ರೂಗಳ ವೆಚ್ಚದಲ್ಲಿ ನಿರ್ಮಾಣ ಹಂತದಲ್ಲಿರುವ ಅಡುಗೆಗೆ ಬಳಸಿದ, ಕೈತೊಳೆಯುವ ಕಲುಷಿತ ನೀರಿನ ಶುದ್ಧೀಕರಣ ಘಟಕದ ಕಾಮಗಾರಿ, ಕಟೀಲು ದೇವಳ ಫ್ರೌಡ ಶಾಲೆಯ ಹತ್ತಿರದಲ್ಲಿ ಪ್ರವಾಸೋಧ್ಯಮ ಇಲಾಖೆಯ ಯಾತ್ರಿನಿವಾಸದ ಕಳೆದ ಆರು ತಿಂಗಳಿನಿಂದ ಕೇವಲ ಅಡಿಪಾಯದ ಗುಂಡಿ ತೆಗೆದು ಸ್ಥಗಿತಗೊಂಡ ಕಾಮಗಾರಿ, ಬಸ್ ನಿಲ್ದಾಣದ ಬಳಿಯ ಶೌಚಾಲಯ ಹಾಗೂ ಮಾಂಜ ದಲ್ಲಿನ ಗೋಶಾಲೆ ಹಾಗೂ ತ್ಯಾಜ್ಯ ವಿಲೇವಾರಿ ಕಸದ ರಾಶಿಯನ್ನು ಜಿ. ಪಂ. ಅಧ್ಯಕ್ಷರ ತಂಡ ವೀಕ್ಷಿಸಿದರು.

ಮೆನ್ನಬೆಟ್ಟು ಗ್ರಾ. ಪಂ. ಸಹಕಾರದಲ್ಲಿ ಕಟೀಲಿನಲ್ಲಿ ತ್ಯಾಜ್ಯ ನಿರ್ವಹಣೆಯ ಘಟಕ ಸ್ಥಾಪಿಸುವಂತೆ ಯೋಜನೆಯನ್ನು ರೂಪಿಸುವಂತೆ ಜಿ. ಪಂ. ಅಧ್ಯಕ್ಷರು ತಿಳಿಸಿದರು.

Kinnigoli-03071403

ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಜಿ. ಪಂ. ಅಧ್ಯಕ್ಷರ ತಂಡ ಬೇಟಿ

ಕಿನ್ನಿಗೋಳಿ ಸಮೀಪದ ಕೊಲ್ಲೂರಿನ 17 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪರಿಶೀಲನೆ ನಡೆಸಿದ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ. ಕೊಲ್ಲೂರು ಬಹುಗ್ರಾಮ ಯೋಜನೆಯು 2009ರಲ್ಲಿ ಪ್ರಾರಂಭವಾದ ಕಾಮಗಾರಿ ಈಗ 2014 ಬಂದರೂ ಮುಗಿಯದೇ ಇರುವುದರಿಂದ ಗುತ್ತಿಗೆದಾರರನ್ನು ಅಗತ್ಯವಿದ್ದಲ್ಲಿ ಕಪ್ಪುಪಟ್ಟಿಗೆ ಸೇರಿಸಲು ಸಾಧ್ಯತೆ ಇದೆ. ಯೋಜನೆಯ ಕೆಲವು ಕಾಮಗಾರಿ ವೈಫಲ್ಯವಾದರೂ ಯೋಜನೆಯನ್ನು ಅನುಷ್ಟಾನಗೊಳಿಸಿಯೇ ಸಿದ್ಧ. ಕಾಮಗಾರಿ ವಿಳಂಬವಾಗಿದೆ. ಹಾಗೂ ನೀರಿನ ಮೂಲದ ಬಗ್ಗೆ ಕಲ್ಪನೆ ಇಲ್ಲದೆ ಮಾಡಲಾಗಿದೆ ಇನ್ನು ಕೆಲವು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವ ಭರವಸೆಯಿದೆ. ಯೋಜನೆ ವಿಫಲವಾಗದಂತೆ ನಿರಂತರ ಸಭೆಗಳನ್ನು ನಡೆಸಿ ಕ್ರಮ ಕೈಗೊಳ್ಳುತ್ತೇನೆ ಎಂದರು.

ಕುಡಿಯುವ ಯೋಜನೆಗೆ ಉಪ್ಪನೀರಿನ ಸಮಸ್ಯೆ :
ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಶಾಂಭವಿ ನದಿಗೆ ಜಾಕ್‌ವೆಲ್ ನಿರ್ಮಿಸಿ ಅಲ್ಲಿಂದ ನೀರು ಸರಬರಾಜು ಆಗುತ್ತಿದೆ ಆದರೇ ಬೇಸಗೆಯಲ್ಲಿ ಮಟ್ಟುವಿನಲ್ಲಿ ಅಸಮರ್ಪಕ ಕಿಂಡಿ ಅಣೆಕಟ್ಟುವಿನಿಂದಾಗಿ ಉಬ್ಬರವಿಳಿತದ ಸಮಯ ಉಪ್ಪು ನೀರು ಸೋರಿಕೆಯಾಗಿ ನದಿಗೆ ಬರುತ್ತಿದೆ ಇದರಿಂದ ಕೃಷಿಗೆ ಬಳಸಲು ಅಸಾಧ್ಯ ಹಾಗೂ ಕುಡಿಯಲು ಕೂಡಾ ಆಗುತ್ತಿಲ್ಲ ಎಂದು ಬಳಕುಂಜೆ ಗ್ರಾ. ಪಂ. ಅಧ್ಯಕ್ಷ ದಿನೇಶ್ ಪುತ್ರನ್ ಹಾಗೂ ಜಿ. ಪಂ. ಸದಸ್ಯೆ ಆಶಾ ರತ್ನಾಕರ ಸುವರ್ಣ ತಿಳಿಸಿದರು.

ಅಧ್ಯಕ್ಷರ ತಂಡದಲ್ಲಿ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಾಹಣಾಧಿಕಾರಿ ತುಳಸಿ ಮದ್ದನೇನಿ, ದ.ಕ. ಜಿ.ಪಂ. ಉಪಾಧ್ಯಕ್ಷ ಸತೀಶ್ ಕುಂಪಲ, ಮಾಜಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ , ತಾ. ಪಂ. ಉಪಾಧ್ಯಕ್ಷ ಪ್ರಕಾಶ್, ಕಟೀಲು ಜಿ. ಪಂ. ಸದಸ್ಯ ಈಶ್ವರ್ ಕಟೀಲ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ಯಾಮಲಾ ಪಿ. ಹೆಗ್ಡೆ, ಕಟೀಲು ದೇವಳದ ಪ್ರಬಂಧಕ ವಿಜಯಕುಮಾರ್ ಶೆಟ್ಟಿ, ತಾ. ಪಂ. ಉಪಾಧ್ಯಕ್ಷ ಪ್ರಕಾಶ್, ನೆರವು ಹಾಗೂ ನೈರ್ಮಲ್ಯ ಘಟಕದ ಮಂಜುಳಾ, ಮತ್ತಿತರರು ಉಪಸ್ಥಿತರಿದ್ದರು.

Kinnigoli-03071404

Comments

comments

Comments are closed.

Read previous post:
Kinnigoli-03071402
ಮೆನ್ನಬೆಟ್ಟು ಗ್ರಾಮ ಜನಸ್ನೇಹಿ ಯೋಜನೆ

ಕಿನ್ನಿಗೋಳಿ :  ದ.ಕ ಜಿಲ್ಲಾ ಪಂಚಾಯಿತಿ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಪಂಚಾಯಿತಿ ಮಟ್ಟದಲ್ಲಿ ಗ್ರಾಮೀಣ ಜನರ ಸಮಸ್ಯೆ ಅಹವಾಲುಗಳನ್ನು ಬಗೆಹರಿಸಲು ಜಿಲ್ಲಾ ಪಂಚಾಯಿತಿಯಿಂದ ವಿನೂತನ ಯೋಜನೆಯಾದ...

Close