ಸಿಯಾಳಾಭಿಷೇಕ ಗೊಂದಲ ಗ್ರಾಮಸ್ಥರ ಸಭೆ

ಕಿನ್ನಿಗೋಳಿ : ಮಾಗಣೆಯ ಗ್ರಾಮಸ್ಥರನ್ನು ದೂರವಿಟ್ಟು ದೇವಳ ಏಕಾಎಕಿ ಕ್ರಮ ಕೈಗೊಳ್ಳುವುದು ಸರಿಯಲ್ಲ ಗ್ರಾಮಕ್ಕೆ ಅನ್ಯಾಯ ಆದರೆ ಗ್ರಾಮ ದೇವತೆ ಸುಮ್ಮನಿರುವುದಿಲ್ಲ, ದೇವಳದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಕೆಲಸ ಮಾಡಿದ ಮಾಗಣೆಯ ಭಕ್ತರನ್ನು ತಿರಸ್ಕರಿಸುವ ಕೆಲಸ ಮಾಡಬಾರದು. ಎಚ್ಚರಿಕೆಯಿಂದ ಗ್ರಾಮಸ್ಥರು ಮುಕ್ತ ಮನಸ್ಸಿನಿಂದ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ಕೊಡೆತ್ತೂರು ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಕಟೀಲಿನಲ್ಲಿ ಮಾಗಣೆಯ ಭಕ್ತರಿಗೆ ಸಿಯಾಳಾಭಿಷೇಕಕ್ಕೆ ಅವಕಾಶ ನಿರಾಕರಿಸಿದ್ದರ ಹಿನ್ನಲೆಯಲ್ಲಿ ಕಿನ್ನಿಗೋಳಿಯ ಯುಗಪುರುಷ ಸಭಾಂಗಣದಲ್ಲಿ ಮಂಗಳವಾರ ನಡೆದ ಕೊಡೆತ್ತೂರು, ಅತ್ತೂರು, ಎಕ್ಕಾರು ಮಾಗಣೆಯ ಗ್ರಾಮಸ್ಥರ ಸಭೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಅತ್ತೂರುಗುತ್ತು ಪ್ರಸನ್ನ ಎಲ್. ಶೆಟ್ಟಿ ವಿಷಯ ಪ್ರಸ್ತಾಪಿಸಿ ಕಟೀಲಿನಲ್ಲಿ ಸಿಯಾಳಾಭಿಷೇಕ ಗೊಂದಲ ಈ ವರ್ಷ ಪ್ರಾರಂಭವಾಗಿದ್ದು ಸಂಪ್ರದಾಯ ಮುರಿಯುವುದು ಸರ್ವ ಸಮ್ಮತವಲ್ಲ. ಮುಂದಿನ ದಿನದಲ್ಲಿ ಇನ್ನಿತರ ಪಾರಂಪರಿಕ ಸಂಪ್ರದಾಯವನ್ನು ಮುರಿಯುವ ಆತಂಕವಿದೆ ಇದನ್ನು ಮೊದಲು ಸೌಹಾರ್ದತೆಯಲ್ಲಿ ಬಗೆ ಹರಿಸಲು ಪ್ರಯತ್ನ ನಡೆಸಬೇಕು ಎಂದರು.
ಈಶ್ವರ ಕಟೀಲ್ ಮಾತನಾಡಿ ಕಟೀಲು ಕ್ಷೇತ್ರದ ಪಾವಿತ್ರ್ಯಕ್ಕೆ ಎಲ್ಲರೂ ಒಗ್ಗೂಡಬೇಕು ಅದರಂತೆ ಮೊದಲು ಸ್ಥಳೀಯ ಶಾಸಕ, ಸಂಸದ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಪರಿಹಾರ ಪಡೆದುಕೊಳ್ಳೋಣ ಇಲ್ಲದಿದ್ದಲ್ಲಿ ಸಾರ್ವತ್ರಿಕವಾಗಿ ಶಾಂತ ರೀತಿಯ ಪ್ರತಿಭಟನೆ ಮೂಲಕ ಎಚ್ಚರಿಕೆ ನೀಡೋಣ ಎಂದು ಸಲಹೆ ನೀಡಿದಾಗ ಎಲ್ಲರೂ ಸಮ್ಮತಿಸಿದರು.
ಕೊಡೆತ್ತೂರು ಸಂಜೀವ ಶೆಟ್ಟಿ, ಕೆ.ವಿ. ಶೆಟ್ಟಿ, ವೇದವ್ಯಾಸ ಉಡುಪ, ರಘುರಾಮ ಶೆಟ್ಟಿ, ಎಕ್ಕಾರು ನಿತಿನ್ ಹೆಗ್ಡೆ, ಮುರಸದಾಶಿವ ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಕೊಡೆತ್ತೂರು ಹೊಸಮನೆ ದೇವಿಪ್ರಸಾದ್ ಶೆಟ್ಟಿ, ಮೂಡ್ರಗುತ್ತು ರಘುನಾಥ ಶೆಟ್ಟಿ, ಅತ್ತೂರು ಗುತ್ತು ಪ್ರಸನ್ನ ಎಲ್. ಶೆಟ್ಟಿ, ಜಯರಾಮ ಮುಕ್ಕಾಲ್ದಿ ಕೊಡೆತ್ತೂರು ಕೆ. ಭುವನಾಭಿರಾಮ ಉಡುಪ ಮತ್ತಿತರರು ಉಪಸ್ಥಿತರಿದ್ದರು.

 

Comments

comments

Comments are closed.

Read previous post:
Kinnigoli-03071403
ದ.ಕ.ಜಿ.ಪಂ. ಅಧ್ಯಕ್ಷೆ ಕಟೀಲು ಪರಿಸರ ಅಭಿವೃದ್ದಿ ಪರಿಶೀಲನೆ

ಕಿನ್ನಿಗೋಳಿ : ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ ಪರಿಸರ ಹಾಗೂ ಕಿನ್ನಿಗೋಳಿ ಸಮೀಪದ ಕೊಲ್ಲೂರು ಬಳಿ ಸುಮಾರು 17 ಕೋಟಿ ವೆಚ್ಚದ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಪರಿಶೀಲಿಸಲು ಬುಧವಾರ...

Close