ದಾಮಸ್ ಕಟ್ಟೆ ಅಂಗನವಾಡಿ ಅತಂತ್ರ

ಕಿನ್ನಿಗೋಳಿ: ಶೈಕ್ಷಣಿಕ ಪ್ರಗತಿಯಲ್ಲಿ ಕೇವಲ ಪಾಠದ ಬೋಧನೆ, ಮಕ್ಕಳ ಹಾಜರಾತಿಯ ಬಗ್ಗೆ ಶಿಕ್ಷಣ ಇಲಾಖೆ ಕ್ರಮ ಕೈಗೊಂಡರೆ ಸಾಲದು. ಬೌದ್ಧಿಕ ಸಾಧನೆಯ ಜೊತೆಯಲ್ಲೇ ಆರ್ಥಿಕ ಸಾಧನೆ ಮಾಡಿ ಶಾಲೆಗಳ ಸಮಸ್ಯೆಗಳ ಬಗ್ಗೆ ತೀವ್ರ ಗಮನಹರಿಸುವಲ್ಲಿ ಇಲಾಖೆಯ ಶ್ರಮ ಮುಖ್ಯ.

ಸರಕಾರ ಅಂಗನವಾಡಿ ಕೇಂದ್ರಗಳಿಗೆ ಸಾಕಷ್ಟು ಅನುದಾನ ನೀಡಿ ಅದರ ಮುಖಾಂತರ ಮಕ್ಕಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ನೀಡುವ ಉದ್ದೇಶದಿಂದ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತಿದೆ. ಅದರೆ ಹಣ ಖರ್ಚು ಆಗಿದ್ದೇ ಬಂತು ಹೊರತು ಸರಿಯಾಗಿ ಬಳಕೆಯಾಗುತ್ತಿಲ್ಲ ಎನ್ನುವುದಕ್ಕೆ ದಾಮಸ್ ಕಟ್ಟೆ ಅಂಗನವಾಡಿ ಕೇಂದ್ರ ಪ್ರತ್ಯಕ್ಷ ಸಾಕ್ಷಿಯಾಗಿದೆ. ಹಿರಿಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಏನನ್ನೂ ಮಾಡಲಾಗದೇ ಅಸಹಾಯಕ ಸ್ಥಿತಿಯಲ್ಲಿದ್ದಾರೆ ಐಕಳ ಪಂಚಾಯಿತಿ ಹಾಗೂ ಅಂಗನವಾಡಿ ಶಿಕ್ಷಕಿ.
ತಾಳಿಪಾಡಿಯ ಪೊಂಪೈ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ 18 ವರ್ಷಗಳಿಂದ ನಡೆಯುತ್ತಿದ್ದ ಅಂಗನವಾಡಿ ಶಾಲೆಯನ್ನು ಮುಚ್ಚಿ ಇನ್ನೂ ಬೆಳೆಯಬೇಕಾಗಿದ್ದ ಪುಟ್ಟ ಮಕ್ಕಳು ಸಹಿತ ಅಂಗನವಾಡಿ ಶಿಕ್ಷಕರು ಅತಂತ್ರರಾಗಿರುವುದು ಬೆಳಕಿಗೆ ಬಂದಿದೆ.
ಕಿನ್ನಿಗೋಳಿ ಗ್ರಾಮ ಪಂಚಾಯಿತಿಯ ವ್ಯಾಪ್ತಿಗೆ ಒಳಪಟ್ಟ ದಾಮಸ್‌ಕಟ್ಟೆ ಪೊಂಪೈ ಹಿರಿಯ ಪ್ರಾಥಮಿಕ ಶಾಲೆಯ ಒಂದು ಕೋಣೆಯಲ್ಲಿ ಕಾರ್ಯಚರಿಸುತ್ತ್ತಿದ್ದ ಅಂಗನವಾಡಿ ಕಳೆದ ೧೮ ವರ್ಷಗಳಿಂದ ಯಶಸ್ವಿಯಾಗಿ ನಡೆಯುತ್ತಿದ್ದು. ಕಳೆದ ವರ್ಷದಿಂದ ಅಂಗನವಾಡಿಯನ್ನು ಇಲ್ಲಿಂದ ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಶಾಲಾ ಆಡಳಿತ ಮಂಡಳಿ ಕಟ್ಟುನಿಟ್ಟಾಗಿ ಹೇಳಿತ್ತು. ಅಂಗನವಾಡಿಯ ಪುಟ್ಟ ಮಕ್ಕಳ ಅತಂತ್ರ ಸ್ಥಿತಿಯನ್ನು ಕಂಡು ಸ್ಥಳೀಯರು ಶಾಲೆಯ ವಿರುದ್ದ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ. ಆದರೆ ಪ್ರತಿಷ್ಠಿತ ಸಂಸ್ಥೆ ಮತ್ತು ಗ್ರಾಮಸ್ಥರು ಕೂಡ ಸಾವಿರಾರು ರೂಪಾಯಿಗಳ ತೆರಿಗೆ ಪಂಚಾಯತಿಗೆ ಕಟ್ಟಲು ಬಾಕಿ ಇದೆ ಅಲ್ಲದೆ ಕೆಲವರು ಸರಕಾರಿ ಜಾಗದ ದುರ್ಬಳಕೆ ಮಾಡಿ ಅನಧಿಕೃತವಾಗಿ ಸ್ವಾದೀನ ಪಡಿಸುವ ಸಂಭವವಿದೆ. ಬಡ ಮಕ್ಕಳಿಗೆ ಅನ್ಯಾಯವಾಗುವಂತಹ ಯಾವುದೇ ಸಂಘ ಸಂಸ್ಥೆಗಳ ವಿರುದ್ದ ರಾಜಿ ಮಾಡಕೂಡದು ಸೂಕ್ತ ಕ್ರಮ ಕೈಗೊಂಡು ಅಂಗನವಾಡಿ ಮಕ್ಕಳಿಗೆ ಸೌಲಭ್ಯ ಕಲ್ಪಿಸಬೇಕು. ಎಂದು ಗ್ರಾಮಸ್ಥರು ಜೂನ್ 26 ರಂದು ನಡೆದ ಐಕಳ ಪಂಚಾಯಿತಿ ಗ್ರಾಮ ಸಭೆಯಲ್ಲಿ ಎಚ್ಚರಿಸಿದ್ದಾರೆ.
ಈ ನಡುವೆ ಐಕಳ ಪಂಚಾಯಿತಿ ತಾತ್ಕಾಲಿಕ ನೆಲೆಯಲ್ಲಿ ಪಂಚಾಯಿತಿ ಕಟ್ಟಡದ ಒಂದು ಸಣ್ಣ ಕೋಣೆಯಲ್ಲಿ ಅಂಗನವಾಡಿ ಕಟ್ಟಡ ಆರಂಭಿಸಲು ಅನುಮತಿ ನೀಡಿದೆ. ಆದರೆ ಈ ಕೋಣೆ ಕಿರಿದಾಗಿದ್ದು ಅಡುಗೆ ಪರಿಕರಗಳು ಹಾಗೂ ಸರಂಜಾಮುಗಳನ್ನು ಇಡಲು ಜಾಗವಿಲ್ಲದಂತಾಗಿದೆ. ಅಡುಗೆ ಅನಿಲ ಸಿಲಿಂಡರ್ ಕೂಡ ಕೋಣೆಯಲ್ಲೇ ಇದ್ದು ಮಕ್ಕಳು ಸಿಲಿಂಡರ್ ಪಕ್ಕದಲ್ಲೇ ಆಟವಾಡಿಕೊಳ್ಳುತ್ತಿರುವುದು ಅಪಾಯಕ್ಕೆ ದಾರಿ ಮಾಡಿ ಕೊಟ್ಟಂತಿದೆ. ಈ ಸ್ಥಳದಲ್ಲಿ ಮಕ್ಕಳಿಗೆ ಪಾಠ ಮಾಡುವುದು ಅನಿವಾರ್ಯವಾಗಿದೆ. ಬೆಳೆಯುವ ಮಕ್ಕಳಿಗೆ ಈ ಅವ್ಯವಸ್ಥೆ ಪರಿಸರ ಸೂಕ್ತವೆನಿಸದು. ಮೂಲ ಸೌಲಭ್ಯವಿಲ್ಲದೆ ಅಂಗನವಾಡಿ ಶಿಕ್ಷಕರಿಗೆ ಎನೂ ಕ್ರಮ ಕೈಗೊಳ್ಳುವುದೆಂದು ತೋಚುತ್ತಿಲ್ಲ. ಕೂಡಲೇ ಅತಂತ್ರ ಮಕ್ಕಳಿಗೆ ಸೂಕ್ತವಾದ ಅಂಗನವಾಡಿ ಕಟ್ಟಡ ಒದಗಿಸಬೇಕೆಂದು ಸ್ಥಳಿಯರು ಒತ್ತಾಯಿಸಿದ್ದಾರೆ.
ಇಲ್ಲಿಯ ತನಕ ಅಂಗನವಾಡಿ ಕಿನ್ನಿಗೋಳಿ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದು, ಇದು ಇನ್ನೊಂದು ಸಮಸ್ಯೆಯನ್ನು ತಂದಿಟ್ಟಿದೆ. ಅಂಗನವಾಡಿಗೆ ಸೂಕ್ತ ಸ್ಥಳ ನೀಡುವುದು ಸರಕಾರದ ಕರ್ತವ್ಯವಾಗಿದ್ದು ಸಮೀಪದ ಸರಕಾರಿ ಸ್ಥಳಗಳು ರಾಜ್ಯ ಹೆದ್ದಾರಿ ರಸ್ತೆಯ ಸಮೀಪವಿರುವುದರಿಂದ ತಾಂತ್ರಿಕ ಸಮಸ್ಯೆಗಳನ್ನು ತಂದೊಡ್ಡಬಹುದು. ಈ ಅಂಗನವಾಡಿ ಕೇಂದ್ರದ ಸ್ಥಿತಿಯನ್ನು ಅಧಿಕಾರಿಗಳು ಕಂಡು ಕೇಳದಂತೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ವಿಪರ್ಯಾಸವೇ ಸರಿ. ಇಲ್ಲಿನ ನಾಗರಿಕರು ತಮ್ಮ ಮಕ್ಕಳ ಆರೋಗ್ಯ ಹಾಗೂ ಪೂರ್ವ ಪ್ರಾಥಮಿಕ ಶಿಕ್ಷಣಕ್ಕಾಗಿ ಅಂಗನವಾಡಿ ಕೇಂದ್ರ ಕಟ್ಟಡವನ್ನು ಸುವ್ಯವಸ್ಥೆಗೊಳಿಸಲು ಬೀದಿಗಿಳಿದು ಹೋರಾಟ ಮಾಡುವ ಮುನ್ನ ಸಂಬಂದಿಸಿದ ಇಲಾಖೆ ಕ್ರಮಕ್ಕೆ ಮುಂದಾಗುವರೆ ಕಾದು ನೋಡಬೇಕಿದೆ.

ಅಗತ್ಯ ವಸ್ತುಗಳಿಗೆ ಜಾಗವಿಲ್ಲ :
ಸರಕಾರ ಪೌಷ್ಟಿಕಾಂಶದ ಕೊರತೆ ನೀಗಲು ಅಗತ್ಯ ಕ್ರಮ ಕೈಗೊಂಡು. ಪೌಷ್ಟಿಕಾಂಶದ ಆಹಾರ ಪದಾರ್ಥಗಳನ್ನು ಪೂರೈಸುತ್ತಿದೆ. ವಸ್ತುಗಳನ್ನು ಇಡಲು ಈ ಕೋಣೆಯಲ್ಲಿ ಸ್ಥಳವಕಾಶವಿಲ್ಲ. ಆಟವಾಡುವ ವಯಸ್ಸಿನಲ್ಲಿ ಕುಣಿದು ಕುಪ್ಪಳಿಸಲು ಸಾಧ್ಯವಿಲ್ಲದೆ, ಆರಾಮ ವಾಗಿ ಕುಳಿತು ಪಾಠವನ್ನೂ ಕೇಳಲಾಗದ ಸ್ಥಿತಿಯಲ್ಲಿರುವ ಚಿಣ್ಣರು. ಆಟ, ಪಾಠ ಜತೆ ಊಟ ಮಾಡಬೇಕಾದ ಅನಿವಾರ್ಯತೆ ಎದುರಿಸುವಂತಾಗಿದೆ

Kinnigoli 04071401

ಇದೀಗ ಅಂಗನವಾಡಿಗೆ ಕಟ್ಟಡ ಇಲ್ಲದಿರುವುದರಿಂದ ಆಶ್ರಯ ನೀಡುವುದು ಅನಿವಾರ್ಯ. ತಾತ್ಕಾಲಿಕವಾಗಿ ಪಂಚಾಯಿತಿ ಕಟ್ಟಡದಲ್ಲಿ ನೆಲೆಯನ್ನು ಕಲ್ಪಿಸಿದ್ದೇವೆ. ಮುಂದಿನ ದಿನಗಳಲ್ಲಿ ಸಂಬಂಧ ಪಟ್ಟ ಇಲಾಖೆ ಹಾಗೂ ಸರಕಾರಕ್ಕೆ ಸೂಕ್ತ ಜಾಗ ಕಲ್ಪಿಸಲು ಮನವಿ ಮಾಡಿದ್ದೇವೆ.

ಪದ್ಮಿನಿ ವಸಂತ್
ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ

ಪಂಚಾಯಿತಿಯು ಅಂಗನವಾಡಿ ಕೇಂದ್ರಕ್ಕೆ ಸೂಕ್ತ ಸರಕಾರಿ ಜಾಗದ ವ್ವವಸ್ಥೆ ಮಾಡಿದಲ್ಲಿ ಜಿಲ್ಲಾ ಪಂಚಾಯಿತಿ ಹಾಗೂ ಶಿಶು ಅಭಿವೃದ್ಧಿ ಇಲಾಖೆಯ ಅನುದಾನದ ಮುಖಾಂತರ ನೂತನ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಿಸಿಲು ಪ್ರಯತ್ನಪಡುತ್ತೇವೆ.
ಆಶಾ ರತ್ನಾಕರ ಸುವರ್ಣ
ದ.ಕ. ಜಿಲ್ಲಾ ಪಂಚಾಯಿತಿ ಸದಸ್ಯೆ

 

Comments

comments

Comments are closed.

Read previous post:
ಸಿಯಾಳಾಭಿಷೇಕ ಗೊಂದಲ ಗ್ರಾಮಸ್ಥರ ಸಭೆ

ಕಿನ್ನಿಗೋಳಿ : ಮಾಗಣೆಯ ಗ್ರಾಮಸ್ಥರನ್ನು ದೂರವಿಟ್ಟು ದೇವಳ ಏಕಾಎಕಿ ಕ್ರಮ ಕೈಗೊಳ್ಳುವುದು ಸರಿಯಲ್ಲ ಗ್ರಾಮಕ್ಕೆ ಅನ್ಯಾಯ ಆದರೆ ಗ್ರಾಮ ದೇವತೆ ಸುಮ್ಮನಿರುವುದಿಲ್ಲ, ದೇವಳದ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಕೆಲಸ ಮಾಡಿದ...

Close