ಪಡುಪಣಂಬೂರು ಗ್ರಾಮಸಭೆ

ಕಿನ್ನಿಗೋಳಿ : ಪಡುಪಣಂಬೂರು ಗ್ರಾಮ ಪಂಚಾಯಿತಿಯ 2014-15 ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಎಸ್. ಕೋಡಿಯ ತೋಕೂರು ಕುಲಾಲ ಸಂಘದ ಸಭಾಭವನದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕೊಲ್ಲು ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
ಪಡುಪಣಂಬೂರು ಗ್ರಾಮ ಪಂಚಾಯತಿಯ ಗ್ರಾಮ ಸಭೆಗೆ ಪುರುಷರಿಗಿಂತ ಮಹಿಳೆಯರು ಹೆಚ್ಚಾಗಿ ಸೇರಿದ್ದು ವಿಶೇಷ.
ಗ್ರಾಮದಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲ ತ್ಯಾಜ್ಯ ಎಲ್ಲೆಂದರಲ್ಲಿ ಬಿಸಾಡುತ್ತಿದ್ದಾರೆ ಸಮರ್ಪಕ ತ್ಯಾಜ್ಯ ವಿಲೇವಾರಿ ಆಗುವಂತೆ ನೋಡಿಕೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.
ಮಂಗಳೂರಿನಿಂದ ಮುಲ್ಕಿಯವರೆಗೆ ತುಂಬೆ ನೀರು ಸರಾಭರಾಜು ಆಗುತ್ತಿದ್ದರೂ ಪಡುಪಣಂಬೂರಿಗೆ ಏಕಿಲ್ಲ?? ಪಡುಪಣಂಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸಾಧ್ಯತೆ ಇಲ್ಲವೇ ಎಂದು ಹಿರಿಯ ಭುಜಂಗ ಶೆಟ್ಟರ ಮಾತಿಗೆ ಅಧಿಕಾರಿಗಳಲ್ಲಿ ಪ್ರತ್ಯುತ್ತರವಿರಲಿಲ್ಲ.
ಎಸ್.ಕೋಡಿಯ ಅಂಗನವಾಡಿ ಸದ್ಯ ಎಸ್.ಕೋಡಿಯ ಸಮಾಜ ಮಂದಿರದಲ್ಲಿ ನಡೆಯುತ್ತಿದ್ದು ಯಾವಾಗ ಸ್ವಂತ ಕಟ್ಟಡ ಮಂಜೂರಾಗಲಿದೆ? ಎಂದು ಗ್ರಾಮಸ್ಥೆ ಕಸ್ತೂರಿ ಪಂಜ ಹೇಳಿದಾಗ ಸರಕಾರಿ ಜಾಗದ ಸಮಸ್ಯೆಯಿದೆ ಮುಂದೆ ಪರಿಸರದಲ್ಲಿ ಸೂಕ್ತ ಸರಕಾರಿ ಜಾಗ ಕಲ್ಪಿಸಲಾಗುವುದು ಅಧಿಕಾರಿಗಳು ಎಂದು ಉತ್ತರಿಸಿದರು.
ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಕೂರಿನಲ್ಲಿ ಕಳೆದ ಕೆಲ ದಿನಗಳಿಂದ ದಿನವೀಡಿ ದಾರಿದೀಪ ಹೊತ್ತಿ ಉರಿಯುತ್ತಿದ್ದರೂ ಕೇಳುವವರಿಲ್ಲದ ಸ್ಥಿತಿ ಇದೆ. ತೋಕೂರು, ತಾಳಿಗುರಿ ಎಂಬಲ್ಲಿ ನಿರುಪಯೋಗಿ ವಿದ್ಯುತ್ ಕಂಬ ತಂತಿಗಳು ಅಪಾಯವನ್ನು ಸೃಷ್ಠಿಸುತ್ತಿದೆ. ವಿದ್ಯುತ್ ಕಡಿತಕ್ಕೆ ಲೆಕ್ಕವೇ ಇಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ತೋಕೂರು ಚರ್ಚ್ ಶಾಲೆ ಬಳಿಯ ರಸ್ತೆಯಲ್ಲಿ ಹೊಂಡ ಗುಂಡಿ ಸಮಸ್ಯೆ, ತೋಕೂರು-ಪಡುಪಣಂಬೂರು ಹದಗೆಟ್ಟ ಕೂಡು ರಸ್ತೆಯ ಅವ್ಯವಸ್ಥೆ ಬಗ್ಗೆ ತೀವ್ರ ಚರ್ಚೆಯಾಯಿತು.
ಪಶುಸಂಗೋಪನ ಇಲಾಖಾಧಿಕಾರಿ ಎನ್. ರಾಜಣ್ಣ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದರು. ಜಿಲ್ಲಾ ಪಂಚಾಯಿತ ಸದಸ್ಯೆ ಆಶಾ ರತ್ನಾಕರ ಸುವರ್ಣ, ತಾಲೂಕು ಪಂಚಾಯಿತಿ ಸದಸ್ಯರಾದ ರಾಜು ಕುಂದರ್, ವನಿತಾ ಉದಯ ಅಮೀನ್ ಗ್ರಮ ಪಂಚಾಯಿತಿ ಉಪಾಧ್ಯಕ್ಷೆ ಕುಸುಮ ಚಂದ್ರಶೇಖರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೃಷ್ಣೇಗೌಡ ಮತ್ತಿತರರು ಉಪಸ್ಥಿತರಿದ್ದರು.

Kinnigoli-04071408

 

Comments

comments

Comments are closed.