ಗೊಂದಲದ ಗೂಡಾದ ಹಳೆಯಂಗಡಿ ಗ್ರಾಮ ಸಭೆ

ಹಳೆಯಂಗಡಿ: ಹಳೆಯಂಗಡಿ ಗ್ರಾಮ ಸಭೆಯು ಗ್ರಾಮಸ್ಥರ ಗದ್ದಲದಿಂದ ಗೊಂದಲದ ಗೂಡಾಗಿ ಪರಿಣಮಿಸಿ ಯಾವ ಸಲಹೆ ಸೂಚನೆಗೂ ನಿರ್ಣಯ ಮಾಡಲು ಸಭೆಯಲ್ಲಿ ಪರದಾಡುವ ಪ್ರಸಂಗ ಅಧಿಕಾರಿಗಳಿಗೆ ಒದಗಿ ಬಂತು. ಸಭೆ ಪೂರ್ವಾಹ್ನ 11ಗಂಟೆಗೆ ನಿಗದಿಯಾಗಿದ್ದರೂ ಸಭೆ ಶುರುವಾಗುವಾಗಲೇ ಹನ್ನೆರಡೂವರೆ ದಾಟಿತ್ತು. ಬಳಿಕ ಅಧಿಕಾರಿಗಳ ಗೈರು ಗ್ರಾಮಸ್ಥರನ್ನು ಕೆರಳಿಸಿತು. ಅಹಾರ ನಾಗರಿಕ ಸರಬರಾಜು,ಜಲಾನಯನ ಇಲಾಖೆ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳ ಗೈರು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿ ಸಭೆ ರದ್ದುಗೊಳಿಸುವ ಹಂತಕ್ಕೂ ಹೋಯಿತು. ಪಾವಂಜೆ ಪರಿಸರದಲ್ಲಿ ಕೃತಕ ನೆರೆಯಿಂದ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದೆ,ಪಡಿತರ ಚೀಟಿ ವಿತರಣೆ ಬಗ್ಗೆ ಗ್ರಾಮಸ್ಥರ ಅಹವಾಲು ಸ್ವೀಕರಿಸುವ ಅಧಿಕಾರಿಗಳೇ ನಾಪತ್ತೆಯಾಗಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಪಾವಂಜೆ ಕೃಷಿಕ ನಾರಾಯಣ “ಹಳೆಯಂಗಡಿಯ ಜನ ಸಜ್ಜನರು, ರೈತರ ಸಮಸ್ಯೆ ಹೇಳಲು ಸುಮಾರು ಇದೆ ಕೇಳಲು ಅಧಿಕಾರಿಗಳಿಗೆ ಪುರುಸೋತ್ತು ಎಲ್ಲಿದೆ ಎಂದು ವ್ಯಂಗ್ಯವಾಡಿದರು.ಪಂಚಾಯತ್ ಸದಸ್ಯರಿಗೆ ಹಾಗೂ ಗ್ರಾಮಸ್ಥರ ವಿರುದ್ದ ವಾಗ್ವಾದ ನಡೆಯಿತು.ಕೊನೆಗೆ ನೋಡಲ್ ಅಧಿಕಾರಿ ಸವಿತ ಮದ್ಯ ಪ್ರವೇಶಿಸಿ ಸಭೆಯನ್ನು ಸಮಾದಾನಗೊಳಿಸಿ ಸಭೆ ಶುರುವಾಗುವಾಗ ಮದ್ಯಾಹ್ನ 2ಗಂಟೆ.
ಮೀನು ಮಾರುಕಟ್ಟೆ ಕೆಡವಿದ ವಿವಾದ
ಪಂಚಾಯತಿನ ಮೀನುಮಾರುಕಟ್ಟೆ ಕೆಡವಿ ರಸ್ತೆ ಮಾಡುತ್ತಿರುವ ಬಗ್ಗೆ ಶೊಬೇಂದ್ರ ಪ್ರಸ್ತಾಪಿಸಿ ಯಾವ ಮೀನುಗಾರರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾರುಕಟ್ಟೆ ಕೆಡವಿದ್ದೀರಿ?ಎಂದು ಕೇಳಿದಾಗ ಕಟ್ಟಡ ಶಿಥಿಲಾವಸ್ಥೆಯಲ್ಲಿದೆ ಎಂದಿ ಪಿಡಿಒರವರಿಂದ ಉತ್ತರ ಬಂತು.ಆಗ ಅದಕ್ಕೆ ಪಂಚಾಯತಿಯಲ್ಲಿ ನಿರ್ಣಯವಾಗಿದೆಯಾ?,ಇದಕ್ಕೆ ಗ್ರಾಮಸ್ಥರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೀರಾ,ನಿಮಗೆ ಇಷ್ಟವಾದ ರೀತಿಯಲ್ಲಿ ರಸ್ತೆ ಮಾಡಿಕೊಂಡು ಹೋಗುತ್ತಿದ್ದೀರ? ಎಂದು ರಾಮಚಂದ್ರ ಶೈಣೈ ಹೇಳಿದಾಗ ಹಿಂದೆ ನಿಮ್ಮ ಅಧ್ಯಕ್ಷರ ಕಾಲದಲ್ಲೇ ಮಾರುಕಟ್ಟೆ ಕೆಡವಿದ್ದಾರೆ ಎಂದು ಆಡಳಿತ ಪಕ್ಷದದವರು ಅಣಕಿಸಿ ಮಾತನಾಡಿದಾಗ ಮಾಜೀ ಅಧ್ಯಕ್ಷರಿಗೂ ಗ್ರಾಮಸ್ಥರಿಗೂ ಜಟಾಪಟಿಯಾಗಿ ಕೆಲ ಕಾಲ ಗೊಂದಲಮಯ ಪರೀಸ್ಥಿತಿ ಉಂಟಾಯಿತು.ಆಗ ಪಿಡಿಒ ಮದ್ಯೆ ಮಾತನಾಡಿ ಗೋಳಿದಡಿ ಗ್ರಾಮಸ್ಥರ 30 ಮನೆಗಳಿಗೆ ರಸ್ತೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದರು,ಅದಕ್ಕೆ ದಾರಿಕೊಡಲು ಮಾರುಕಟ್ಟೆ ಕೆಡವಬೇಕಾಯಿತು ಎಂಬ ಉತ್ತರ ಬಂತು.ಆಗ ಗೊಳಿದಡಿ ಗ್ರಾಮಸ್ಥರಿಗೂ ಇತರರಿಗೂ ಮಾತಿನ ಸಮರ ನಡೆದು ಕೊನೆಗೆ ಸಭೆ ಸೇರಿ ಮಾಡಬೇಕಾದ ರಸ್ತೆಯ ಉದ್ದಗಲ ಕುರಿತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ತೀರ್ಮಾನ ಕೈಗೊಳ್ಳುವ ಕುರಿತು ನಿರ್ಣಯ ಕೈಗೊಳ್ಳಲಾಯಿತು.
ಕಿನ್ನಿಗೋಳಿಯ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಯಾವಾಗ ಅನುಷ್ಠಾನಗೊಳ್ಳುತ್ತದೆ? ಅರ್ದಂಬರ್ದ ಕಾಮಗಾರಿ ನೋಡುವಾಗ ಕಾಮಗಾರಿ ಅನುಷ್ಠಾನಗೊಳ್ಳುವ ಲಕ್ಷಣ ಕಾಣುತ್ತಿಲ್ಲ ಎಂದು ಗ್ರಾಮಸ್ಥ ರಾಮಚಂದ್ರ ಶಣೈ ಛೇಡಿಸಿದರು.

Kinnigoli 06071406Puneethakrishna 

Comments

comments

Comments are closed.

Read previous post:
Kinnigoli 05071401
ಕಡಂದೇಲು ಪುರುಷೋತ್ತಮ ಭಟ್ ನಿಧನ

ಕಿನ್ನಿಗೋಳಿ: ಪ್ರಸ್ತುತ ಇದ್ದ ಯಕ್ಷಗಾನ ಕಲಾವಿದರಲ್ಲಿ ಅತ್ಯಂತ ಹಿರಿಯರೆನಿಸಿದ್ದ ದೇವಿ ಪಾತ್ರಧಾರಿ ಎಂದೇ ಪ್ರಸಿದ್ಧರಾದ ಇತ್ತೀಚಿಗಷ್ಟೇ ಶತ ಶಂಭ್ರಮವನ್ನು ಕಂಡ ಕಡಂದೇಲು ಪುರುಸೋತ್ತಮ ಭಟ್ಟರು ಶನಿವಾರ ಬೆಳಿಗ್ಗೆ ಮಂಗಳೂರಿನ...

Close