ಕಟೀಲು: ರಕ್ತದಾನ ಶಿಬಿರ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ, ಕಟೀಲು ದೇವಳ ಪ್ರೌಢಶಾಲೆ, ಹಳೆ ವಿದ್ಯಾರ್ಥಿ ಸಂಘ, ಮಲ್ಲಿಗೆಯಂಗಡಿ ನಂದಿನಿ ಯುವಕ ವೃಂದ, ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ, ಶ್ರೀ ರಾಮ ಯುವಕ ವೃಂದ ಗೋಳಿಜೋರ, ದೇವರ ಗುಡ್ಡೆ ಗೇಮ್ಸ್ ಕ್ಲಬ್, ಕಟೀಲು ಫ್ರೆಂಡ್ಸ್ ಕ್ಲಬ್, ಕಾರು-ರಿಕ್ಷಾ ಚಾಲಕ ಮಾಲಕರ ಸಂಘ, ನಂದಿನಿ ಬ್ರಾಹ್ಮಣ ಸಭಾ ಕಟೀಲು, ಶ್ರೀ ದುರ್ಗಾಂಬಿಕಾ ಯುವಕ ಯುವತಿ ಮಂಡಲ ಗಿಡಿಗೆರೆ, ಸಜ್ಜನ ಬಂಧುಗಳು ಕಿನ್ನಿಗೋಳಿ, ಸೌತ್ ಕೆನರಾ ಫೋಟೊಗ್ರಾಫರ‍್ಸ್ ಅಸೋಸಿಯೇಷನ್ ಮೂಲ್ಕಿ ವಲಯ, ಕೊಂಡೇಲ ತರುಣ ವೃಂದ, ಕಟೀಲು ಸ್ಪೋರ್ಟ್ಸ್-ಗೇಮ್ಸ್ ಕ್ಲಬ್, ಯಕ್ಷಗಾನ ಬಯಲಾಟ ಸಮಿತಿ ಕುಕ್ಕಟ್ಟೆ, ಕೆ.ಎಂ.ಸಿ ಆಸ್ಪತ್ರೆ ಹಾಗೂ ವೆನ್ಲಾಕ್ ಆಸ್ಪತ್ರೆ ಇವರ ಸಂಯುಕ್ತ ಆಶ್ರಯದಲ್ಲಿ ಬೃಹತ್ ಶಿಬಿರ ಕಟೀಲು ಸರಸ್ವತೀ ಸದನದಲ್ಲಿ ಭಾನುವಾರ ನಡೆಯಿತು. ಕಟೀಲು ದೇವಳ ಅರ್ಚಕ ಹರಿನಾರಾಯಣ ಆಸ್ರಣ್ಣ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲು ರಕ್ತದಾನ ನೀಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಸುಮಾರು 112 ಮಂದಿ ರಕ್ತದಾನ ಮಾಡಿದರು. ಈ ಸಂದರ್ಭ ವಿವಿಧ ಸಂಘ ಸಂಸ್ಥೆಗಳ ಪಧಾಧಿಕಾರಿಗಳು ಸದಸ್ಯರು ಉಪಸ್ಥಿತರಿದ್ದರು.

Kinnigoli 06071401 Kinnigoli 06071402 Kinnigoli 06071403 Kinnigoli 06071404 Kinnigoli 06071405

 

Comments

comments

Comments are closed.

Read previous post:
Kinnigoli 06071406
ಗೊಂದಲದ ಗೂಡಾದ ಹಳೆಯಂಗಡಿ ಗ್ರಾಮ ಸಭೆ

ಹಳೆಯಂಗಡಿ: ಹಳೆಯಂಗಡಿ ಗ್ರಾಮ ಸಭೆಯು ಗ್ರಾಮಸ್ಥರ ಗದ್ದಲದಿಂದ ಗೊಂದಲದ ಗೂಡಾಗಿ ಪರಿಣಮಿಸಿ ಯಾವ ಸಲಹೆ ಸೂಚನೆಗೂ ನಿರ್ಣಯ ಮಾಡಲು ಸಭೆಯಲ್ಲಿ ಪರದಾಡುವ ಪ್ರಸಂಗ ಅಧಿಕಾರಿಗಳಿಗೆ ಒದಗಿ ಬಂತು....

Close