ಮೂಲ್ಕಿ ಶ್ರೀ ವೆಂಕಟರಮಣ ದೇವಳ ಭಜನಾ ಸಂಕೀರ್ಥನೆ

ಮೂಲ್ಕಿ: ಭಜನಾ ಸಂಕೀರ್ಥನೆಯು ಯಜ್ಞ ಯಾಗಾದಿಗಳಂತೆ ಪವಿತ್ರವೂ ಶ್ರೇಷ್ಠವೂ ಆಗಿದ್ದು ಭಜನೆಯಿಂದಾಗುವ ಭಗವತ್‌ಪ್ರೇರಣೆಯಿಂದ ಸರ್ವತ್ರ ಮಂಗಲ ಉಂಟಾಗುತ್ತದೆ ಎಂದು ಶ್ರೀ ಗೌಡಪಾದಾಚಾರ್ಯ ಕೈವಲ್ಯ ಮಠಾದೀಶ ಶ್ರೀ ಶಿವಾನಂದ ಸರಸ್ವತಿ ಸ್ವಾಮೀಜಿಯವರು ಹೇಳಿದರು.
ಮೂಲ್ಕಿ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ ಏಳು ದಿನಗಳ ಅಖಂಡ ಭಜನಾ ಸಂಕೀರ್ಥನೆಯ ಪ್ರಯುಕ್ತ ಭಕ್ತಾಧಿಗಳನ್ನು ಹರಸಿದರು.ಏಕಾಗ್ರತೆಯಿಂದ ಹಾಡುವ ಭಜನಾ ಸಂಕೀರ್ಥನೆಯಿಂದ ಶೀಘ್ರ ದೇವರ ಅನುಗ್ರಹವಾಗಿ ಉತ್ತಮ ಫಲ ಪ್ರಾಪ್ತಿಯಾಗುತ್ತದೆ ಎಂದರು. ಈ ಸಂದರ್ಭ ಸ್ವಾಮೀಜಿಯವರನ್ನು ಶ್ರೀ ದೇವಳ ಮತ್ತು ಶ್ರೀ ವೆಂಕಟರಮಣ ಭಜನಾ ಮಂಡಳಿಯ ವತಿಯಿಂದ ಗೌರವಿಸಲಾಯಿತು.ಈ ಸಂದರ್ಭ ಭಜಕ ವೃಂದ ಅರ್ಚಕ ವರ್ಗ, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

Kinnigoli-06071407

 

Comments

comments

Comments are closed.

Read previous post:
Kinnigoli 06071401
ಕಟೀಲು: ರಕ್ತದಾನ ಶಿಬಿರ

ಕಿನ್ನಿಗೋಳಿ: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳ, ಕಟೀಲು ದೇವಳ ಪ್ರೌಢಶಾಲೆ, ಹಳೆ ವಿದ್ಯಾರ್ಥಿ ಸಂಘ, ಮಲ್ಲಿಗೆಯಂಗಡಿ ನಂದಿನಿ ಯುವಕ ವೃಂದ, ವೀರಮಾರುತಿ ವ್ಯಾಯಾಮ ಶಾಲೆ ರಾಜರತ್ನಪುರ, ಶ್ರೀ ರಾಮ...

Close