ಕಿನ್ನಿಗೋಳಿ : ಅಪರಿಚಿತ ಶವ ಪತ್ತೆ ವದಂತಿ

ಕಿನ್ನಿಗೋಳಿ :  ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಶವವೊಂದು ಪತ್ತೆಯಾಗಿದೆ ಎಂಬ ಸಾರ್ವಜನಿಕ ಅಂತೆ ಕಂತೆ ಜನರನ್ನು ಬೆಚ್ಚಿ ಬೀಳಿಸಿದ ಘಟನೆ ನಿನ್ನೆ ನಡೆದಿದೆ.ಕಿನ್ನಿಗೋಳಿ ಬಸ್ಸು ನಿಲ್ದಾಣದ ಬಳಿಯಲ್ಲಿ ಪೆಟ್ಟಿಗೆಯೊಂದರಲ್ಲಿ ಶವ ಪತ್ತೆಯಾಗಿದೆ ಏನಾದರೂ ಮಾಹಿತಿ ಇದೆಯಾ? ಎಂದು ಫೋನಿನ ಮೇಲೆ ಫೋನು ಬರಲಾರಂಬಿಸಿದಾಗ ಕೂಡಲೇ ಮೂಲ್ಕಿ ಠಾಣೆಯನ್ನು ಸಾರ್ವಜನಿಕರು ಸಂಪರ್ಕಿಸಿದರು. ಪೋಲೀಸರಿಂದ ಏನೂ ಇಲ್ಲ ಎಂದು ಹೇಳಿದ ಮೇಲೆ ಸುಮ್ಮನಾದರು.ಯಾರೋ ಎಲ್ಲಿಯೋ ಆದ ಘಟನೆಯನ್ನು ಕೆಲ ವಿಕೃತರು ವ್ಯಾಟ್ಸ್ ಅಪ್ಲಿಕೇಶನ್ ದುರ್ಬಳಕೆ ಮಾಡಿ ಗಾಳಿ ಸುದ್ದಿ ಹಬ್ಬಿಸಿ ಜನರನ್ನು ಗಾಬರಿಗೊಳಿಸಲು ಹುನ್ನಾರ ಮಾಡಿದ್ದಾರೆ. ವದಂತಿಗಳಿಗೆ ಕಿವಿಕೊಡಬೇಡಿ ಎಂದು ಪೋಲೀಸರು ತಿಳಿಸಿದ್ದಾರೆ.

Comments

comments

Comments are closed.

Read previous post:
Kateel-07071403
ಕಟೀಲಿಗೆ ಸರಕಾರದ ಮುಖ್ಯ ಕಾರ್ಯದರ್ಶಿ ಭೇಟಿ

ಕಟೀಲು: ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲಕ್ಕೆ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಕೌಶಿಕ್ ಮುಖರ್ಜಿ ದಂಪತಿ ಸಹಿತ ಸೋಮವಾರ ಭೇಟಿ ನೀಡಿ ಪ್ರಸಾದ ಸ್ವೀಕರಿಸಿದರು. ಉಡುಪಿ ಜಿಲ್ಲಾಧಿಕಾರಿ ಮುದ್ದು...

Close