ಪರೋಪಕಾರದಿಂದ ಜೀವನದಲ್ಲಿ ಮುಂದೆ ಬರಲು ಸಾದ್ಯ

ಮೂಲ್ಕಿ:  ಇಂದಿನ ಯುವಜನಾಂಗ ವಿದ್ಯೆಯ ಜೊತೆಗೆ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ನಿಜವಾದ ಪರೋಪಕಾರ. ಇದರಿಂದ ಜೀವನದಲ್ಲಿ ಮುಂದೆ ಬರಲು ಸಾದ್ಯ ಎಂದು ಕಿಲ್ಪಾಡಿ ಗ್ರಾ.ಪಂ. ಸದಸ್ಯ ಗೋಪೀನಾಥ ಪಡಂಗ ಹೇಳಿದರು. ಅವರು ಕಿಲ್ಪಾಡಿ ಫ್ರೆಂಡ್ಸ್ ಕ್ಲಬ್ ವತಿಯಿಂದ ತೀರಾ ಬಡ ಕುಟುಂಬದಲ್ಲಿರುವ ಮೋನಪ್ಪ ಪೂಜಾರಿ ಕಿಲ್ಪಾಡಿ ಎಂಬವರ ಮನೆಗೆ ಸುಮಾರು ಹನ್ನೆರಡು ಸಾವಿರ ರೂ ವೆಚ್ಚದಲ್ಲಿ ವಿದ್ಯುತ್ ಸಂಪರ್ಕದ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಕಿಲ್ಪಾಡಿ ಕೊಲೆಕಾಡಿ ನಾರಾಯಣಗುರು ಕ್ರಿಯಾ ಸಮಿತಿಯ ೫ ನೇ ವಾರ್ಷಿಕೋತ್ಸವವನ್ನು ಬಿಲ್ಲವ ಸಮಾಜ ಸೇವ ಸಂಘದಲ್ಲಿ ಭಜನೆ ಮತ್ತು ಗುರು ಪೂಜೆಯೊಂದಿಗೆ ಆಚರಿಸಲಾಯಿತು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಕಿಲ್ಪಾಡಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಹರೀಶ್ಚಂದ್ರ ಆಮೀನ್ ದಾಮರ್ ತೋಟ, ಉಪಾಧ್ಯಕ್ಷ ದಯಾನಂದ ಕೋಟ್ಯಾನ್,ಕಾರ‍್ಯದರ್ಶಿ ಮಹೇಶ್ ಅಮೀನ್,ಕೋಶಾಧಿಕಾರಿ ಸತೀಶ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.

Mulki-07071401

Comments

comments

Comments are closed.

Read previous post:
Kateel-07071402
ಕಟೀಲಿನಲ್ಲಿ ನೂತನ ಚಂಡಿಕಾ ಯಾಗಶಾಲೆ 

ಕಟೀಲು : ನಂದಿನೀ ನದೀ ಮಧ್ಯದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದಲ್ಲಿ ಭಕ್ತ ದಾನಿಗಳಿಂದ ರೂ. 20ಲಕ್ಷ ರೂ. ವೆಚ್ಚದಲ್ಲಿ ನೂತನ ಚಂಡಿಕಾ ಯಾಗಶಾಲೆಯನ್ನು ಸೋಮವಾರ ಉದ್ಘಾಟಿಸಲಾಯಿತು....

Close