ಮೂಲ್ಕಿ: ಲಯನ್ಸ್ ಅಧ್ಯಕ್ಷರಾಗಿ ದೇವಪ್ರಸಾದ್ ಪುನರೂರು,

ಮೂಲ್ಕಿ: ಯಶಸ್ವಿ ನಾಯಕನು ಸ್ವಾಭಿಮಾನಿಯೂ ಕಾರ್ಯ ಚತುರನೂ ತ್ಯಾಗಮಯಿಯಾಗಿದ್ದರೆ ಮಾತ್ರ ಅವನಿಂದ ಸಂಸ್ಥೆಯ ಮತ್ತು ಸಮಾಜದ ಉದ್ದಾರ ಸಾಧ್ಯ ಎಂದು ಲಯನ್ಸ್ ಮಲ್ಟಿಪಲ್ ಕೌನ್ಸಿಲ್ ಚೇಯರ್ ಮನ್ ಕೆ.ಮೋಹನ್ ಕಾಮತ್ ಹೇಳಿದರು.
ಮೂಲ್ಕಿ ಆಧಿಧನ್ ಸಭಾಂಗಣದಲ್ಲಿ ಮೂಲ್ಕಿ ಲಯನ್ಸ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಪದಗ್ರಹಣಾಧಿಕಾರಿಯಾಗಿ ಮಾತನಾಡಿದರು.
ಸ್ವಾರ್ಥ ರಹಿತ ಸೇವೆ, ಸಮಾಜದ ಬಡವರಿಗಾಗಿ ತುಡಿತ, ಅರ್ಹ ಪನಾನುಭವಿಗಳಿಗೆ ಸಹಾಯ ಸಲ್ಲಿಕೆ ಇವು ಸೇವಾ ಸಂಸ್ಥೆಯ ಮಹತ್ವದ ಭೂಮಿಕೆಯಾಗಬೇಕು ಎಂದರು. ಈ ಸಂದರ್ಭ ಮಾಜಿ ಲಯನ್ಸ್ ಗವರ್ನರ್ ಹರಿಕೃಷ್ಣ ಪುನರೂರು ರವರ ಪುತ್ರ ದೇವಪ್ರಸಾದ್ ಪುನರೂರು ಮತ್ತು ಅವರ ತಂಡಕ್ಕೆ ಪ್ರತಿಜ್ಞಾವಿಧಿ ಭೋದಿಸಿದರು. ಲಯನ್ಸ್ ಅಧ್ಯಕ್ಷರಾಗಿ ದೇವಪ್ರಸಾದ್ ಪುನರೂರು, ಲಯನೆಸ್ ಅಧ್ಯಕ್ಷೆಯಾಗಿ ಶ್ರೇಯಾ ಪುನರೂರು, ಲಿಯೋ ಅಧ್ಯಕ್ಷರಾಗಿ ಕವನ್‌ರಾಜ್ ಅಧಿಕಾರ ಸ್ವೀಕರಿಸಿದರು. ಈಸಂದರ್ಭ ಯುವತಿಯೊಬ್ಬಳ ವಿವಾಹಕ್ಕೆ ಮತ್ತು ರೋಗಪೀಡಿತರ ಶುಶ್ರೂಶೆಗಾಗಿ ಧನಸಹಾಯ ನೀಡಲಾಯಿತು. ಎಂ.ಪಿ.ಕಾಮತ್,ಚಿತ್ರಾ ಕಾಮತ್ ವಂದನಾ ಕೋಟ್ಯಾನ್,ಶ್ರೇಯಸ್ ಅಂಚನ್,ಪ್ರೊ.ನಾರಾಯಣ,ನವೀನ್ ಶೆಟ್ಟಿ, ಭೂಮಿ.ಎಸ್.ಸಾಲ್ಯಾನ್ ಉಪಸ್ಥಿತರಿದ್ದರು.ಧನಂಜಯ ಕೋಟ್ಯಾನ್ ಮಟ್ಟು ಸ್ವಾಗತಿಸಿದರು. ವಿಜಯ ಕುಮಾರ್ ಕುಬೆವೂರು ನಿರೂಪಿಸಿದರು.

Mulki-07071402

Comments

comments

Comments are closed.

Read previous post:
ಕಿನ್ನಿಗೋಳಿ : ಅಪರಿಚಿತ ಶವ ಪತ್ತೆ ವದಂತಿ

ಕಿನ್ನಿಗೋಳಿ :  ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ಶವವೊಂದು ಪತ್ತೆಯಾಗಿದೆ ಎಂಬ ಸಾರ್ವಜನಿಕ ಅಂತೆ ಕಂತೆ ಜನರನ್ನು ಬೆಚ್ಚಿ ಬೀಳಿಸಿದ ಘಟನೆ ನಿನ್ನೆ ನಡೆದಿದೆ.ಕಿನ್ನಿಗೋಳಿ ಬಸ್ಸು ನಿಲ್ದಾಣದ ಬಳಿಯಲ್ಲಿ...

Close