ಕಾರು ಅಪಘಾತ ಮೂವರಿಗೆ ಗಾಯ

ಮೂಲ್ಕಿ : ಕೋಲ್ನಾಡು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಉಡುಪಿ ಕಡೆಗೆ ಹೋಗುತ್ತಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸಿನಮೀಯ ಮಾದರಿಯಲ್ಲಿ ಮೂರು ಬಾರಿ ಪಲ್ಟಿ ಹೊಡೆದು ಡಿವೈಡರ್ ಮೇಲೇರಿ ಮಂಗಳೂರು ಕಡೆಗೆ ಹೋಗುತ್ತಿದ್ದ ರಸ್ತೆಗೆ ಬಿದ್ದ ಘಟನೆ ನಡೆದಿದೆ. ಕಾರು ಪಲ್ಟಿ ಹೊಡೆದ ರಭಸದಲ್ಲಿ ಹಿಂಬದಿಯ ಚಕ್ರ ತುಂಡಾಗಿದ್ದು ಕಾರಿನಲ್ಲಿದ್ದ ಮೂವರು ಎಸೆಯಲ್ಪಟ್ಟು ತೀವ್ರ ಗಾಯಗೊಂಡಿದ್ದಾರೆ. ಇದೇ ಸಂದರ್ಭ ಸ್ಥಳೀಯರು ಪಲ್ಟಿಯಾಗಿದ್ದ ಕಾರನ್ನು ಸರಿಪಡಿಸಿ ಗಾಯಾಳುಗಳನ್ನು ಮೇಲೆತ್ತಿ ಮುಕ್ಕ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಸುರತ್ಕಲ್ ಟ್ರಾಫಿಕ್ ಪೋಲೀಸರು ತನಿಖೆ ನಡೆಸುತ್ತಿದ್ದಾರೆ

Mulki-09071402

Comments

comments

Comments are closed.

Read previous post:
KInnigoli-09071403
ರೋಟರಿ ಅನ್ನದಾನ ದಿನ

ಕಿನ್ನಿಗೋಳಿ : ಆರ್ಥಿಕವಾಗಿ ದುರ್ಬಲತೆ ಹೊಂದಿದ ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿ ಆರ್ಥಿಕ ಸಬಲರನ್ನಾಗಿ ಮಾಡಲು ಸೇವಾ ಸಂಸ್ಥೆಗಳು ಮುಂದಾಗಬೇಕು ಎಂದು ರೋಟರಿ ಜಿಲ್ಲೆ ೩೧೮೦ ವಲಯ ೩...

Close