ಕಟೀಲಿನಲ್ಲಿ ಯಕ್ಷಗಾನ ದಶಾಹ ಮಂತ್ರಮಹಾರ್ಣವ

ಕಟೀಲು : ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಸರೆಯಲ್ಲಿ ನಡೆಯುವ ಯಕ್ಷಗಾನ ತಾಳಮದ್ದಲೆ ಸಪ್ತಾಹಕ್ಕೆ ಈ ವರ್ಷ ಹತ್ತರ ಸಂಭ್ರಮ. ಹಾಗಾಗಿ ಈ ಬಾರಿ ಹತ್ತು ದಿನಗಳ ತಾಳಮದ್ದಲೆ ’ದಶಾಹ’, ಪರಿಕಲ್ಪನೆ ಮಂತ್ರ ಮಹಾರ್ಣವ ಎಂಬುದು. ತಾ.೧೧ರಿಂದ ೨೦ರವರೆಗೆ ದಿನಂಪ್ರತಿ ಸಂಜೆ ೪.೩೦ರಿಂದ ತಾಳಮದ್ದಲೆ ನಡೆಯಲಿದೆ. ತಾ.೧೧ರಂದು ಸಂಜೆ ಉದ್ಘಾಟನೆ ಸಮಾರಂಭದಲ್ಲಿ ಶರವು ರಾಘವೇಂದ್ರ ಶಾಸ್ತ್ರಿ, ಬಲಿಪ ನಾರಾಯಣ ಭಾಗವತರು, ಡಾ. ಆಶಾಜ್ಯೋತಿ ರೈ, ಹರಿಕೃಷ್ಣ ಪುನರೂರು, ಪ್ರದೀಪ ಕಲ್ಕೂರ, ಸುಧೀರ್ ಪ್ರಸಾದ್ ಶೆಟ್ಟಿ ಭಾಗವಹಿಸಲಿದ್ದಾರೆ. ಬಳಿಕ ಮಂತ್ರ ನಾರಾಯಣ ವರ್ಮದ ವಿಶ್ವರೂಪ ವೃತ್ರೋಪಾಖ್ಯಾನ ಪ್ರಸಂಗದ ತಾಳಮದ್ದಲೆಯಲ್ಲಿ ಕುರಿಯ ಶಾಸ್ತ್ರಿ, ಮೂಡಂಬೈಲು, ಗೋವಿಂದ ಭಟ್, ಶ್ರೀಹರಿ ಆಸ್ರಣ್ಣ, ಶ್ರೀಧರ ಡಿ.ಎಸ್, ವಾಸುದೇವ ರಾವ್, ಪಕಳಕುಂಜ, ಸುರೇಶ ಕುದ್ರೆಂತಾಯ ಭಾಗವಹಿಸಲಿದ್ದಾರೆ. ತಾ. ೧೨ರಂದು ಗಾಯತ್ರೀ ಮಾಹಾತ್ಮ್ಯೆರಲ್ಲಿ ಬಲಿಪರು, ಉಮಾಕಾಂತ ಭಟ್, ಎಂ.ಎಲ್.ಸಾಮಗ, ನಾರಾಯಣ ದೇಸಾಯಿ, ರವಿಶಂಕರ ವಳಕ್ಕುಂಜ, ನಾರಾಯಣ ಹೆಗಡೆ, ಸಾವಿತ್ರೀ ಶಾಸ್ತ್ರಿ, ತಾ.೧೩ರ ಅಷ್ಟಾಕ್ಷರೀ ಮಾಹಾತ್ಮ್ಯೆಯಲ್ಲಿ ಕುಬಣೂರು, ಉಮಾಕಾಂತ ಭಟ್, ಪ್ರಸಾದ ಆಸ್ರಣ್ಣ, ಜಯರಾಮ ಆಚಾರ್ಯ, ಸೇರಾಜೆ ಸೀತಾರಾಮ ಭಟ್, ರವಿರಾಜ, ತಾರಾನಾಥ ವರ್ಕಾಡಿ, ಕದ್ರಿ ನವನೀತ ಶೆಟ್ಟಿ, ನಾರಾಯಣ ಯಾಜಿ, ಗಾಳಿಮನೆ ವಿನಾಯಕ ಭಾಗವಹಿಸಲಿದ್ದಾರೆ. ತಾ.೧೪ರ ಪಂಚಾಕ್ಷರೀಯಲ್ಲಿ ರವಿಚಂದ್ರ ಕನ್ನಡಿಕಟ್ಟೆ, ಪ್ರಭಾಕರ ಜೋಷಿ, ಸರ್ಪಂಗಳ, ಶ್ರೀರಮಣ, ರವಿ ಅಲೆವೂರಾಯ, ಸುಬ್ರಹ್ಮಣ್ಯ ಬೈಪಾಡಿತ್ತಾಯ, ಪಶುಪತಿ ಶಾಸ್ತ್ರಿ ಇದ್ದಾರೆ. ತಾ.೧೫ರ ತ್ರ್ಯಂಬಕರುದ್ರದಲ್ಲಿ ಪ್ರಫುಲ್ಲಚಂದ್ರ, ಮೂಡಂಬೈಲು, ಜೋಷಿ, ಹಿರಣ್ಯ, ಗಣರಾಜ, ಕೃಷ್ಣ ಕುಮಾರ, ಪಿ.ವಿ.ರಾವ್, ತಾ.೧೬ರ ಸಂಜೀವನಿ ಮೃತ್ಯುಂಜಯದಲ್ಲಿ ಗಣಪತಿ ಭಟ್ಟ, ಕೋಳ್ಯೂರು, ಸುಣ್ಣಂಬಳ, ವಾಸುದೇವ ರಂಗಾ ಭಟ್, ರಾಮ ಜೋಯಿಸ, ಕಲ್ಲೂರಾಯ, ಮಾಧವ ಬಂಗೇರ, ತಾ.೧೭ರ ಆದಿತ್ಯ ಹೃದಯದಲ್ಲಿ ಲೀಲಾವತಿ ಬೈಪಾಡಿತ್ತಾಯ, ವಾ.ಸಾಮಗ, ಸುಣ್ಣಂಬಳ, ರಮೇಶಾಚಾರ್ಯ, ಹಿರಣ್ಯ, ವೈಕುಂಠ, ವಸಂತ ದೇವಾಡಿಗ ಇದ್ದಾರೆ. ತಾ.೧೮ರ ಪ್ರತಿಸ್ಮೃತಿಯಲ್ಲಿ ರಾಮಕೃಷ್ಣ ಮಯ್ಯ, ಶಂಭು ಶರ್ಮ, ಉಜಿರೆ, ಪ್ರಸಾದ ಆಸ್ರಣ್ಣ, ನಿಟ್ಟೂರು, ಪದ್ಮನಾಭ, ದಿನೇಶ ಶೆಟ್ಟಿ, ನಾ.ಕಾರಂತ, ತಾ.೧೯ರ ದೇವಹೂತಿಯಲ್ಲಿ ಪೊಲ್ಯ ಶೆಟ್ಟಿ, ಉಡುವೆಕೋಡಿ, ಕುಂಬ್ಳೆ, ಬರೆ ಕೇಶವ ಭಟ್, ರಮಾನಂದ ಬನಾರಿ, ಸಿದ್ಧಕಟ್ಟೆ ವಿಶ್ವನಾಥ, ಸಂಕದಗುಂಡಿ ಗಣಪತಿ, ಹರೀಶ ಜೋಷಿ ಭಾಗವಹಿಸಿದ್ದಾರೆ. ತಾ.೨೦ರ ಭಾನುವಾರ ಬೆಳಿಗ್ಗೆ ರಾಮತಾರಕದಲ್ಲಿ ಪೊಲ್ಯ ಲಕ್ಷ್ಮೀನಾರಾಯಣ ಶೆಟ್ಟಿ, ಪದ್ಯಾಣ ಗಣಪತಿ ಭಟ್, ಸುಣ್ಣಂಬಳ, ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿ, ಸರ್ಪಂಗಳ, ಭಾಸ್ಕರ ರೈ, ವಿಷ್ಣು ಶರ್ಮ, ವಾ.ರಂಗ ಭಟ್, ಪಶುಪತಿ, ಪ್ರದೀಪ ಸಾಮಗ ಪಾಲ್ಗೊಳ್ಳಲಿದ್ದು, ಮಧ್ಯಾಹ್ನದ ಬಳಿಕ ವಿಷ್ಣು ಸಹಸ್ರನಾಮದಲ್ಲಿ ಪುತ್ತಿಗೆ ಹೊಳ್ಳ, ಪದ್ಯಾಣ ಗೋವಿಂದ, ಕೆ. ಗೋವಿಂದ ಭಟ್, ವಾ.ಸಾಮಗ, ಶಂಭು ಶರ್ಮ, ಹಿರಣ್ಯ, ಶ್ರೀಹರಿ ಆಸ್ರಣ್ಣ, ಸಂಕದಗುಂಡಿ, ರಾಮ ಜೋಯಿಸ, ವಾ.ಕಲ್ಲೂರಾಯ ಭಾಗವಹಿಸಲಿದ್ದಾರೆ. ಸಮಾರೋಪದಲ್ಲಿ ಸಚಿವರಾದ ಅಭಯಚಂದ್ರ, ರಮಾನಾಥ ರೈ, ನಳಿನ್ ಕುಮಾರ್, ಡಾ.ಪದ್ಮನಾಭ ಕಾಮತ್, ರಾಜೇಶ ಚೌಟ, ನಾರಾಯಣ ಪಿ.ಎಂ. ಶ್ರೀಪತಿ ಭಟ್ ಉಪಸ್ಥಿತರಿರುತ್ತಾರೆ ಎಂದು ಕಟೀಲು ದೇಗುಲದ ಆಡಳಿತಾಧಿಕಾರಿ ನಿಂಗಯ್ಯ, ಮೊಕ್ತೇಸರ ವಾಸುದೇವ ಆಸ್ರಣ್ಣ ತಿಳಿಸಿದ್ದಾರೆ.

Comments

comments

Comments are closed.

Read previous post:
KInnigoli-09071404
ಕಿನ್ನಿಗೋಳಿ ರೋಟರಿ ಕ್ಲಬ್ ಪದಗ್ರಹಣ

ಕಿನ್ನಿಗೋಳಿ : ಜನರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸಿ ನಿರ್ದಿಷ್ಟ ಯೋಜನೆಗಳನ್ನು ರೂಪಿಸಿ ಉತ್ತಮ ಸೇವೆಗಳನ್ನು ತಲುಪಿಸಿದಾಗ ಸಮಾಜದಲ್ಲಿ ಶಾಂತಿ ಸೌಹಾರ್ದತೆ ನೆಲೆಸುವುದು ಎಂದು ರೋಟರಿ ಮಹಿಳಾ ಸಬಲೀಕರಣ ಜಿಲ್ಲಾ...

Close