ರೋಟರಿ ಅನ್ನದಾನ ದಿನ

ಕಿನ್ನಿಗೋಳಿ : ಆರ್ಥಿಕವಾಗಿ ದುರ್ಬಲತೆ ಹೊಂದಿದ ಮಕ್ಕಳಿಗೆ ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿ ಆರ್ಥಿಕ ಸಬಲರನ್ನಾಗಿ ಮಾಡಲು ಸೇವಾ ಸಂಸ್ಥೆಗಳು ಮುಂದಾಗಬೇಕು ಎಂದು ರೋಟರಿ ಜಿಲ್ಲೆ ೩೧೮೦ ವಲಯ ೩ ರ ಸಹಾಯಕ ಗವರ್ನರ್ ನಾಗೇಂದ್ರ ಹೇಳಿದರು
ಕಿನ್ನಿಗೋಳಿ ರೋಟರಿ ಕ್ಲಬ್ ಆಶ್ರಯದಲ್ಲಿ ಮೇರಿವೆಲ್ ಮಕ್ಕಳ ವಸತಿಗೃಹದಲ್ಲಿ ನಡೆದ ರೋಟರಿ ಅನ್ನದಾನ ದಿನ ಕಾರ್ಯಕ್ರದಲ್ಲಿ ಮಾತನಾಡಿದರು. ಮೇರಿವೆಲ್ ಸಂಸ್ಥೆಯ ಭಗಿನಿ ವಿತಾಲಿಸ್ ಬಿ.ಎಸ್., ಭಗಿನಿ ಮಾರ್ಗರೆಟ್, ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ, ನಿಕಟಪೂರ್ವ ಅಧ್ಯಕ್ಷ ರಾಬರ್ಟ್ ರುಸಾರಿಯೋ, ಕಾರ್ಯದರ್ಶಿ ಜೋಕಿಂ ಸಿಕ್ವೇರಾ, ವಲಯ ಸೇನಾನಿ ಶರತ್ ಶೆಟ್ಟಿ, ರೋಟರ‍್ಯಾಕ್ಟ್ ನಿಯೋಜಿತ ಅಧ್ಯಕ್ಷ ಸಂತೋಷ್ ಶೆಟ್ಟಿ, ಪಿ. ಸತೀಶ್ ರಾವ್ ಮತ್ತಿತರರು ಉಪಸ್ಥಿತರಿದ್ದರು.

KInnigoli-09071403

Comments

comments

Comments are closed.

Read previous post:
KInnigoli 09071402
ಕೃಷ್ಣಿ ಎಲ್. ಕುಂದರ್

ಕಿನ್ನಿಗೋಳಿ : ಕಿನ್ನಿಗೋಳಿ ಮೆನ್ನಬೆಟ್ಟು ಮುಕ್ಕ ಮನೆ ನಿವಾಸಿ ಕೃಷ್ಣಿ ಎಲ್. ಕುಂದರ್ ( 80ವರ್ಷ) ಜುಲಾಯಿ 6 ಭಾನುವಾರದಂದು ಹೃದಯಾಘಾತದಿಂದ ನಿಧನ ಹೊಂದಿರುತ್ತಾರೆ. ಅವರಿಗೆ 4 ಪುತ್ರರು ಮತ್ತು 2 ಪುತ್ರಿಯರು...

Close