ಕಟೀಲು ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆ

ಕಟೀಲು : ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಹಾಗೂ ಮಾಗಣೆಗೆ ಸಂಬಂಧಪಟ್ಟಂತೆ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತಾಧಿಗಳು ಪ್ರತಿ ವರುಷವು ಮಾಗಣೆಯ ಸುಭಿಕ್ಷೆಗಾಗಿ ಮತ್ತು ಅರಿಷ್ಠ ನಿವಾರಣೆಗಾಗಿ ಸೀಯಾಳಾಭಿಷೇಕ ಮಾಡುವ ನಿಟ್ಟಿನಲ್ಲಿ ಪೂರ್ವಭಾವಿಯಾಗಿ ಭಾನುವಾರ ದೇವಳದಲ್ಲಿ ಅಷ್ಟಮಂಗಳ ಪ್ರಶ್ನೆ ಕಾರ್ಯಕ್ರಮ ನಡೆಯಿತು. ಪುದುವಾಳ ದೇವದಾಸ ಎಡಕ್ಕಾಡ್ ಹಾಗೂ ಮುರಳೀಧರ ತಂತ್ರಿ ದೈವಿಕ ಚಿಂತನೆ ನಡೆಸಿದರು. ಪ್ರತಿವರ್ಷ ಮಿಥುನ ಮಾಸದ ಜೂ. 16 ರಿಂದ ಜು. 16ರೊಳಗೆ ತಿಂಗಳ ಮೂರನೇ ಬುಧವಾರ ಸೀಯಾಳಾಭಿಷೇಕ ಮಾಡಬೇಕು ಎಂದು ಪ್ರಶ್ನೆಯಲ್ಲಿ ಕಂಡುಬಂತು. ಈ ವರ್ಷ ಜು. 15 ರಂದು ಬೆಳಿಗ್ಗೆ 5 ಗಂಟೆಗೆ ಅನುಜ್ಞಾ ಕಲಶ ಬಳಿಕ 8 ಗಂಟೆಗೆ ಸೀಯಾಳಾಭಿಷೇಕ ಮಾಡಬೇಕು ಎಂದು ಪಶ್ನೆಯಲ್ಲಿ ತಿಳಿದು ಬಂತು. ದೇವಳದ ಆಡಳಿತಾಧಿಕಾರಿ ನಿಂಗಯ್ಯ, ಮೊಕ್ತೇಸರ ವಾಸುದೇವ ಆಸ್ರಣ್ಣ , ವೇದವ್ಯಾಸ ತಂತ್ರಿ, ಲಕ್ಷ್ಮೀನಾರಯಣ ಆಸ್ರಣ್ಣ , ಅನಂತಪದ್ಮನಾಭ ಆಸ್ರಣ್ಣ , ಕಮಲಾದೇವಿ ಪ್ರಸಾದ್ ಆಸ್ರಣ್ಣ , ಹರಿನಾರಾಯಣದಾಸ ಆಸ್ರಣ್ಣ , ಪ್ರಬಂಧಕ ವಿಜಯ ಕುಮಾರ್ ಶೆಟ್ಟಿ , ವೇದವ್ಯಾಸ ಉಡುಪ, ಅತ್ತೂರುಗುತ್ತು ಪ್ರಸನ್ನ ಶೆಟ್ಟಿ , ದೇವಿಪ್ರಸಾದ್ ಶೆಟ್ಟಿ , ಮೂಡ್ರಗುತ್ತು ರಘುನಾಥ್ ಶೆಟ್ಟಿ ಮತ್ತಿತರರಿದ್ದರು.

Kateel-13071403

Comments

comments

Comments are closed.

Read previous post:
Kinnigoli-13071405
ಕಿನ್ನಿಗೋಳಿ ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿ

ಕಿನ್ನಿಗೋಳಿ : ಶನಿವಾರ ರಾತ್ರಿ ಸುರಿದ ಬಾರೀ ಮಳೆ ಹಾಗೂ ಗಾಳಿಗೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಕಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ನಂದಿನಿ ನದಿ ಉಕ್ಕಿ ಹರಿಯುತ್ತಿದ್ದು, ಕಿನ್ನಿಗೋಳಿ...

Close