ಜು. 15 : ಕಟೀಲು ದೇವಳದಲ್ಲಿ ಸೀಯಾಳಾಭಿಷೇಕ

 ಕಿನ್ನಿಗೋಳಿ : ಪುರಾಣ ಪ್ರಸಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳಕ್ಕೆ ಹಾಗೂ ಮಾಗಣೆಗೆ ಸಂಬಂಧಪಟ್ಟಂತೆ ಅತ್ತೂರು ಕೊಡೆತ್ತೂರು ಮಾಗಣೆಯ ಭಕ್ತಾಧಿಗಳು ಪ್ರತಿ ವರುಷವು ಮಾಗಣೆಯ ಸುಭಿಕ್ಷೆಗಾಗಿ ಮತ್ತು ಅರಿಷ್ಠ ನಿವಾರಣೆಗಾಗಿ ಅನಾದಿಕಾಲದಿಂದಲೂ ಹಿರಿಯರಿಂದ ಅನುಸರಿಸಿದ ಸಂಪ್ರದಾಯಬದ್ಧ ಧಾರ್ಮಿಕ ವಿಧಿ ವಿಧಾನವಾದ ಸೀಯಾಳಾಭಿಷೇಕ ಜುಲಾಯಿ 15 ಮಂಗಳವಾರ ಬೆಳಿಗ್ಗೆ 8.00 ಕ್ಕೆ ಕಟೀಲು ದೇವಳದಲ್ಲಿ ನಡೆಯಲಿದೆ. ಭಕ್ತಾದಿಗಳು ಸೀಯಾಳದೊಂದಿಗೆ ಬೆಳಿಗ್ಗೆ 7.30 ರ ಒಳಗೆ ಮಲ್ಲಿಗೆ ಅಂಗಡಿ ಹೂ ಹಾಕುವ ಕಲ್ಲು (ಪೂಪಾಡಿ ಕಲ್ಲು) ಬಳಿ ಒಟ್ಟು ಸೇರಿ ಮೆರವಣಿಗೆಯಲ್ಲಿ ಕಟೀಲು ಶ್ರೀ ದೇವಿಯ ಸನ್ನಿಧಿಗೆ ತೆರಳಲಿದೆ ಎಂದು ಅತ್ತೂರು ಕೊಡೆತ್ತೂರು ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Comments

comments

Comments are closed.

Read previous post:
Kinnigoli-13071401
ಮೆನ್ನಬೆಟ್ಟು ಗ್ರಾ. ಪಂ. ಗ್ರಾಮ ಸಭೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಒಳಪಟ್ಟ ಮೆನ್ನಬೆಟ್ಟು, ಕಿಲೆಂಜೂರು, ನಡುಗೋಡು, ಕೊಂಡೆಮೂಲ ಗ್ರಾಮಗಳ 2014-15ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜನಾರ್ಧನ ಕಿಲೆಂಜೂರು ಅವರ ಅಧ್ಯಕ್ಷತೆಯಲ್ಲಿ...

Close