ಕಟೀಲಿನಲ್ಲಿ ಯಕ್ಷಗಾನ ದಶಾಹ

ಕಟೀಲು : ಯಕ್ಷಗಾನ ಕಲೆ ನಶಿಸಿ ಹೋಗುವ ಕಲೆಯಲ್ಲ , ಭವ್ಯ ಪರಂಪರೆ ಇದೆ ಎಂದು ಶ್ರೀ ಶರವು ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ರಾಘವೇಂದ್ರ ಶಾಸ್ತ್ರಿ ಹೇಳಿದರು. ಶುಕ್ರವಾರ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇಗುಲದ ಆಸರೆಯಲ್ಲಿ ನಡೆಯುವ ಯಕ್ಷಗಾನ ತಾಳಮದ್ದಲೆ ಸಪ್ತಾಹ ತಾಳಮದ್ದಲೆ ’ದಶಾಹ’, ಪರಿಕಲ್ಪನೆ ಮಂತ್ರ ಮಹಾರ್ಣವ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು.

ಹಿರಿಯ ಭಾಗವತ ಬಲಿಪ ನಾರಾಯಣ ಭಾಗವತರು ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು.ಮಂಗಳೂರು ಆಸರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷೆ ಡಾ| ಆಶಾಜ್ಯೋತಿ ರೈ, ದ. ಕ. ಜಿಲ್ಲಾ ಕಸಾಪದ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಮೊPಸರ ವಾಸುದೇವ ಆಸ್ರಣ್ಣ , ಅನಂತಪದ್ಮನಾಭ ಆಸ್ರಣ್ಣ , V4 ಸಂಸ್ಥೆಯ ಲೀಲಾಕ್ಷ ಕರ್ಕೇರ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಉಪಸ್ಥಿತರಿದ್ದರು. ಅರ್ಚಕ ಹರಿನಾರಾಯಣದಾಸ ಆಸ್ರಣ್ಣ ಸ್ವಾಗತಿಸಿದರು. ವಾಸುದೇವ ಶೆಣೈ ಕಾರ್ಯಕ್ರಮ ನಿರೂಪಿಸಿದರು.

Kateel-13071401

Kateel-13071402

Comments

comments

Comments are closed.

Read previous post:
Kinnigoli-13071404
ಪಂಜ : ಹೈನುಗಾರಿಕಾ ಮಾಹಿತಿ ಶಿಬಿರ

ಕಿನ್ನಿಗೋಳಿ : ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಮತ್ತು ಪಂಜ ಕೊಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ಜಂಟೀ ಆಶ್ರಯದಲ್ಲಿ ನರ್ಬಾಡ್ ಯೋಜನೆಯಡಿ ಯುವ ಮತ್ತು...

Close