ಮೆನ್ನಬೆಟ್ಟು ಗ್ರಾ. ಪಂ. ಗ್ರಾಮ ಸಭೆ

ಕಿನ್ನಿಗೋಳಿ : ಮೆನ್ನಬೆಟ್ಟು ಗ್ರಾಮ ಪಂಚಾಯಿತಿಗೆ ಒಳಪಟ್ಟ ಮೆನ್ನಬೆಟ್ಟು, ಕಿಲೆಂಜೂರು, ನಡುಗೋಡು, ಕೊಂಡೆಮೂಲ ಗ್ರಾಮಗಳ 2014-15ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆಯು ಜನಾರ್ಧನ ಕಿಲೆಂಜೂರು ಅವರ ಅಧ್ಯಕ್ಷತೆಯಲ್ಲಿ ಬುಧವಾರ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ನಡೆಯಿತು.

ಕಳಪೆ ರಸಗೊಬ್ಬರ ವಿತರಣೆಯಾಗುತ್ತಿದೆ. ಸುಫಲಾ ರಸಗೊಬ್ಬರದಲ್ಲಿ ಮೇಲ್ಮೈ ರಾಸಾಯನಿಕದ ಕೋಟಿಂಗ್‌ವಿದ್ದು ಒಳಗೆ ಮರಳು ಇದೆ ಎಂದು ಗ್ರಾಮ ಪಂಚಾಯಿತಿ ಸದಸ್ಯ ಗಂಗಾಧರ ಪೂಜಾರಿ ಅವರು ಕಲಬೆರಕೆ ರಸಗೊಬ್ಬರದ ಸ್ಯಾಂಪಲ್‌ನ್ನು ಸಭೆಯಲ್ಲಿ ತೋರಿಸಿ ತನಿಖೆಗಾಗಿ ಮುಲ್ಕಿ ರೈತ ಸಂಪರ್ಕ ಕೃಷಿ ಅಧಿಕಾರಿ ಬಾಲಕೃಷ್ಣ ಅವರಲ್ಲಿ ನೀಡಿ ಕೃಷಿಕರಿಗೆ ಉತ್ತಮ ರಸಗೊಬ್ಬರ ಸಿಗುವಂತೆ ನೋಡಿಕೊಳ್ಳಿ ಎಂದು ಭಿನ್ನವಿಸಿದರು.

ವಾರ್ಡು ಸಭೆ ಹಾಗೂ ಗ್ರಾಮ ಸಭೆಗಳಿಗೆ ಗ್ರಾಮ ಪಂಚಾಯಿತಿ ಸದಸ್ಯರು ನಿಯಮಿತವಾಗಿ ಹಾಜಾರಾಗುತ್ತಿಲ್ಲ ಯಾಕೆ ಎಂದು ಕೋಂಡೇಲ ಗ್ರಾಮಸ್ಥರು ಸಭೆಯಲ್ಲಿ ವಿಚಾರಿಸಿದರು. ಗ್ರಾಮ ಸಭೆಯಲ್ಲಿ ಕೆಲವರು ಇತರರಿಗೆ ಮಾತನಾಡಲು ಅವಕಾಶ ಕೊಡದೆ ತಾವೇ ಸಭೆಯ ಅಂತ್ಯದವರೆಗೆ ಮಾತನಾಡುತ್ತಾರೆ ನಮಗೆ ಯಾಕೆ ಪಂಚಾಯಿತಿ ಆಡಳಿತ ಅವಕಾಶ ಕೊಡುತ್ತಿಲ್ಲ?? ಎಲ್ಲರನ್ನೂ ಸಮಾನಮನಸ್ಕರಾಗಿ ನೋಡಿಕೊಳ್ಳಿ ಎಂದು ಪಂಚಾಯಿತ್ ಅಧ್ಯಕ್ಷರಲ್ಲಿ ಕೆಲವುನಿವೇದಿಸಿಕೊಂಡರು.
ಕಿನ್ನಿಗೋಳಿ ಪರಿಸರದ ಗ್ರಾಮಗಳಲ್ಲಿ ಲೋ ವೋಲ್ಟೇಜ್ ಸಮಸ್ಯೆವಿದೆ ಎಂಬ ಗ್ರಾಮಸ್ಥರು ದೂರಿದಾಗ ಜನರ ಬೇಡಿಕೆಯಷ್ಟು ವಿದ್ಯುತ್ ಸಿಗುತ್ತಿಲ್ಲ ಮುಂದಿನ ದಿನಗಳಲ್ಲಿ ಅರಸುಲ ಪದವು ಹಾಗೂ ಕೊಲ್ಲೂರು ಪದವಿನಲ್ಲಿ ವಿದ್ಯುತ್ ಸಬ್ ಸ್ಟೇಷನ್ ಆದರೆ ವೋಲ್ಟೇಜ್ ಸಮಸ್ಯೆಗಳು ಬಹುತೇಕ ನೀಗಬಹುದು ಎಂಬ ಉತ್ತರ ಅಧಿಕಾರಿಗಳಿಂದ ಬಂತು.
ಪಶುಪಾಲನ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕ ನಳ್ಳಿ ನೀರು ಅಳವಡಿಸದಿರುವಿಕೆ, ಸಶ್ಮಾನದಲ್ಲಿ ರಾತ್ರಿ ಹೊತ್ತು ಹೆಣ ಸುಡುವ ಸಮಸ್ಯೆ, ಉಲ್ಲಂಜೆಯಲ್ಲಿ ಬೀದಿ ನಾಯಿಗಳ ಕಾಟ, ಪಡಿತರ ಚೀಟಿ ಸಮಸ್ಯೆಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯಿತು.
ನೋಡೆಲ್ ಅಧಿಕಾರಿಯಾಗಿ ಮಹಿಳಾ ಕಲ್ಯಾಣ ಇಲಾಖೆಯ ಶ್ಯಾಮಲಾ ಕಾರ್ಯನಿರ್ವಹಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಸರೋಜಿನಿ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ಬಿ., ಕಂದಾಯ ಇಲಾಖೆಯ ಕಿರಣ್, ಲೋಕೇಶ್, ಪಶು ಸಂಗೋಪನ ಇಲಾಖೆಯ ಸತ್ಯಶಂಕರ್, ತೋಟಗಾರಿಕೆ ಇಲಾಖೆಯ ಬಾಲಕೃಷ್ಣ, ಪಂಚಾಯತ್‌ರಾಜ್ ವಿಭಾಗದಇಂಜಿನಿಯರ್ ಪ್ರಶಾಂತ್ ಆಳ್ವ, ಶಿಕ್ಷಣ ಇಲಾಖೆಯ ಜಗದೀಶ್ ನಾವಡ ಮತ್ತಿತರರು ಉಪಸ್ಥಿತರಿದ್ದರು.

Kinnigoli-13071401

Comments

comments

Comments are closed.

Read previous post:
Mulki-10071401
ಮುಲ್ಕಿ :ಬಾವಿಗೆ ಹಾರಿ ಅತ್ಮಹತ್ಯೆ

ಮುಲ್ಕಿ : ಮುಲ್ಕಿ ಠಾಣಾ ವ್ಯಾಪ್ತಿಯ ಚರಂತಿಪೇಟೆ ಎಂಬಲ್ಲಿ ಮಹಿಳೆಯೋರ್ವರು ಅತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ. ಮುಲ್ಕಿಯ ಚರಂತಿ ಪೇಟೆ ನಿವಾಸಿ ಶಾಲಿನಿ ಎಸ್. ಕಾಮತ್ ಗುರುವಾರ...

Close