ಪಾವಂಜೆ ತುಳುನಾಡ ಕೃಷಿ ಜನಪದೋತ್ಸವ

ಪಾವಂಜೆ : ಯುವ ಜನರನ್ನು ಕೃಷಿ ಭೂಮಿಯತ್ತ ಸೆಳೆಯಬೇಕಾದರೆ ಕೃಷಿ ಜೀವನ ಶಿಕ್ಷಣದ ಪಾಠವಾಗುವ ಜೊತೆಗೆ ಕೆಸರಿನ ಮಣ್ಣಿನ ಮಹತ್ವವನ್ನು ಸಾರುವಂತಹ ಬಯಲು ಆಟದಲ್ಲೂ ಉತ್ಸವದ ರೂಪದಲ್ಲಿ ಸಾರ್ವತ್ರಿಕವಾಗಿ ನಡೆಯಬೇಕು. ಕೃಷಿ ಭೂಮಿಯನ್ನು ಉಳಿಸಲು ಅದರ ಮಹತ್ವವವನ್ನು ಅರಿಯಲು ಜಾಗೃತಿ ಮೂಡಿಸುವ ಕೆಲಸವು ಕ್ರೀಡಾ ಸಂಘಟನೆಯಿಂದ ಸಾಧ್ಯವಿದೆ. ಧಾರ್ಮಿಕ ಕ್ಷೇತ್ರಗಳು ಇಂತಹ ಕ್ರೀಡಾ ಚಟುವಟಿಕೆಯನ್ನು ಪ್ರೋತ್ಸಾಹಿಸಿದಲ್ಲಿ ಕ್ಷೇತ್ರ ಸಾನ್ನಿಧ್ಯದ ಪಾವಿತ್ರತೆ ಹೆಚ್ಚುತ್ತದೆ ಎಂದು ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ.ಎಸ್.ನಿತ್ಯಾನಂದ ಸ್ವಾಮೀಜಿ ಹೇಳಿದರು.

ಮೂಲ್ಕಿ ಬಳಿಯ ಹಳೆಯಂಗಡಿ ಪಾವಂಜೆಯಲ್ಲಿ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್‌ನ ಸಂಯೋಜನೆಯಲ್ಲಿ ಶನಿವಾರ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ನಡೆದ ತುಳುನಾಡ ಕೃಷಿ ಜನಪದೋತ್ಸವಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಶುಭ ಹಾರೈಸಿ ಮಾತನಾಡಿದರು.
ಪ್ರಗತಿಪರ ಕೃಷಿಕ, ಎಪಿಎಂಸಿ ಸದಸ್ಯ ಪ್ರಮೋದ್‌ಕುಮಾರ್ ಕಿನ್ನಿಗೋಳಿ ಎರಡು ದಿನದಲ್ಲಿ ನಡೆಯುವ ಕ್ರೀಡೋತ್ಸವಕ್ಕೆ ಚಾಲನೆ ನೀಡಿ ಮರೆತು ಹೋಗುತ್ತಿರುವ ಕೃಷಿ ಸಂಸ್ಕೃತಿಗೆ ಹೆದ್ದಾರಿ ಬದಿಯಲ್ಲಿರುವ ಬಾಕಿಮಾರು ಗದ್ದೆಯಲ್ಲಿ ಮತ್ತೆ ಮತ್ತೆ ನೆನಪಿಸುವ ಮೂಲಕ ನಡೆಸುತ್ತಿರುವುದು ಶ್ಲಾಘನೀಯ. ಕೃಷಿಗೆ ಹಿಮ್ಮುಖವಾಗಿರುವ ದಿನಗಳಲ್ಲಿ ಸಂಘ ಶಕ್ತಿಯಾಗಿ ಕೃಷಿಯನ್ನು ಉಳಿಸಿ ಬೆಳೆಸ ಬೇಕಾಗಿದೆ ಎಂದರು.
ಮೂಲ್ಕಿ ಸೀಮೆಯ ದುಗ್ಗಣ್ಣ ಸಾವಂತ ಅರಸರು ಅಧ್ಯಕ್ಷತೆಯನ್ನು ವಹಿಸಿದ್ದರು.
ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ಡಾ. ಯಾಜಿ ನಿರಂಜನ ಭಟ್, ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್. ಮೊಕ್ತೇಸರ ವೈ.ರಾಮಚಂದ್ರ ಎರ್ಮಾಳ್, ಕ್ರೀಡಾ ಚಟುವಟಿಕೆಯ ಸಂಚಾಲಕ ರಾಮಚಂದ್ರ ಶೆಣೈ, ಗಣೇಶ್ ಭಟ್, ಹಳೆಯಂಗಡಿ ಶ್ರೀ ದುರ್ಗಾಪರಮೇಶ್ವರೀ ಮಠದ ಅರ್ಚಕ ರುದ್ರಯ್ಯ ಪುರೋಹಿತ್, ಹಳೆಯಂಗಡಿ ಶ್ರೀ ನಾರಾಯಣಗುರು ಮಂದಿರದ ಅರ್ಚಕ ವಾಸುದೇವ ಶಾಂತಿ, ಹಿಂದೂ ಜಾಗರಣ ವೇದಿಕೆಯ ಸನತ್‌ಕುಮಾರ್, ಸುಖೇಶ್ ಪಾವಂಜೆ, ಸಂಘಟಕರಾದ ವಿನೋದ್ ಬೊಳ್ಳೂರು, ಸೋಮಶೇಖರ ಶೆಟ್ಟಿ, ವಿನೋದ್ ಸಾಲ್ಯಾನ್ ಬೆಳ್ಳಾಯರು ಇನ್ನಿತರರು ಹಾಜರಿದ್ದರು.

Pavanje-13071401

Comments

comments

Comments are closed.

Read previous post:
Kateel-13071401
ಕಟೀಲಿನಲ್ಲಿ ಯಕ್ಷಗಾನ ದಶಾಹ

ಕಟೀಲು : ಯಕ್ಷಗಾನ ಕಲೆ ನಶಿಸಿ ಹೋಗುವ ಕಲೆಯಲ್ಲ , ಭವ್ಯ ಪರಂಪರೆ ಇದೆ ಎಂದು ಶ್ರೀ ಶರವು ದೇವಳದ ಅನುವಂಶಿಕ ಆಡಳಿತ ಧರ್ಮದರ್ಶಿ ರಾಘವೇಂದ್ರ ಶಾಸ್ತ್ರಿ...

Close