ಪಂಜ : ಹೈನುಗಾರಿಕಾ ಮಾಹಿತಿ ಶಿಬಿರ

ಕಿನ್ನಿಗೋಳಿ : ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಮತ್ತು ಪಂಜ ಕೊಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ಜಂಟೀ ಆಶ್ರಯದಲ್ಲಿ ನರ್ಬಾಡ್ ಯೋಜನೆಯಡಿ ಯುವ ಮತ್ತು ಮಹಿಳೆಯರಿಗೆ ಹೈನುಗಾರಿಕಾ ಮಾಹಿತಿ ಶಿಬಿರ ಶುಕ್ರವಾರ ಪಂಜ ವಿಠೋಭ ಭಜನಾ ಮಂಡಳಿಯ ಸಭಾ ಭವನದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿವೃತ್ತ ವ್ಯವಸ್ಥಾಪಕ ಡಿ. ಎಸ್. ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿ ಶುದ್ಧ ಹಾಲು ಉತ್ಪಾದನೆ ಬಗ್ಗೆ ಮಾಹಿತಿ ನೀಡಿದರು, ಉಪ ವ್ಯವಸ್ಥಾಪಕರು ಡಾ|| ಟಿ.ವಿ. ಶ್ರೀನಿವಾಸ್ ಹಾಗೂ ಪ್ರಭಾಕರ್ ಎಸ್. ಹೈನುಗಾರಿಕೆ, ಹಸಿರು ಮೇವು ಮತ್ತು ಪಶು ಆಹಾರದ ಬಗ್ಗೆ ಮಾಹಿತಿ ನೀಡಿದರು, ವಿಸ್ತರಣಾಧಿಕಾರಿ ದೇವರಾಜ್ ಪ್ರಾಸ್ತಾವಿಕ ಭಾಷಣಗೈದರು. ಪಂಜ ಕೊಕುಡೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಶೆಟ್ಟಿ ಬೈಲಗುತ್ತು ಸ್ವಾಗತಿಸಿ ಕಾರ್ಯದರ್ಶಿ ಗಣೇಶ್ ಶೆಟ್ಟಿ ವಂದಿಸಿದರು. ಸುರೇಶ ದೇವಾಡಿಗ ಪಂಜ ಕಾರ್ಯಕ್ರಮ ನಿರೂಪಿಸಿದರು.

Kinnigoli-13071404

 

Comments

comments

Comments are closed.

Read previous post:
Kinnigoli-13071403
ಮಕ್ಕಳ ಬೆಳವಣಿಗೆಯಲ್ಲಿ ಪೋಷಕರ ಪಾತ್ರ ಮುಖ್ಯ

ಕಿನ್ನಿಗೋಳಿ : ಎಳವೆಯಲ್ಲಿಯೇ ಬೆಳವಣಿಗೆ ಮತ್ತು ಸಂಸ್ಕಾರದ ಶಿಕ್ಷಣ ನೀಡುವಲ್ಲಿ ಪೋಷಕರ ಪಾತ್ರ ಮುಖ್ಯ ಎಂದು ಯುಗಪುರುಷದ ಪ್ರಧಾನ ಸಂಪಾದಕ ಭುವನಾಭಿರಾಮ ಉಡುಪ ಹೇಳಿದರು. ಕಿನ್ನಿಗೋಳಿಯ ವನಿತಾ ಸಮಾಜದಲ್ಲಿ...

Close