ಕಿನ್ನಿಗೋಳಿ ವ್ಯಾಪ್ತಿಯಲ್ಲಿ ಮನೆಗಳಿಗೆ ಹಾನಿ

ಕಿನ್ನಿಗೋಳಿ : ಶನಿವಾರ ರಾತ್ರಿ ಸುರಿದ ಬಾರೀ ಮಳೆ ಹಾಗೂ ಗಾಳಿಗೆ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 3 ಕಡೆಗಳಲ್ಲಿ ಮನೆಗಳಿಗೆ ಹಾನಿಯಾಗಿದೆ. ನಂದಿನಿ ನದಿ ಉಕ್ಕಿ ಹರಿಯುತ್ತಿದ್ದು, ಕಿನ್ನಿಗೋಳಿ ಮತ್ತು ಕಟೀಲು ಪ್ರದೇಶದ ತಗ್ಗು ಪ್ರದೇಶಗಳು ಜಲಾವೃತವಾಗಿದೆ.
ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಂಡೆಮೂಲ ಎಂಬಲ್ಲಿ ಭಾರಿ ಗಾಳಿ ಮಳೆಯಿಂದಾಗಿ ಮಾವಿನ ಮರ ಹಾಗೂ ತೆಂಗಿನ ಮರ ಮನೆಯ ಮೇಲೆ ಬಿದ್ದು, ಮನೆಯಲ್ಲಿ ಮಲಗಿದ್ದವರು ಅದೃಷ್ಟವಶಾತ್ ಪಾರಾದ ಘಟನೆ ಭಾನುವಾರ ಬೆಳಗಿನ ಜಾವ ನಡೆದಿದೆ.
ರಾತ್ರಿ ಸುಮಾರು ೨.೩೦ ರ ಸಂದರ್ಭ ಬಾರೀ ಗಾಳಿಗೆ ಕೊಂಡೆಮೂಲ ಗ್ರಾಮದ ಅಪ್ಪಲು ಪದ್ಮ ಪೂಜಾರಿ ಎಂಬುವವರ ಮನೆಗೆ ದೊಡ್ಡ ಗಾತ್ರದ ಮಾವಿನ ಮರ ಹಾಗೂ ತೆಂಗಿನ ಮರ ಮನೆಯ ಮಹಡಿ ಮೇಲೆ ಬುಡ ಸಮೇತ ಬಿದ್ದಿದೆ. ಅದರ ರಭಸಕ್ಕೆ ಒಡೆದ ಹೆಂಚಿನ ತುಂಡುಗಳು ಮಲಗಿದ್ದವರ ಮೈಮೇಲೆ ಸಿಡಿದಿವೆ. ದೊಡ್ಡ ಚೂರುಗಳು ನಡುವೆ ಇರುವ ಅಟ್ಟದಲ್ಲಿ ಸಿಕ್ಕಿಕೊಂಡಿದ್ದರಿಂದ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಮನೆಯಲ್ಲಿದ್ದ ಪದ್ಮ ಪೂಜಾರಿಯವರ ಮಗ ಸುನಿಲ್ ಅವರ ಕೈಯ ಮೂಳೆ ಮುರಿದಿದ್ದು, ಸೊಸೆ ವಿಮಲ ಅವರಿಗೆ ತೊಡೆಗೆ ಗಾಯಗಳಾಗಿದೆ. ಮನೆಯಲ್ಲಿದ್ದ ಗೃಹೋಪಯೋಗಿ ವಸ್ತುಗಳಿಗೆ ಹಾನಿಯಾಗಿದ್ದು, ಸುಮಾರು 3 ಲಕ್ಷ ರೂಪಾಯಿಗಳಷ್ಟು ನಷ್ಟ ಸಂಭವಿಸಿದೆ.
ಉಲ್ಲಂಜೆ ನಿವಾಸಿ ವಿಶಾಲಾಕ್ಷಿ ಎಂಬುವವರ ಮನೆಗೆ ಮರದ ಗೆಲ್ಲು ಬಿದ್ದು ಅಡುಗೆ ಕೋಣೆ ಹಾನಿಗೀಡಾಗಿದೆ. ಅಜಾರು ನರ್ತಿಕಲ್ಲು ರಸ್ತೆ ಮೇಲೆ ಮರದ ಗೆಲ್ಲು ಮುರಿದು ವಿದ್ಯುತ್ ವಯರಿಗೆ ಹಾನಿಯಾಗಿದ್ದು ಅಲ್ಲದೆ ಸಮೀಪದ ಮನೆಯ ರುಕ್ಕಯ್ಯ ಎಂಬವರ ಮನೆಯ ವಿದ್ಯುತ್ ಸರ್ವಿಸ್ ವಯರ್ ತುಂಡಾಗಿದೆ. ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯ ಈಶ್ವರ್ ಕಟೀಲ್, ತಾಲೂಕು ಪಂಚಾಯಿತಿ ಸದಸ್ಯೆ ಬೇಬಿ ಸುಂದರ್ ಕೋಟ್ಯಾನ್, ಕಂದಾಯ ನಿರೀಕ್ಷಕ ನಿತ್ಯಾನಂದ ದಾಸ್, ಗ್ರಾಮ ಕರಣಿಕ ಮಂಜುನಾಥ್, ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ್ ಕಿಲೆಂಜೂರು, ಉಪಾಧ್ಯಕ್ಷೆ ಸರೋಜಿನಿ, ಸದಸ್ಯರಾದ ಕೇಶವ್ ಕರ್ಕೇರ, ಅರುಣ್ ಮಲ್ಲಿಗೆಯಂಗಡಿ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದ್ದಾರೆ.

Kinnigoli-13071405 Kinnigoli-13071406 Kinnigoli-13071407 Kinnigoli-13071408

Comments

comments

Comments are closed.

Read previous post:
Mulki-13071401
ಗುರು ಪೂರ್ಣೀಮಾ ಆಚರಣೆ

ಮೂಲ್ಕಿ:  ಕೊಲೆಕಾಡಿ ಶಿರ್ಡಿ ಸಾಯಿಬಾಬ ಮಂದಿರದಲ್ಲಿ ಗುರು ಪೂರ್ಣಿಮ ಆಚರಣೆ ಮಾಡಲಾಯಿತು. ಭೆಳಗ್ಗಿನಿಂದ ಸಂಜೆಯವರೆಗೆ ಭಜನಾ ಕಾರ‍್ಯಕ್ರಮ, ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಭಕ್ತಾಧಿಗಳು ಕಾರ‍್ಯಕ್ರಮದಲ್ಲಿ ಪಾಲ್ಗೊಂಡಿದ್ದರು. Punnethkrishna

Close