ಪೊಂಪೈ ಕಾಲೇಜು : ಸಸ್ಯ ಸಂರಕ್ಷಣಾ ಸಪ್ತಾಹ

ಕಿನ್ನಿಗೋಳಿ : ಸಸಿಗಳು ಮರವಾಗಿ ಬೆಳೆದು ಜೀವ ಸಂಕುಲಕ್ಕೆ ಉಚಿತವಾಗಿ ಆಮ್ಲಜನಕವನ್ನು ನೀಡುತ್ತದೆ. ಹೊಸ ಗಿಡಗಳನ್ನು ನೆಡುವ ಮಹತ್ವದಷ್ಟೇ ಹಳೆಯ ಗಿಡಗಳನ್ನು ಸಂರಕ್ಷಿಸುವ ಮತ್ತು ಪೋಷಿಸುವ ಕಾರ್ಯ ಮುಖ್ಯವಾದುದು ಎಂದು ಪೊಂಪೈ ಕಾಲೇಜು ಪ್ರಿನ್ಸಿಪಾಲ್ ಡಾ| ಕ್ಲಾರೆನ್ಸ್ ಮಿರಾಂದ ಹೇಳಿದರು.
ಪೊಂಪೈ ಕಾಲೇಜು ಎನ್.ಎಸ್.ಎಸ್. ವತಿಯಿಂದ ನಡೆದ ಸಸ್ಯ ಸಂರಕ್ಷಣೆ ಸಪ್ತಾಹ ಸಮಾರೋಪ ಕಾರ್ಯಕ್ರಮದಲ್ಲಿ ಗಿಡ ನೆಟ್ಟು ಮಾತನಾಡಿದರು.
ಕೆಲವು ವರ್ಷಗಳಿಂದ ಕಾಲೇಜಿನ ಪರಿಸರದಲ್ಲಿ ನೆಟ್ಟ ಗಿಡಗಳ ಸಂರಕ್ಷಣೆಗಾಗಿ ಎನ್.ಎಸ್.ಎಸ್. ಸ್ವಯಂಸೇವಕರು ಶ್ರಮದಾನ ಮಾಡಿದರು. ಸಪ್ತಾಹದ ಸಮಾರೋಪದಂದು ವಿವಿಧ ಹಣ್ಣುಹಂಪಲಿನ ಸಸಿಗಳ ಜತೆಗೆ ಹಲವು ರೀತಿಯ 200 ಸಸಿಗಳನ್ನು ನೆಟ್ಟು ವನಮಹೋತ್ಸವವನ್ನು ಆಚರಿಸಲಾಯಿತು. ಜಲಾನಯನ ಇಲಾಖೆಯಿಂದ ಸಸಿಗಳನ್ನು ಒದಗಿಸಿಕೊಡುವಲ್ಲಿ ಐಕಳ ಗ್ರಾ.ಪಂ. ಅಧ್ಯಕ್ಷೆ ಪದ್ಮಿನಿ ವಿ. ಸಾಲ್ಯಾನ್, ಮಾಜಿ ಅಧ್ಯಕ್ಷ ಯೊಗೀಶ್ ಕೊಟ್ಯಾನ್, ಕಿನ್ನಿಗೋಳಿ ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲಾ ಹೆಗ್ಡೆ ಸಹಕರಿಸಿದರು.
ಪ್ರಾಧ್ಯಾಪಕರಾದ ಡಾ. ಎಸ್. ಗುಣಕರ್ ಮತ್ತು ಡಾ. ಇ. ವಿಕ್ಟರ್ ವಾಜ್, ಪ್ರೊ. ಥೋಮಸ್ ಜಿ.ಎಂ., ಪ್ರೊ. ಯೋಗೀಂದ್ರ ಬಿ. ಉಪಸ್ಥಿತರಿದ್ದರು.

Kinnigoli-15071408 Kinnigoli-15071409 Kinnigoli-15071410 Kinnigoli-15071411

 

 

Comments

comments

Comments are closed.