ತುಳುನಾಡ ಕೃಷಿ ಜನಪದೋತ್ಸವ

Kinnigoli-15071401

ಹಳೆಯಂಗಡಿ : ಪಾವಂಜೆಯಲ್ಲಿ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್‌ನ ಸಂಯೋಜನೆಯಲ್ಲಿ ಶನಿವಾರ ನಡೆದ ತುಳುನಾಡ ಕೃಷಿ ಜನಪದೋತ್ಸವದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಫ್ರೌಢಶಾಲಾ ಬಾಲಕರ ವಿಭಾಗದಲ್ಲಿ ಕಟೀಲು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಗದು ಸಹಿತ ಪ್ರಶಸ್ತಿಯನ್ನು ಕಿನ್ನಿಗೋಳಿ ಕೊಡೆತ್ತೂರು ಭುವನಾಭಿರಾಮ ಉಡುಪರಿಂದ ಸ್ವೀಕರಿಸಿದರು.

Kinnigoli-15071402

 ತುಳುನಾಡ ಕೃಷಿ ಜನಪದೋತ್ಸವಕ್ಕೆ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಫ್ರೌಢಶಾಲಾ ಬಾಲಕಿಯರ ವಿಭಾಗದಲ್ಲಿ ಕಟೀಲು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ನಗದು ಸಹಿತ ಪ್ರಶಸ್ತಿಯನ್ನು ಬೆಂಗಳೂರಿನ ಉದ್ಯಮಿ ಸುನಿಲ್ ಕುಮಾರ್ ಶೆಟ್ಟಿಯವರಿಂದ ಸ್ವೀಕರಿಸಿದರು.

ಬಾಲಕರ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿಯನ್ನು ಕಿನ್ನಿಗೋಳಿಯ ಲಿಟ್ಲ್ ಫ್ಲವರ್ ಫ್ರೌಢಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಕಿನ್ನಿಗೋಳಿ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪಡೆದುಕೊಂಡರು. ಪ್ರಾಥಮಿಕ ಶಾಲಾ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಬಾಲಕ ಹಾಗೂ ಬಾಲಕಿಯರ ವಿಭಾಗದಲ್ಲಿನ ಎರಡೂ ಪ್ರಶಸ್ತಿಯನ್ನು ಮೂಲ್ಕಿ ಕಿಲ್ಪಾಡಿಯ ವ್ಯಾಸ ಮಹರ್ಷಿ ವಿದ್ಯಾ ಪೀಠವು ತನ್ನದಾಗಿಸಿಕೊಂಡಿದೆ. ದ್ವಿತೀಯ ಪ್ರಶಸ್ತಿಯನ್ನು ಬಾಲಕರ ವಿಭಾಗದಲ್ಲಿ ಹಳೆಯಂಗಡಿಯ ಯುಬಿಎಂಸಿ ಪ್ರಾಥಮಿಕ ಶಾಲೆ ಹಾಗೂ ಬಾಲಕಿಯರ ವಿಭಾಗದಲ್ಲಿ ಕಿನ್ನಿಗೋಳಿಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿಯರು ಪಡೆದುಕೊಂಡರು.

ಕೆಸರುಗದ್ದೆ ಓಟ ಸ್ಪರ್ಧೆಯ ಪ್ರಾಥಮಿಕ ಬಾಲಕರ ವಿಭಾಗದಲ್ಲಿ ಪ್ರಥಮ ಕೆ.ಆರ್.ಇ.ಸಿ ಶಾಲೆಯ ಮಣಿಕಂಠ, ದ್ವಿತೀಯ ಸ್ಥಾನ ಕಿಲ್ಪಾಡಿ ವ್ಯಾಸ ಮಹರ್ಷಿಯ ಪವನ್ ವಿ.ರಾವ್ ಪಡೆದುಕೊಂಡರು, ಬಾಲಕಿಯರ ವಿಭಾಗದಲ್ಲಿ ವ್ಯಾಸ ಮಹರ್ಷಿ ವಿದ್ಯಾ ಪೀಠದ ಶ್ರಾವ್ಯ ಹಾಗೂ ಸೌಭಾಗ್ಯ ಕ್ರಮವಾಗಿ ಪ್ರಥಮ, ದ್ವಿತೀಯ ಸ್ಥಾನ ಪಡೆದರು. ಫ್ರೌಢಶಾಲಾ ವಿಭಾಗದ ಬಾಲಕರಲ್ಲಿ ಪ್ರಥಮ ಸ್ಥಾನ ಕಾವೂರು ಬಿಜಿಎಸ್‌ನ ಹಝೈಫ್ ಹಾಗೂ ದ್ವಿತೀಯ ಸ್ಥಾನವನ್ನು ಸೂರಿಂಜೆಯ ಸರ್ಕಾರಿ ಶಾಲೆಯ ಅಕ್ಷಿತಾ ಪಡೆದರು. ಬಾಲಕಿಯರ ವಿಭಾಗದಲ್ಲಿ ಎನ್‌ಎಂಪಿಟಿ ಶಾಲೆಯ ಧನಲಕ್ಷ್ಮೀ ಹಾಗೂ ಸನ್ಮಿತಾ ಪ್ರಥಮ ದ್ವಿತೀಯ ಬಹುಮಾನ ಪಡೆದರು.

ಕೆಸರುಗದ್ದೆಯ ಹಿಮ್ಮುಖ ಓಟದ ಪ್ರಾಥಮಿಕ ವಿಭಾಗದ ಬಾಲಕರಲ್ಲಿ ಪ್ರಥಮ ವೈಷ್ನವ್ ದ್ವಿತೀಯ ಗೌರವ್, ಬಾಲಕಿಯರ ವಿಭಾಗದಲ್ಲಿ ಪ್ರಥಮ ಶ್ರಾವ್ಯ ದ್ವಿತೀಯ ಶೃತಾ ಎಲ್ಲರೂ ಕಿಲ್ಪಾಡಿ ವ್ಯಾಸ ಮಹರ್ಷಿ ವಿದ್ಯಾ ಪೀಠದ ವಿದ್ಯಾರ್ಥಿಗಳಾಗಿದ್ದಾರೆ. ಫ್ರೌಡಶಾಲಾ ವಿಭಾಗದ ಬಾಲಕರಲ್ಲಿ ಸುರತ್ಕಲ್‌ನ ವಿದ್ಯಾದಾಯಿನಿಯ ಪ್ರಶಾಂತ್, ದ್ವಿತೀಯ ಕಾವೂರು ಬಿಜಿಎಸ್‌ನ ಹಝೈಫ್, ಬಾಲಕಿಯರ ವಿಭಾಗದಲ್ಲಿ ಪ್ರಥಮ ಪಣಂಬೂರು ಎನ್‌ಎಂಪಿಟಿಯ ಧನಲಕ್ಷ್ಮೀ, ದ್ವಿತೀಯ ಸುರತ್ಕಲ್ ಎನ್‌ಐಟಿಕೆಯ ಕಾವ್ಯ ಪಡೆದರು.
ಬಹುಮಾನ ವಿತರಣಾ ಸಮಾರಂಭವು ಕೊಲ್ನಾಡು ಗುತ್ತುವಿನ ರಾಮಚಂದ್ರ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಕಿನ್ನಿಗೋಳಿ ಕೆ.ಭುವನಾಭಿರಾಮ ಉಡುಪ, ಬೆಂಗಳೂರಿನ ಉದ್ಯಮಿಗಳಾದ ಸುನಿಲ್‌ಕುಮಾರ್ ಶೆಟ್ಟಿ, ಸುರೇಂದ್ರ ಕುಮಾರ್, ಉಮಾನಾಥ ಕೊಟ್ಯಾನ್, ರಂಗನಾಥ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಜಿತೇಂದ್ರ ಕೊಟ್ಟಾರಿ, ಪ್ರದೀಪ್ ಕುಮಾರ್ ಕಲ್ಕೂರ, ಪೂರ್ಣಿಮಾ ಮಧು, ಸಂಘಟಕರಾದ ಯೋಗೀಶ್ ಪಾವಂಜೆ, ವಿನೋದ್ ಬೊಳ್ಳೂರು, ಸೋಮಶೇಖರ ಶೆಟ್ಟಿ, ಸನತ್‌ಕುಮಾರ್, ಸುಖೇಶ್ ಪಾವಂಜೆ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಸುಧಾಕರ ಅಮಿನ್, ರಾಮಚಂದ್ರ ಶೆಣೈ, ಸೋಮನಾಥ ದೇವಾಡಿಗ ಹಾಜರಿದ್ದರು.

Comments

comments

Comments are closed.

Read previous post:
Kinnigoli-15071408
ಪೊಂಪೈ ಕಾಲೇಜು : ಸಸ್ಯ ಸಂರಕ್ಷಣಾ ಸಪ್ತಾಹ

ಕಿನ್ನಿಗೋಳಿ : ಸಸಿಗಳು ಮರವಾಗಿ ಬೆಳೆದು ಜೀವ ಸಂಕುಲಕ್ಕೆ ಉಚಿತವಾಗಿ ಆಮ್ಲಜನಕವನ್ನು ನೀಡುತ್ತದೆ. ಹೊಸ ಗಿಡಗಳನ್ನು ನೆಡುವ ಮಹತ್ವದಷ್ಟೇ ಹಳೆಯ ಗಿಡಗಳನ್ನು ಸಂರಕ್ಷಿಸುವ ಮತ್ತು ಪೋಷಿಸುವ ಕಾರ್ಯ ಮುಖ್ಯವಾದುದು...

Close