ಪಟ್ಟೆ ಜೋಕುಲು ಕಂಬಳ ತಂಡಕ್ಕೆ ಪ್ರಶಸ್ತಿ

ಹಳೆಯಂಗಡಿ : ಪಾವಂಜೆಯಲ್ಲಿ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್‌ನ ಸಂಯೋಜನೆಯಲ್ಲಿ ಎರಡು ದಿನಗಳಲ್ಲಿ ನಡೆದ ತುಳುನಾಡ ಕೃಷಿ ಜನಪದೋತ್ಸವದ ಸಾರ್ವಜನಿಕರ ವಿಭಾಗದಲ್ಲಿ ನಡೆದ ಹಗ್ಗಜಗ್ಗಾಟ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಪಟ್ಟೆಯ ಜೋಕುಲ ಕಂಬಳ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಪಡುಕೆರೆ ಫ್ರೇಂಡ್ಸ್‌ನ ಮಹಿಳಾ ತಂಡವು ನಗದು ಸಹಿತ ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡರು.
ಪಾವಂಜೆಯ ದೇವಸ್ಥಾನ ಮುಂಭಾಗದ ಬಾಕಿಮಾರು ಗದ್ದೆಯಲ್ಲಿ ಭಾನುವಾರ ಮುಕ್ತಾಯಗೊಂಡ ತುಳುನಾಡ ಕೃಷಿ ಜನಪದೋತ್ಸವದಲ್ಲಿ ಪುರುಷರ ವಿಭಾಗದ ದ್ವಿತೀಯ ಪ್ರಶಸ್ತಿಯನ್ನು ಕೊಟ್ರಪಾಡಿ ಆದಿ ಜನಾರ್ಧನ ತಂಡ ಹಾಗೂ ಮಹಿಳೆಯರ ವಿಭಾಗದಲ್ಲಿ ಹಳೆಯಂಗಡಿಯ ಯುವತಿ ಮತ್ತು ಮಹಿಳಾ ಮಂಡಳಿಯ ತಂಡ ಪಡೆದುಕೊಂಡರು.
ಸಮೂಹ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಕುಳಾಯಿಯ ನಲಿಪು ಕಲಾ ತಂಡ ಹಾಗೂ ದ್ವಿತೀಯ ಸ್ಥಾನವನ್ನು ಹಳೆಯಂಗಡಿ ಯುವತಿ ಮತ್ತು ಮಹಿಳಾ ಮಂಡಳಿ ಪಡೆದದುಕೊಂಡಿತು.
ವಯುಕ್ತಿಕ ಕೆಸರುಗದ್ದೆ ಓಟ ಸ್ಪರ್ಧೆಯಲ್ಲಿ (ಪುರುಷ)ಪ್ರಥಮ ಸ್ಥಾನವನ್ನು ಅಭಿಷೇಕ್ ಪಾವಂಜೆ, ದ್ವಿತೀಯ ಸ್ಥಾನವನ್ನು ಪ್ರಮೋದ್ ಶೆಟ್ಟಿ ಪಂಜ, ಮಹಿಳೆಯರಲ್ಲಿ ಪ್ರಥಮ ಕಟೀಲಿನ ಭಾರತಿ, ದ್ವಿತೀಯ ಕಟೀಲಿನ ಭವ್ಯ, ಹಿರಿಯರಲ್ಲಿ (ಪುರುಷ)ಪ್ರಥಮ ಸದಾಶಿವ ಆಚಾರ್ಯ ಕಟೀಲು, ದ್ವಿತೀಯ ಬಾಬು ಕೊಂಪದವು, ಹಿರಿಯ ಮಹಿಳಾ ವಿಭಾಗದಲ್ಲಿ ಪ್ರಥಮ ಸೌಮಿನಿ ಕಿನ್ನಿಗೋಳಿ, ದ್ವಿತೀಯ ಮಮತಾ ಪ್ರಭು ಹಳೆಯಂಗಡಿ ಪಡೆದರು.
ಹಿಮ್ಮುಖ ಓಟದಲ್ಲಿ (ಪುರುಷ) ಪ್ರಥಮ ಪ್ರಮೋದ್ ಶೆಟ್ಟಿ ಪಂಜ, ದ್ವಿತೀಯ ಸ್ಥಾನವನ್ನು ಮಿಥುನ್ ಪಂಜ ಪಡೆದರು. ಮಹಿಳೆಯರಲ್ಲಿ ಪ್ರಥಮ ಭಾರತಿ ಕಟೀಲು, ದ್ವಿತೀಯ ಪಲ್ಲವಿ ಕಾಪು ಪಡೆದರು.
ಮೂರು ಕಾಲಿನ ಓಟದಲ್ಲಿ (ಪುರುಷ) ಪ್ರಥಮ ಪಾವಂಜೆಯ ವಾಗೀಶ್-ಸಂದೇಶ್, ದ್ವಿತೀಯ ಸ್ಥಾನ ಪಡುಪಣಂಬೂರಿನ ವರುಣ-ಗುರು, ಮಹಿಳಾ ವಿಭಾಗದಲ್ಲಿ ಪ್ರಥಮ ಸುಶ್ಮಿತಾ-ಅಂಕಿತಾ ಕಾವೂರು, ದ್ವಿತೀಯ ಅಕ್ಷತಾ-ಲಾವಣ್ಯ ಕಟೀಲು ಪಡೆದರು.
ಹಾಳೆ ಎಳೆಯುವ ಸ್ಪರ್ಧೆಯಲ್ಲಿ (ಪುರುಷ) ಪ್ರಥಮ ಕಿನ್ನಿಗೋಳಿಯ ಜೀವನ್-ಧೀರಜ್, ದ್ವಿತೀಯ ಸ್ಥಾನ ಪಾವಂಜೆಯ ಸುಧೀರ್-ಅಜಿತ್ , ಮಹಿಳಾ ವಿಭಾಗದಲ್ಲಿ ಪ್ರಥಮ ಭವ್ಯ- ಹರ್ಷಲತಾ ಕಟೀಲು, ದ್ವಿತೀಯ ಅಕ್ಷತಾ-ಲಾವಣ್ಯ ಕಟೀಲು ಪಡೆದರು.
ತುಳುಗೀತೆಯಲ್ಲಿ (ಯುವಕರ)ಪ್ರಥಮ ಹಳೆಯಂಗಡಿಯ ರಾಕೇಶ್ ಮತ್ತು ರಿತೇಶ್, ದ್ವಿತೀಯ ಸ್ಥಾನ ಇಂದಿರಾನಗರದ ವರುಣ್ ಮತ್ತು ರಕ್ಷಿತ್, ಮಹಿಳೆಯರ ವಿಭಾಗದಲ್ಲಿ ಯಶವಂತಿ ಶೆಣೈ-ಮಮತಾ ಪ್ರಭು ಹಳೆಯಂಗಡಿ, ದ್ವಿತೀಯ ಕಾತ್ಯಾಯಿನಿ ಮತ್ತು ಕೀರ್ತನಾ ಪಡೆದರು.
ಕೆಸರುಗದ್ದೆಯ ಕ್ರೀಡೋತ್ಸವದ ವಿಶೇಷ ಛಾಯಾಗ್ರಾಹಣ ಸ್ಪರ್ಧೆಯಲ್ಲಿ ಪ್ರಥಮ ಪಂಡರೀನಾಥ ಶೆಣೈ ಹಳೆಯಂಗಡಿ, ದ್ವಿತೀಯ ರಾಕೇಶ್ ರೈ ಪಡೆದರು. ದಂಪತಿಗಳ ಓಟ ಸ್ಪರ್ಧೆಯಲ್ಲಿ ಪ್ರಥಮ ಶಿವರಾಜ್ ಮತ್ತು ಸವಿತಾ ಪಾವಂಜೆ, ದ್ವಿತೀಯ ಸತೀಶ್ ಮತ್ತು ಸ್ವಪ್ನ ಪಕ್ಷಿಕೆರೆ ಪಡೆದರು.
ಬಹುಮಾನ ವಿತರಣಾ ಸಮಾರಂಭವು ಮಂಗಳೂರಿನ ಮೇಯರ್ ಮಹಾಬಲ ಮಾಲ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಕೆ.ಎಸ್.ನಿತ್ಯಾನಂದ ಸ್ವಾಮೀಜಿ, ಪಾವಂಜೆ ಜ್ಞಾನಶಕ್ತಿ ಸುಬ್ರಹ್ಮಣ್ಯ ಮಹಾಗಣಪತಿ ದೇವಸ್ಥಾನದ ಡಾ. ಯಾಜಿ ನಿರಂಜನ ಭಟ್, ದೇವಸ್ಥಾನದ ಆಡಳಿತ ಮೊಕ್ತೇಸರ ಶಶೀಂದ್ರ ಕುಮಾರ್. ಮೊಕ್ತೇಸರ ವೈ.ರಾಮಚಂದ್ರ ಎರ್ಮಾಳ್, ಕ್ರೀಡಾ ಸಂಚಾಲಕ ರಾಮಚಂದ್ರ ಶೆಣೈ, ಗಣೇಶ್ ಭಟ್, ವಿದ್ಯಾಧರ್, ತಾಲ್ಲೂಕು ಪಂಚಾಯಿತಿ ಸದಸ್ಯೆ ಸಾವಿತ್ರಿ ಸುವರ್ಣ, ಉಡುಪಿಯ ಮಟ್ಟಾರು ರತ್ನಾಕರ ಹೆಗ್ಡೆ, ಶಾಂತಿ ಪ್ರಸಾದ್ ಹೆಗ್ಡೆ ಮೂಡಬಿದಿರೆ, ಮೆನ್ನಬೆಟ್ಟು ಗ್ರಾ.ಪಂ.ಅಧ್ಯಕ್ಷ ಜನಾರ್ಧನ ಕಿಲೆಂಜೂರು ಬಹುಮಾನವನ್ನು ವಿತರಿಸಿದರು.
ಸಂಘಟಕರಾದ ಯೋಗೀಶ್ ಪಾವಂಜೆ, ವಿನೋದ್ ಬೊಳ್ಳೂರು, ಸೋಮಶೇಖರ ಶೆಟ್ಟಿ, ಸನತ್‌ಕುಮಾರ್, ಸುಖೇಶ್ ಪಾವಂಜೆ, ವಿನೋದ್ ಸಾಲ್ಯಾನ್ ಬೆಳ್ಳಾಯರು, ಸುಧಾಕರ ಅಮಿನ್, ಸೋಮನಾಥ ದೇವಾಡಿಗ, ರಾಮದಾಸ್ ಪಾವಂಜೆ, ನವೀನ್ ಶೆಟ್ಟಿ ಎಡ್ಮೆಮಾರ್ ಇದ್ದರು.

 

Kinnigoli-15071403

ತುಳುನಾಡ ಕೃಷಿ ಜನಪದೋತ್ಸವದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಪಟ್ಟೆಯ ಜೋಕುಲು ಕಂಬಳ ತಂಡವು ನಗದು ಸಹಿತ ಪ್ರಶಸ್ತಿಯನ್ನು ಸ್ವೀಕರಿಸಿದರು.

Kinnigoli-15071404

ತುಳುನಾಡ ಕೃಷಿ ಜನಪದೋತ್ಸವದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಮಹಿಳೆಯರ ವಿಭಾಗದಲ್ಲಿ ಪಡುಕೆರೆ ಫ್ರೇಂಡ್ಸ್‌ನ ಮಹಿಳಾ ತಂಡವು ನಗದು ಸಹಿತ ಪ್ರಶಸ್ತಿಯನ್ನು ಸ್ವೀಕರಿಸಿದರು.

 

 

Comments

comments

Comments are closed.

Read previous post:
Kinnigoli-15071401
ತುಳುನಾಡ ಕೃಷಿ ಜನಪದೋತ್ಸವ

ಹಳೆಯಂಗಡಿ : ಪಾವಂಜೆಯಲ್ಲಿ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ರಿಲೀಜಿಯಸ್ ಟ್ರಸ್ಟ್‌ನ ಸಂಯೋಜನೆಯಲ್ಲಿ ಶನಿವಾರ ನಡೆದ ತುಳುನಾಡ ಕೃಷಿ ಜನಪದೋತ್ಸವದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಫ್ರೌಢಶಾಲಾ ಬಾಲಕರ ವಿಭಾಗದಲ್ಲಿ ಕಟೀಲು...

Close