ವಿಜಯಾ ಕಾಲೇಜು ವಿದ್ಯಾರ್ಥಿ ಸಂಘಗಳ ಉದ್ಘಾಟನೆ

ಮೂಲ್ಕಿ:ಏಕಾಗ್ರತೆ ಮತ್ತು ಕಠಿಣ ಪರಿಶ್ರಮ ಸ್ವಾವಲಂಭಿ ಬದುಕು ಕಟ್ಟಿಕೊಳ್ಳಲು ಪೂರಕ ವಾಗಿದ್ದು ಪರಸ್ಪರ ಸಹಕಾರ ಗೌರವ ಮತ್ತು ತ್ಯಾಗ ಜೀವನವು ನಾಯಕತ್ವದ ಗುಣಗಳನ್ನು ಹೆಚ್ಚಿಸಲು ಸಹಕಾರಿಯಾಗುತ್ತದೆ ಎಂದು ಅನಿವಾಸಿ ಉದ್ಯಮಿ ಉಮೇಶ್ ಭಂಡಾರಿ ಹೇಳಿದರು.
ಸೋಮವಾರ ಮೂಲ್ಕಿ ವಿಜಯಾ ಕಾಲೇಜಿನ ವಿದ್ಯಾರ್ಥಿ ಸಂಘಗಳನ್ನು ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್.ಕುಡ್ವಾ ವಹಿಸಿದ್ದರು. ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್ ಶಂಕರ್, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲೆ ಪ್ರೊ.ಪಮಿದಾ ಬೇಗಂ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ನಾರಾಯಣ ಅತಿಥಿಗಳಾಗಿದ್ದರು.ವಿದ್ಯಾರ್ಥಿ ಸಂಘಗಳ ಅಧ್ಯಕ್ಷ ಮಂಜುನಾಥ.ಎಚ್.ಎಸ್.ವಿವಿಧ ಸಂಘಗಳ ಕಾರ್ಯದರ್ಶಿಗಳಾದ ರಜನೀಶ್ ಭಟ್, ಪವನ್‌ಕುಮಾರ್, ರವೀಶ್ ಮಲ್ಯ, ರಾಹುಲ್ ಕೋಟ್ಯಾನ್, ಆಸ್ಟನ್, ಅಭಿಷೇಕ್, ಪೂಜಾ.ಆರ್.ಅಮೀನ್, ದೀಕ್ಷಾ, ಅನೂಪ್, ತಾರೇಶ್ ಸಂಚಿತಾ, ಶಿವುಬಾಯಿ ಉಪಸ್ಥಿತರಿದ್ದರು ಪ್ರೊ.ನಾರಾಯಣ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಭೋಧಿಸಿದರು. ವಿನೀತ್ ಶೆಟ್ಟಿ ಸ್ವಾಗತಿಸಿದರು. ಜೈಸನ್ ಲೋಬೋ ಮತ್ತು ಸ್ಟೆಫಿ ಕಾರ್ಯಕ್ರಮ ನಿರ್ವಹಿಸಿದರು. ಅನೂಪ್ ವಂದಿಸಿದರು.

Mulki-15071401

Comments

comments

Comments are closed.

Read previous post:
Kinnigoli 14071406
ಪಂಜ ಹೊಸ ರಸ್ತೆ ನೆರೆಯಿಂದಾಗಿ ಮುಳುಗಡೆ

ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಪಕ್ಷಿಕೆರೆ ಪಂಜದಿಂದ ಮಧ್ಯ ಖಡ್ಗೇಶ್ವರಿ ದೇವಳವನ್ನು ಸಂಪರ್ಕಿಸುವ ನಿರ್ಮಾಣ ಹಂತದಲ್ಲಿರುವ ಹೊಸ ರಸ್ತೆ ಸೋಮವಾರ ನೆರೆಯಿಂದಾಗಿ ಮುಳುಗಡೆಯ ಪರಿಸ್ಥಿತಿ ಕಂಡು ಬರುತ್ತಿದೆ.

Close