ಯುಗಪುರುಷ ಪ್ರಕಟಣಾಲಯ ಕೃತಿಗಳ ಬಿಡುಗಡೆ

 ಕಿನ್ನಿಗೋಳಿ: ಸುಮಾರು 500ಕ್ಕೂ ಮಿಕ್ಕಿ ಕೃತಿಗಳನ್ನು ಸಾಹಿತ್ಯಿಕ ಲೋಕಕ್ಕೆ ಅರ್ಪಿಸಿರುವ ಕಿನ್ನಿಗೋಳಿಯ ಯುಗಪುರುಷ ಪ್ರಕಟಣಾಲಯದಿಂದ ಪ್ರಕಟಿತ ನೂತನ 4 ಕೃತಿಗಳಾದ ಪಳಕಳ ಸೀತಾರಾಮ ಭಟ್ ರಚಿತ “ಚಿಕಣಿ ಹಾಡುಗಳು” ಅಮೃತ ಸೋಮೇಶ್ವರ ರಚಿತ ” ಸಂಜೆ ಪಯಣದ ಹಾಡು”, ಅನಂತ ಚಿಂತಾಮಣಿ ಜ್ಯೋತಿಷಿ ರಚಿತ “ಮಕ್ಕಳಿಗೆ ಕತೆಗಳು”, ಪ್ರಸನ್ನ ಸಚ್ಚೇರಿಪೇಟೆ ರಚಿತ “ಹನಿಬಿತ್ತನೆ ” ಈ ಕೃತಿಗಳನ್ನು ಇದೇ ಜುಲೈ 24ರಂದು ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಜರಗಲಿರುವ ಯುಗಪುರುಷ ಸಂಸ್ಥಾಪಕ ದಿ. ಕೊ. ಅ. ಉಡುಪರ ಸಂಸ್ಮರಣ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಗುವುದು. ಕೃತಿಗಳನ್ನು ಅಮೃತ ಸೋಮೇಶ್ವರ ಇವರ ಅಧ್ಯಕ್ಷತೆಯಲ್ಲಿ ಕಟೀಲಿನ ಲಕ್ಷ್ಮೀನಾರಾಯಣ ಆಸ್ರಣ್ಣ, ಕೆ.ಜಿ.ಮಲ್ಯ, ಶ್ರೀಪತಿ ಭಟ್, ಈಶ್ವರ ಕಟೀಲು, ಡಾ.ಕೆ.ಜಿ.ವಸಂತ ಮಾಧವ, ರೆಂಜಾಳ ಮಜಲು ಗುರುರಾಜ ಉಪಾಧ್ಯಾಯರವರ
ಉಪಸ್ಥಿತಿಯಲ್ಲಿ ಹರಿಕೃಷ್ಣ ಪುನರೂರುರವರು ಬಿಡುಗಡೆಗೊಳಿಸಲಿರುವರೆಂದು ಯುಗಪುರುಷದ ಪ್ರಧಾನ ಸಂಪಾದಕ, ಪ್ರಕಾಶಕ ಕೊಡೆತ್ತೂರು ಭುವನಾಭಿರಾಮ ಉಡುಪರು ತಿಳಿಸಿದ್ದಾರೆ.

 

 

Comments

comments

Comments are closed.

Read previous post:
Kinnigoli-15071406
ಕಿನ್ನಿಗೊಳಿ ಗ್ರಾಮ ಸಭೆ

ಕಿನ್ನಿಗೋಳಿ : ಕಿನ್ನಿಗೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 3 ನೇ ವಾರ್ಡ್‌ನ ನವ ನಗರದಲ್ಲಿನ ರಸ್ತೆಯ ಜಾಗಕ್ಕೆ ಸಂಬಂಧಪಟ್ಟ ಖಾಸಗಿ ಭೂಮಿ ಮಾಲೀಕರು ಇನ್ನೂ ಪಂಚಾಯಿತಿಗೆ ದಾನ ಪತ್ರ ಕೊಟ್ಟಿರುವುದಿಲ್ಲ...

Close