ಕಟೀಲು : ಬಿಸಿಯೂಟದಲ್ಲಿ ನುಸಿ

ಕಿನ್ನಿಗೋಳಿ: ಕರ್ನಾಟಕ ಸರಕಾರದ ಮಹತ್ವಕಾಂಕ್ಷೆಯ ಯೋಜನೆಗಳಲ್ಲಿ ಅಕ್ಷರದಾಸೋಹ ಕೂಡ ಒಂದು, ಯೋಜನೆ ಯಶಸ್ವೀಯಾದರೂ ಕೆಲವು ಕಡೆಗಳಲ್ಲಿ ಆಹಾರ ಇಲಾಖಾ ನಿರ್ಲಕ್ಷದಿಂದ ಮಕ್ಕಳು ಅನಾರೋಗ್ಯ ಪೀಡಿತರಾಗುವ ಸಾಧ್ಯತೆಗಳು ಇತ್ತಿಚೆಗೆ ಹೆಚ್ಚಾಗಿ ಕಂಡು ಬರುತ್ತಿದೆ, ಅದಕ್ಕೆ ಒಂದು ಉತ್ತಮ ಉದಾಹರಣೆ ಕಟೀಲು ಶಾಲೆಗೆ ಬಂದ ಅಕ್ಕಿ.
ಕಟೀಲು ದೇವಳವು ವಿದ್ಯಾರ್ಜನೆಗಾಗಿ ಹಲವಾರು ಲಕ್ಷವನ್ನು ವೆಚ್ಚ ಮಾಡುತ್ತಿದೆ. ಕರ್ನಾಟಕ ಸರಕಾರದ ಮಹತ್ವಕಾಂಕ್ಷೆಯ ಯೋಜನೆ ಅಕ್ಷರ ದಾಸೋಹ ಪ್ರಾರಂಭವಾಗುವ ಮುಂಚಿನಿಂದಲೂ ಕಟೀಲು ದೇವಳದ ಪ್ರಾಥಮಿಕ, ಫ್ರೌಢ, ಪಿಯು.ಸಿ. ಹಾಗೂ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳಿಗಾಗಿ ಕಡಿಮೆ ಶುಲ್ಕ ಹಾಗೂ ಉತ್ತಮ ಶಿಕ್ಷಣದ ಜೊತೆಗೆ ಮಧ್ಯಾಹ್ನದ ಬಿಸಿಯೂಟ ನೀಡಲಾಗುತ್ತಿತ್ತು. ಇದರಿಂದ ಬಡವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಗುತ್ತಿತ್ತು, ಇತ್ತೀಚಿನ ವರ್ಷಗಳಿಂದ ಕರ್ನಾಟಕದ ಘನ ಸರಕಾರದ ಅಕ್ಷರದಾಸೋಹ ಯೋಜನೆಯಿಂದಾಗಿ ಎಲ್ಲಾ ಸರಕಾರಿ ಶಾಲೆಗಳಲ್ಲೂ ಬಿಸಿಯೂಟದ ಯೋಜನೆ ದೊರಕುವಂತಾಯಿತು. ಈ ಯೋಜನೆಯನ್ನು ಕಟೀಲು ದೇವಳ ಆಡಳಿತದ ಶಾಲಾ ಕಾಲೇಜುಗಳಲ್ಲಿ ಅನುಷ್ಟಾನ ತರುವಲ್ಲಿ ಕಟೀಲು ದೇವಳದ ಆಡಳಿತ ಮಂಡಳಿ ಶ್ರಮ ವಹಿಸಿತ್ತು.
ಪ್ರಸುತ ಶಾಲಾ ವರ್ಷದಿಂದ ಕಟಿಲು ದೇವಳದ ಆಡಳಿತಕ್ಕೊಳಪಟ್ಟ ಶಾಲಾ ಕಾಲೇಜಿಗೂ ಈ ಯೋಜನೆ ಅನ್ವಯವಾಯಿತು. ಹಾಗಾಗಿ ಎಲ್ಲಾ ಶಾಲೆಗಳಂತೆಯೂ ಪ್ರತೀ ತಿಂಗಳು ಅಕ್ಕಿ ಮತ್ತು ಬೇಳೆ ಸಾಮಾಗ್ರಿಗಳು ಬರುತ್ತಿದ್ದವು. ಸುಮಾರು ಮೂರುಸಾವಿರ ವಿದ್ಯಾರ್ಥಿಗಳಿಗೆ ಇದರ ಪ್ರಯೋಜನವಾಗುತ್ತಿತ್ತು. ದಿನಕ್ಕೆ 50 ಕೆ.ಜಿ.ಯ 5 ಚೀಲಗಳು ಅನ್ನಕ್ಕಾಗಿ ಬೇಕಾಗುತ್ತಿತ್ತು.
ಈ ಬಾರಿ ಬಂದ ಅಡುಗೆ ಸಾಮಾಗ್ರಿಯ ಅಕ್ಕಿಯಲ್ಲಿ ತುಂಬಾ ನುಸಿಗಳು ತುಂಬಿದೆ. ಈ ಬಾರಿ 50 ಕಿಲೋ ನ ಒಟ್ಟು 90 ಅಕ್ಕಿ ಮೂಟೆಗಳು ಬಂದಿದ್ದು ಅಕ್ಕಿ ಮಾತ್ರ ಉತ್ತವಾಗಿದ್ದರೂ ಹೆಚ್ಚಿನ ಮೂಟೆಗಳಲ್ಲಿ ನುಸಿ ಕಂಡು ಬಂದಿದೆ. , ಗುರುವಾರ ವಿದ್ಯಾರ್ಥಿಗಳು ಮಕ್ಕಳು ಊಟ ಮಾಡುವ ಸಂದರ್ಭ ಅನ್ನದಲ್ಲಿ ನುಸಿ ಕಂಡು ಬಂದಿದ್ದು ಹೆಚ್ಚಿನ ವಿದ್ಯಾರ್ಥಿಗಳು ಊಟ ಮಾಡಲಿಲ್ಲ ಎಂದು ತಿಳಿದು ಬಂದಿದೆ.
ಕಟೀಲು ದೇವಳ ಆಡಳಿತ ಮಂಡಳಿ ಹಾಗೂ ಮೆನ್ನಬೆಟ್ಟು ಗ್ರಾಮ ಪಂಚಾಯಿತಿ ಅಧ್ಯಕ್ಷ ಜನಾರ್ದನ ಕಿಲೆಂಜೂರು ತ್ವರಿತವಾಗಿ ಮಂಗಳೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ದೂರು ನೀಡಿದ್ದು ಕೂಡಲೇ ಅಕ್ಕಿ ಚೀಲಗಳನ್ನು ಬದಲಾಯಿಸಿ ಬೇರೆ ಉತ್ತಮ ಗುಣ ಮಟ್ಟದ ಅಕ್ಕಿ ನೀಡಬೇಕಾಗಿ ವಿನಂತಿಸಿದ್ದಾರೆ. ಶಿಕ್ಷಣಾಧಿಕಾರಿಗಳು ಮುಂದಿನ ದಿನಗಳಲ್ಲಿ ಸೂಕ್ತ ರೀತಿಯಲ್ಲಿ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಶುಕ್ರವಾರ ಕಟೀಲು ದೇವಳ ಆಡಳಿತ ಮಂಡಳಿ ತ್ವರಿತವಾಗಿ ವಿದ್ಯಾರ್ಥಿಗಳ ಭೋಜನ ವ್ಯವಸ್ಥೆ ಅಸ್ತವ್ಯಸ್ತವಾಗದಂತೆ ದೇವಳದ ವತಿಯಿಂದ ಅಕ್ಕಿಯನ್ನು ನೀಡಿದ್ದಾರೆ.

Kinnigoli 16071410 Kinnigoli 16071411 Kinnigoli 16071412

Comments

comments

Comments are closed.

Read previous post:
Kinnigoli 16071409
ಜಾನಪದ ಸೊಗಡು ಬಾಳೆ ಹಾಕುವ ಕ್ರಮ

ಕಿನ್ನಿಗೋಳಿ: ಕರಾವಳಿಯ ತುಳು ನಾಡು ತನ್ನದೇ ಆದ ಜಾನಪದ ಸಂಸ್ಕ್ರತಿ ಆಚರಣೆಗಳನ್ನು ಹೊಂದಿದೆ. ತುಳು ಭಾಷಿಗರು ತಮ್ಮ ದೈನಂದಿನ ಬದುಕಿನಲ್ಲಿ ಸ್ಥಳೀಯ ಆಚರಣೆಗಳಾದ ದೈವಾರಾಧನೆ ನಾಗಾರಾಧನೆ ಹಾಗೂ ತುಳುನಾಡಿನ...

Close