ತುಳುನಾಟಕದಿಂದ ಸೃಜನಶೀಲತೆಗೆ ಆದ್ಯತೆ

ಕಿನ್ನಿಗೋಳಿ: ನಾಟಕಗಳಲ್ಲಿ ಕಲಾವಿದರು ಸಮಾಜದ ನೈಜ ಘಟನೆಗಳ ಸೃಜನಶೀಲತೆಗೆ ಆದ್ಯತೆ ನೀಡಿದಲ್ಲಿ ಯಶಸ್ಸು ಸಾಧ್ಯ, ಕೇವಲ ನಗುವಿನ ನಾಟಕಗಳಾಗದೆ ಸಮಾಜಕ್ಕೆ ಪರಿಣಾಮ ಬೀರುವ ನಾಟಕಗಳು ಬರಬೇಕು ಮರಾಠಿ ರಂಗಭೂಮಿ ಇಂತಹ ಪ್ರಯೋಗದಿಂದಲೇ ಶ್ರೀಮಂತವಾಗಿದೆ ಎಂದು ಖ್ಯಾತ ರಂಗಕರ್ಮಿ ಜಗದೀಶ ಶೆಟ್ಟಿ ಕೆಂಚನಕೆರೆ ಹೇಳಿದರು.
ಕಿನ್ನಿಗೋಳಿಯ ವಿಜಯಾಕಲಾವಿದರು ಅಭಿನಯಿಸುವ ದಿನೇಶ್ ಆಚಾರ್ಯ ರಚಿಸಿರುವ “ಈ ಪೊಣ್ಣು ಏರ್..? ” ತುಳು ನಾಟಕಕ್ಕೆ ಕಿನ್ನಿಗೋಳಿಯ ಯುಗಪುರುಷದ ರಾಘವೇಂದ್ರ ಸನ್ನಿಧಾನದಲ್ಲಿ ಮುಹೂರ್ತ ನೆರವೇರಿಸಿ ಮಾತನಾಡಿದರು.
ಈ ಸಂದರ್ಭ ಯುಗಪುರುಷ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ವಿಜಯಾ ಕಲಾವಿದರು ನಾಟಕ ತಂಡದ ಅಧ್ಯಕ್ಷ ಶರತ್ ಶೆಟ್ಟಿ, ಸುಧಾಕರ ಸಾಲ್ಯಾನ್, ಸಜೀತ್ ಪ್ರಕಾಶ್ ಸುರತ್ಕಲ್, ಹರೀಶ್ ಪಡುಬಿದ್ರಿ, ಸೀತಾರಾಮ ಶೆಟ್ಟಿ, ನರೇಂದ್ರ ಕೆರೆಕಾಡು, ವಿಕ್ರಂ ಶೆಟ್ಟಿ ಶಿರ್ವ, ನಿತಿನ್ ಕಟೀಲ್, ಸತೀಶ್ ಶಿರ್ವ, ರೇಖಾ ಕೆಂಚನಕೆರೆ, ಬಾಲಕೃಷ್ಣ ಕೊಂಡಾಣ, ದಿನೇಶ್ ಪಾಪು ಮುಂಡ್ಕೂರು, ದೇವದಾಸ್ ಮೂಳೂರು ಮತ್ತಿತರರು ಉಪಸ್ಥಿತರಿದ್ದರು.

Kinnigoli 16071407

Comments

comments

Comments are closed.

Read previous post:
Kinnigoli 16071406
ಸರಕಾರದ ವಿವಿಧ ಯೋಜನೆಗಳ ಮಾಹಿತಿ ಶಿಬಿರ

ಮುಲ್ಕಿ : ಮುಲ್ಕಿ ನಗರ ಪಂಚಾಯತ್ ಸಭಾಂಗಣದಲ್ಲಿ ನಡೆದ ಸರಕಾರದ ವಿವಿಧ ಯೋಜನೆಗಳ ಮಾಹಿತಿ ಶಿಬಿರದಲ್ಲಿ ದ.ಕ. ಜಿಲ್ಲಾ ಮಲೇರಿಯಾ ಅಧಿಕಾರಿ ಡಾ. ಅರುಣ್ ಕುಮಾರ್ ಮತ್ತು ಜಿಲ್ಲಾ...

Close