ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆ

ಮೂಲ್ಕಿ: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇತ್ತೀಚೆಗೆ ದುಶ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಆಲಂದೂರು ನಿವಾಸಿ ಶಿರೂರು ಕಾಲೇಜಿನ ವಿದ್ಯಾರ್ಥಿನಿ ರತ್ನಾ ಕೊಠಾರಿ ನಿಗೂಢ ಸಾವಿನ ಪ್ರಕರಣವನ್ನು ನಿಷ್ಪಕ್ಷಪಾತ ತನಿಖೆಗಾಗಿ ಸಿಬಿಐಗೆ ಹಸ್ತಾಂತರಿಸಬೇಕು ಕಾಲೇಜು ವಿದ್ಯಾರ್ಥಿನಿ ರತ್ನಾ ಕೊಟ್ಟಾರಿಯವರ ಮನೆಯವರಿಗೆ 10ಲಕ್ಷರೂ ಪರಿಹಾರ ನಿಧಿ ಒದಗಿಸಬೇಕು ಹಾಗೂ ಆರೋಪಿಗಳನ್ನು ಶೀಘ್ರ ಪತ್ತೆಹಚ್ಚಿ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಲಾಯಿತು. ರಾಜಕಾರಣಿಗಳಿಗೆ ಕೋಟಿ ರೂ ಪರಿಹಾರ ಹಾಗೂ ಇನ್ನಿತರ ವಿಷಯಗಳಲ್ಲಿ ಲಕ್ಷಾಂತರ ರೂ ತಕ್ಷಣ ಪರಿಹಾರ ನೀಡುವ ಸರ್ಕಾರ ಅಮಾಯಕ ವಿದ್ಯಾರ್ಥಿನಿಯ ವಿಷಯದಲ್ಲಿ ತಕ್ಷಣ ಸ್ಪಂದಿಸಬೇಕು ಇಲ್ಲವಾದಲ್ಲಿ ತೀವ್ರ ಪ್ರತಿಭಟಣೆ ನಡೆಸಲಾಗುವುದು ಎಂದು ಎಂದು ಮೂಲ್ಕಿ ವಿಜಯಾ ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಂಜುನಾಥ್ ಎಚ್.ಎಸ್. ಆಗ್ರಹಿಸಿದರು. ಕಾಲೇಜಿನ ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆಯಲ್ಲಿ ಮೂಲ್ಕಿ ಪೇಟೆಗೆ ಬಂದು ಸಭೆ ನಡೆಸಿದರು.
ಮೃತಳ ಆತ್ಮಕ್ಕೆ ಶಾಂತಿ ಸಿಗಲೆಂದು ಒಂದು ನಿಮಿಷದ ಮೌನ ಪ್ರಾರ್ಥನೆ ನಡೆಸಲಾಯಿತು. ನಂತರ ವಿದ್ಯಾರ್ಥಿಗಳ ಪ್ರಮುಖರು ಮೂಲ್ಕಿ ನಾಡ ಕಚೇರಿಗೆ ತೆರಳಿ ವಿಶೇಷ ತಹಶೀಲ್ದಾರ್ ಮೂಲಕ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಮನವಿಯನ್ನು ಅರ್ಪಿಸಿದರು.

Kinnigoli 16071404

 

Comments

comments

Comments are closed.

Read previous post:
Kinnigoli 16071402
ಕಟೀಲು : ಗ್ರಾಮಸ್ಥರಿಂದ ಸೀಯಾಭಿಷೇಕ

ಕಟೀಲು: ಶ್ರೀ ದುರ್ಗಪರಮೇಶ್ವರೀ ದೇವಸ್ಥನದಲ್ಲಿ ಅತ್ತೂರು ಕೊಡೆತ್ತೂರು ಗ್ರಾಮಸ್ಥರಿಂದ ಸೀಯಾಭಿಷೇಕ ನಡೆಯಿತು.

Close