ಜುಲೈ20 ಭಾನುವಾರ ಮೂಲ್ಕಿಯಲ್ಲಿ ಆಟಿಡೊಂಜಿ ದಿನ

ಮೂಲ್ಕಿ: ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಜನಮಾನಸಕ್ಕೆ ಪರಿಚಯಿಸಿದ ಯುವವಾಹಿನಿ ಮೂಲ್ಕಿ ಘಟಕ ಆಶ್ರಯದಲ್ಲಿ 12ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವು ಜು 20ನೇ ಆದಿತ್ಯವಾರ ಮೂಲ್ಕಿ ಬಿಲ್ಲವ ಸಂಘದಲ್ಲಿ ಬೆಳಿಗ್ಗೆ 9.30ರಿಂದ ಪ್ರಾರಂಭವಾಗಿ ಮಧ್ಯಾಹ್ನದವರೆಗೆ ನಡೆಯಲಿದೆ. ಸಮಾರಂಭದ ಉದ್ಘಾಟನೆಯನ್ನು ಕಾರ್ಕಳದ ಭುವನೇಂದ್ರ ಕಾಲೇಜಿನ ಉಪನ್ಯಾಸಕ ಡಾ| ಅರುಣ್ ಕುಮಾರ್.ಎಸ್.ಆರ್ ಇವರು ನೆರವೇರಿಸಲಿರುವರು. ಯುವವಾಹಿನಿಯ ಕೇಂದ್ರ ಸಮಿತಿ ಅಧ್ಯಕ್ಷರಾದ ರವಿಚಂದ್ರ ಕೋಡಿಕಲ್ ಅಧ್ಯಕ್ಷತೆ ವಹಿಸಲಿದ್ದು ಆಟಿ ತಿಂಗಳ ವಿಶೇಷಗಳ ಬಗ್ಗೆ ಪತ್ರಕರ್ತ ಎಸ್ ನಿತ್ಯಾನಂದ ಪಡ್ರೆ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಲಿದ್ದಾರೆ. ವರ್ಷದ ವ್ಯಕ್ತಿಯಾಗಿ ಆಟಿದತಮ್ಮನವನ್ನು ತುಂಗಭದ್ರಾ ಪಿಲ್ಮ್‌ನ ರಾಜಶೇಖರ್ ಕೋಟ್ಯಾನ್‌ರವರು ಪಡೆಯಲಿದ್ದಾರೆ.ಮುಖ್ಯ ಅತಿಥಿಯಾಗಿ ಸುರತ್ಕಲ್ ಹೋಟೇಲು ಉದ್ಯಮಿ ರವೀಂದ್ರ ಪೂಜಾರಿ, ಮತ್ತು ಬಿಲ್ಲವ ಸಂಘದ ಅಧ್ಯಕ್ಷರಾದ ಯದೀಶ್ ಅಮೀನ್ ಕೊಕ್ಕರ್‌ಕಲ್ ಉಪಸ್ಥಿತರಿರುವರು ಆಟಿಡೊಂಜಿ ದಿನದ ಕಾರ್ಯಕ್ರಮ ವಿಭಿನ್ನತೆಯಿಂದ ಕೂಡಿದ್ದು ಸಾಂಸ್ಕೃತಿಕ ವೈವಿಧ್ಯಮಯದಲ್ಲಿ ರಾಜೇಶ್ ಕೆಂಚನಕೆರೆ ಬಳಗದವರಿಂದ ಬಲೆ ತೆಲಿಪಾಲೆ ಹಾಗೂ ಯುವವಾಹಿನಿ ಕಲಾದವಿದರಿಂದ ನೃತ್ಯ ಕಾರ್ಯಕ್ರಮಗಳು ನಡೆಯಲಿದೆ ಊಟೋಪಚಾರದಲ್ಲಿ ವಿವಿಧ ತಿಂಡಿಗಳು ತುಳುನಾಡಿನ ರುಚಿಕರ ಮಳೆಗಾಲದ ಪಲ್ಯಗಳಾದ ಕುಕ್ಕದ ಉಪ್ಪಡ್, ತಿಮರೆ ಚಟ್ನಿ, ಉಪ್ಪಡ್ ಪಚ್ಚಿರ್, ತೆಕ್ಕರೆದ ತಲ್ಲಿ, ಕುಡುತ್ತ ಚಟ್ನಿ, ತೊಜಂಕ್ ನುರ್ಗೆ ತೊಪ್ಪು, ತೇವು ತೇಟ್ಲ, ಪದೆಂಗಿ ಗಸಿ, ತೇವು ಪದ್ಪೆ, ಬಂಬೆ ಕುಡು ಗಸಿ, ಉರ್ಪೇಲ್ ನುಪ್ಪು, ಕುಡುತ ಸಾರ್, ಪೆಲಕಾಯಿದ ಗಟ್ಟಿ, ಪೆಲಕಾಯಿದ ಗಾರ್ಯ, ಮೆತ್ತೆದ ಗಂಜಿ ಸಹಿತ ಸುಮಾರು 20ಕ್ಕೂ ಮಿಕ್ಕಿ ಸಂಪ್ರದಾಯ ಶೈಲಿಯ ರಸವತ್ತಾದ ಖಾದ್ಯಗಳೊಂದಿಗೆ ಈ ಬಾರಿ ಸುಮಾರು 3,000ಜನರಿಗೆ ಆತಿಥ್ಯದ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಘಟಕದ ಅಧ್ಯಕ್ಷ ಮೋಹನ್ ಸುವರ್ಣ ಪ್ರಕಟಣೆಗೆ ತಿಳಿಸಿದ್ದಾರೆ

Comments

comments

Comments are closed.

Read previous post:
Kinnigoli 16071404
ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನಾ ಮೆರವಣಿಗೆ

ಮೂಲ್ಕಿ: ರಾಜ್ಯದಲ್ಲಿ ಅತ್ಯಾಚಾರ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಇತ್ತೀಚೆಗೆ ದುಶ್ಕರ್ಮಿಗಳ ಕೃತ್ಯಕ್ಕೆ ಬಲಿಯಾದ ಆಲಂದೂರು ನಿವಾಸಿ ಶಿರೂರು ಕಾಲೇಜಿನ ವಿದ್ಯಾರ್ಥಿನಿ ರತ್ನಾ ಕೊಠಾರಿ ನಿಗೂಢ ಸಾವಿನ...

Close