ರೋಟರಿ ಹಾಗೂ ಇಂಟರಾಕ್ಟ್ ಕ್ಲಬ್ ಆಸರೆಯಲ್ಲಿ ವನಮಹೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಇಂಟರಾಕ್ಟ್ ಕ್ಲಬ್ ಆಸರೆಯಲ್ಲಿ ವನಮಹೋತ್ಸವ, ಹಣ್ಣು ಹಂಪಲುಗಳ ಸಸಿ ಹಾಗೂ ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮ ರೋಟರಿ ಶಾಲೆಯಲ್ಲಿ ಶನಿವಾರ ನಡೆಯಿತು.
ಕಿನ್ನಿಗೋಳಿ ರೋಟರಿ ಅಧ್ಯಕ್ಷ ವಿಲಿಯಂ ಸಿಕ್ವೇರಾ ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟು ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಗಿಡ ಹಾಗೂ ತರಕಾರಿ ಬೀಜಗಳನ್ನು ವಿತರಿಸಲಾಯಿತು. ವಿದ್ಯಾರ್ಥಿನಿ ಯಶಸ್ವಿನಿ ಸಸ್ಯ ಹಾಗೂ ಪರಿಸರ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದಂರ್ಭ ರೋಟರಿ ಕಾರ್ಯದರ್ಶಿ ಗಂಗಾಧರ ಶೆಟ್ಟಿ, ರೋಟರಿ ಆಂಗ್ಲ ಮಾಧ್ಯಮ ಶಾಲಾ ಕಾರ್ಯದರ್ಶಿ ಕಳ್ಳಿಗೆ ಬಾಲಕೃಷ್ಣ ಶೆಟ್ಟಿ, ಶೇಷರಾಮ ಶೆಟ್ಟಿ, ಪಿ.ಸತೀಶ್ ರಾವ್, ಸಹಾಯಕ ಮುಖ್ಯ ಶಿಕ್ಷಕ ಎಲ್.ಎನ್. ಭಟ್, ಇಕೋ ಕ್ಲಬ್ ನಿರ್ದೇಶಕ ಸೂರ್ಯಕಾಂತ್ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಸೋನಾಲಿ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಶ್ರೇಯ ವಂದಿಸಿದರು.

Kinnigoli 19071403

Comments

comments

Comments are closed.

Read previous post:
Kinnigoli 19071402
ಕಟೀಲು ಬಲ್ಲಣದಲ್ಲಿ ರಸ್ತೆಗೆ ಉರುಳಿದ ಮರ

ಕಿನ್ನಿಗೋಳಿ: ಶುಕ್ರವಾರ ರಾತ್ರಿ ಸುರಿದ ಭಾರೀ ಗಾಳಿ ಮಳೆಗೆ ಕಿನ್ನಿಗೋಳಿ ಕಟೀಲು ರಸ್ತೆಯ ಬಲ್ಲಣ ತಿರುವಿನಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದು ವಿದ್ಯುತ್ ಕಂಬ ಮುರಿದು ತಂತಿಗಳು...

Close