ಆಟಿಯಲ್ಲಿನ ನಂಬಿಕೆಗಳು ಮೂಡ ನಂಬಿಕೆಗಳಲ್ಲ

ಕಿನ್ನಿಗೋಳಿ : ಆಟಿ ಆಚರಣೆ ಕೇವಲ ನೆನಪಿನ ಆಚರಣೆ ಆಗದೆ ಹಿಂದಿನ ಕಾಲದ ಉತ್ತಮ ಕಟ್ಟು ಕಟ್ಟಳೆ ಆಚಾರ ವಿಚಾರಗಳನ್ನು ತಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಆಟಿಯಲ್ಲಿನ ನಂಬಿಕೆಗಳು ಮೂಡ ನಂಬಿಕೆಗಳಲ್ಲ, ಮೂಲ ನಂಬಿಕೆಗಳ ಸಾರವಾಗಿದೆ. ಎಂದು ಮಂಗಳೂರು ಸರಕಾರಿ ಮಹಾವಿದ್ಯಾಲಯದ ಉಪನ್ಯಾಸಕಿ ಮಂಜುಳಾ ಶೆಟ್ಟಿ ಹೇಳಿದರು.
ಕಿನ್ನಿಗೋಳಿ ಸರಾಫ್ ಅಣ್ಣಯ್ಯಾ ಆಚಾರ್ಯ ಸಭಾಭವನದಲ್ಲಿ ಶನಿವಾರ ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದ ಆಯೋಜಿಸಿದ “ಆಟಿ ಆಚರಣೆ”ಯಲ್ಲಿ ಚೆನ್ನೆ ಮಣೆ ಆಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಟಿ ತಿಂಗಳ ಸುಮಾರು 27 ಬಗೆಯ ಖಾದ್ಯಗಳನ್ನು ಮಾಡಲಾಗಿತ್ತು. ಮಾಜಿ ಅಧ್ಯಕ್ಷೆ ರತ್ನಾ ಪ್ರಭಾಕರ್ ಆಚಾರ್ಯ ಅವರನ್ನು ಸನ್ಮಾನಿಸಲಾಯಿತು.
ಕಿನ್ನಿಗೋಳಿ ವಿಶ್ವಬ್ರಾಹ್ಮಣ ಸಮಾಜ ಸೇವಾ ಸಂಘ ಅಧ್ಯಕ್ಷ ದಿನೇಶ್ ಆಚಾರ್ಯ, ಮಂಗಳೂರು ಕಾಳಿಕಾಂಬಾ ದೇವಳದ ಆಡಳಿತ ಸಮಿತಿಯ ಸದಸ್ಯ ಉದಯ ಆಚಾರ್ಯ ಉಪಸ್ಥಿತರಿದ್ದರು.
ಕಿನ್ನಿಗೋಳಿ ಕಾಳಿಕಾಂಬಾ ಮಹಿಳಾ ವೃಂದ ಅಧ್ಯಕ್ಷೆ ಹೇಮಾ ವಿಶ್ವನಾಥ್ ಸ್ವಾಗತಿಸಿ, ರಾಜೇಶ್ವರಿ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

Kinnigoli-20071405Kinnigoli-20071402 Kinnigoli-20071403 Kinnigoli-20071404

Comments

comments

Comments are closed.

Read previous post:
Kinnigoli 19071403
ರೋಟರಿ ಹಾಗೂ ಇಂಟರಾಕ್ಟ್ ಕ್ಲಬ್ ಆಸರೆಯಲ್ಲಿ ವನಮಹೋತ್ಸವ

ಕಿನ್ನಿಗೋಳಿ: ಕಿನ್ನಿಗೋಳಿ ರೋಟರಿ ಕ್ಲಬ್ ಹಾಗೂ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಇಂಟರಾಕ್ಟ್ ಕ್ಲಬ್ ಆಸರೆಯಲ್ಲಿ ವನಮಹೋತ್ಸವ, ಹಣ್ಣು ಹಂಪಲುಗಳ ಸಸಿ ಹಾಗೂ ತರಕಾರಿ ಬೀಜಗಳ ವಿತರಣಾ ಕಾರ್ಯಕ್ರಮ...

Close