ಕಿನ್ನಿಗೋಳಿ ರೋಟರ‍್ಯಾಕ್ಟ್ ಪದಗ್ರಹಣ

 ಕಿನ್ನಿಗೋಳಿ : ಯುವ ಜನತೆ ದುಶ್ಚಟಗಳಿಗೆ ಮಾರು ಹೋಗದೆ ಸಮಾಜ ಸೇವಾ ಸಂಘಟನೆ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ರೋಟರ‍್ಯಾಕ್ಟ್ ಜಿಲ್ಲಾ ಸಭಾಪತಿ ಮಂಜುನಾಥ ಉಪಾಧ್ಯಾಯ ಹೇಳಿದರು.
ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಶನಿವಾರ ನಡೆದ ಕಿನ್ನಿಗೋಳಿ ರೋಟರ‍್ಯಾಕ್ಟ್ ಕ್ಲಬ್‌ನ 2014-15 ನೇ ಸಾಲಿನ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.
ಕಿನ್ನಿಗೋಳಿ ರೋಟರಿ ಕ್ಲಬ್ ಅಧ್ಯಕ್ಷ ವಿಲಿಯಂ ಸಿಕ್ವೇರಾ ರೋಟರ‍್ಯಾಕ್ಟ್ ಕ್ಲಬ್‌ನ ನೂತನ ಅಧ್ಯಕ್ಷ ಸಂತೋಷ್ ಶೆಟ್ಟಿ ಮತ್ತು ತಂಡದ ಪದಾಧಿಕಾರಿಗಳ ಪದಗ್ರಹಣ ನಡೆಸಿದರು. ವಲಯ ಪ್ರತಿನಿಧಿ ಸಂತೋಷ್ ಮೂಡಬಿದಿರೆ ರೋಟರ‍್ಯಾಕ್ಟ್ ಮುಖವಾಣಿ ಸಿಂಚನ ಬಿಡುಗಡೆಗೊಳಿಸಿದರು. ಧನಂಜಯ ಶೆಟ್ಟಿಗಾರ್ ಪ್ರಾಯೋಜಿತ ಗುತ್ತಕಾಡು ಶಾಲೆಗೆ ಪುಸ್ತಕ , ಕಲಿಕಾ ಉಪಕರಣಗಳು, ಪರಿಸರ ಶಾಲೆಗಳ ಎಸ್.ಎಸ್.ಎಲ್.ಸಿ ಯಲ್ಲಿ ಹೆಚ್ಚು ಅಂಕ ಪಡೆದ ಪ್ರತಿಭಾವಂತರನ್ನು ಗೌರವಿಸಲಾಯಿತು ಹಾಗು ವೈದ್ಯಕೀಯ ಚಿಕಿತ್ಸೆಗೆ ಇಬ್ಬರಿಗೆ ಧನ ಸಹಾಯ ನೀಡಲಾಯಿತು.
ಈ ಸಂದರ್ಭ ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ಪ್ರತಿಭಾವಂತ ವಿದ್ಯಾರ್ಥಿ ಶಯನ್ ಶೆಟ್ಟಿ, ಕೇಶವ ಹಾಗೂ ಪೌರ ಕಾರ್ಮಿಕರಾದ ಬೊಗ್ಗು, ಐತಪ್ಪ , ಶಿವಾನಂದ, ಕೃಷ್ಣ, ಶ್ರೀಧರ, ಉಮೇಶ್, ವಸಂತ ಅವರನ್ನು ಸನ್ಮಾನಿಸಲಾಯಿತು.
ರೋಟರ‍್ಯಾಕ್ಟ್ ಜಿಲ್ಲಾ ಪ್ರತಿನಿಧಿ ರಝಾಕ್ ಕಬಾಕಕರ‍್ಸ್, ನಿಕಟ ಪೂರ್ವ ರೋಟರ‍್ಯಾಕ್ಟ್ ಸಭಾಪತಿ ಜೊಸ್ಸಿ ಪಿಂಟೋ, ನೂತನ ಸಭಾಪತಿ ಸಂತೋಷ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. ನಿಕಟಪೂರ್ವ ಅಧ್ಯಕ್ಷ ಪ್ರಣಿಲ್ ಹೆಗ್ಡೆ ಸ್ವಾಗತಿಸಿದರು. ಸುಮಿತ್ ಕುಮಾರ್ ಪರಿಚಯಿಸಿದರು. ಕಾರ್ಯದರ್ಶಿ ಸುಧಾಕರ ಪೊಸ್ರಾಲ್ ವರದಿ ವಾಚಿಸಿ ವಂದಿಸಿದರು. ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Kinnigoli-20071409

Comments

comments

Comments are closed.

Read previous post:
Kinnigoli-20071408
ಬದಲಾವಣೆಗೆ ಒಗ್ಗಿಕೊಳ್ಳಬೇಕಾಗಿದೆ 

ಕಿನ್ನಿಗೋಳಿ : ವಿದ್ಯಾರ್ಥಿ ಸಂಘಟನೆಯಲ್ಲಿ ವಿದ್ಯಾರ್ಥಿಯೊಬ್ಬನ ಬೌದ್ಧಿಕ, ನಾಯಕತ್ವ ಹಾಗೂ ವ್ಯಕ್ತಿತ್ವ ವಿಕಸನ ಬೆಳಗುತ್ತದೆ. ಬದಲಾವಣೆಗೆ ಒಗಿಕೊಳ್ಳಬೇಕಾದ ಈ ಕಾಲದಲ್ಲಿ ಬದುಕಿಗೆ ಪೂರಕವಾದ ಶಿಕ್ಷಣ ನೀಡಬೇಕಾಗಿದೆ. ವಿವಿಧ ಕೋನಗಳಲ್ಲಿ...

Close