ಚಲಿಸುವ ಕಾರಿನ ಮೇಲೆ ಮರ ಬಿದ್ದು ಹಾನಿ

ಕಿನ್ನಿಗೋಳಿ: ಮೂಲ್ಕಿ – ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಕೆಂಚನಕೆರೆ ಸಮೀಪ ಶನಿವಾರ ಸಂಜೆ ಗಾಳಿ ಮಳೆಗೆ ರಸ್ತೆಯ ಸಾಲು ಮರಗಳು ಚಲಿಸುತ್ತಿರುವ ಕಾರಿನ ಮೇಲೆ ಬಿದ್ದು ಕಾರು ಜಖಂ ಗೊಂಡ ಘಟನೆ ಸಂಭವಿಸಿದೆ. ಕಾರಿನಲ್ಲಿದ್ದ ಮೂವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಕೆರೆಕಾಡಿನಿಂದ ಮೂಲ್ಕಿ ಕಡೆಗೆ ಚಲಿಸುತ್ತಿದ್ದ ಕಾರಿನ ಮಧ್ಯ ಭಾಗದ ಮೇಲೆ ಮರ ಬಿದ್ದು ಕಾರು ಹಾನಿಗೊಂಡಿದೆ. ಅಂಗರಗುಡ್ಡೆಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಎರಡು ಕಾರುಗಳು ಬಕುಗಳು ಕೂದಲೆಳೆಯಲ್ಲಿ ಪವಾಡ ಸದೃಶವಾಗಿ ಬಚಾವಾಗಿದ್ದಾರೆ.

Kinnigoli-20071407

Comments

comments

Comments are closed.

Read previous post:
Kinnigoli-20071406
ಐಕಳ ಮನೆ ಕುಸಿತ

ಕಿನ್ನಿಗೋಳಿ : ಶನಿವಾರ ಸುರಿದ ಬಾರೀ ಗಾಳಿ ಮಳೆಗೆ ಕಿನ್ನಿಗೋಳಿ ಸಮೀಪದ ಐಕಳದಲ್ಲಿ ಮನೆಯೊಂದು ಕುಸಿದಿದೆ. ಐಕಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗನ ಕಲ್ಲು ನಿವಾಸಿ ರಮೇಶ್ ಎಂಬುವವರ...

Close