ಆಷಾಡ ಎಂದರೆ ಭಯವಿತ್ತು, ಆದರೆ ಈಗಿಲ್ಲ

ಮೂಲ್ಕಿ: ಆಷಾಡ ಮಾಸವೇ ಕಷ್ಟದ ದಿನಗಳು ಎಂಬ ಅಂಜಿಕೆ, ಭಯವಿದ್ದ ಕಾಲ ಹೋಗಿದೆ ಈಗ ಆ ತಿಂಗಳು ಸಹ ಹಬ್ಬಗಳನ್ನು ಆಚರಿಸಬಹುದು ಎಂದು ಆಟಿಡೊಂಜಿ ದಿನ, ಆಟಿದ ಗಮ್ಮತ್, ಆಟಿದ ನೆನಪು, ಆಟಿಡೊಂಜಿ ಕೂಟ ಎಂಬ ಬೇರೆ ಬೇರೆ ಹೆಸರಿನಲ್ಲಿ ಆಷಾಡದಿನದಲ್ಲಿ ಸಂಘ ಸಂಸ್ಥೆಗಳು ಹಮ್ಮಿಕೊಂಡು ಸಾರ್ವತ್ರಿಕವಾಗಿ ಸಂಭ್ರಮಿಸುವ ಕಾಲ ಬಂದರು, ಅದರ ಸಂಸ್ಕೃತಿ, ಸಂಸ್ಕಾರಕ್ಕೆ ಎಂದಿಗೂ ಧಕ್ಕೆ ಆಗಬಾರದು ಎಂದು ಪತ್ರಕರ್ತ ನಿತ್ಯಾನಂದ ಪಡ್ರೆ ಹೇಳಿದರು.
ಮೂಲ್ಕಿಯ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಭಾನುವಾರ ಮೂಲ್ಕಿಯ ಯುವವಾಹಿನಿಯ ಸಂಯೋಜನೆಯಲ್ಲಿ ನಡೆದ ಆಟಿದ ಒಂಜಿ ದಿನ ಕಾರ್ಯಕ್ರಮದಲ್ಲಿ ಆಷಾಡ ಮಾಸದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಕಾರ್ಕಳ ಭುವನೇಂದ್ರ ಕಾಲೇಜಿನ ಉಪನ್ಯಾಸಕ ಡಾ. ಅರುಣ್ ಕುಮಾರ್ ಹಲಸಿನಹಣ್ಣು ಕತ್ತರಿಸುವ ಮೂಲಕ ಉದ್ಘಾಟಿಸಿದರು.
ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರವಿಚಂದ್ರ ಕೋಡಿಕಲ್ ಅಧ್ಯಕ್ಷತೆಯನ್ನು ವಹಿಸಿದ್ದರು.
ಚಿತ್ರ ನಿರ್ಮಾಪಕ, ನಟ ರಾಜಶೇಖರ ಕೋಟ್ಯಾನ್‌ರನ್ನು ಸನ್ಮಾನಿಸಲಾಯಿತು.
ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ.ಸಿ.ಸುವರ್ಣ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಯದೀಶ್ ಅಮೀನ್ ಕೊಕ್ಕರಕಲ್, ಉದ್ಯಮಿ ರವೀಂದ್ರ ಪೂಜಾರಿ ಕಾರ್ಕಳ, ನಿವೃತ್ತ ಪೊಲೀಸ್ ಅಧಿಕಾರಿ ಪೀತಾಂಬರ ಹೇರಾಜೆ, .ಮೂಲ್ಕಿ ಘಟಕದ ಅಧ್ಯಕ್ಷ ಮೋಹನ್ ಸುವರ್ಣ, ಚಿತ್ರಾ ಸುವರ್ಣ, ಸುಗಂಧಿ ಸತೀಶ್, ಮಾಜಿ ಅಧ್ಯಕ್ಷರಾದ ಯೋಗೀಶ್ ಕೋಟ್ಯಾನ್, ಉದಯ ಅಮೀನ್ ಮಟ್ಟು, ವಿಜಯ ಕುಮಾರ್ ಕುಬೆವೂರು, ಜಯ ಕುಬೆವೂರು, ಕಾರ್ಯದರ್ಶಿ ರಕ್ಷಿತಾ ಯೋಗೀಶ್ ಕೋಟ್ಯಾನ್, ನಿರ್ದೇಶಕರಾದ ಸತೀಶ್ ಕೆಸ್.ರಾವ್.ನಗರ, ಸುಲೋಚನ, ಕೋಶಾಧಿಕಾರಿ ಚೇತನ್ ಇದ್ದರು.
ಯುವವಾಹಿನಿ ಕಲಾವಿದರಿಂದ ನೃತ್ಯ ವೈವಿಧ್ಯ, ರಾಜೇಶ್ ಕೆಂಚನಕೆರೆ ತಂಡದಿಂದ ಕುಸಾಲ್ದ ಗೊಂಚಿಲ್ ಪ್ರದರ್ಶನ ನಡೆಯಿತು.

Kinnigoli 21071404

Narendra Kerekad

 

Comments

comments

Comments are closed.

Read previous post:
Kinnigoli 21071403
ಗುರುಪೂಜಾ-ಗುರುದಕ್ಷಿಣಾ ಉತ್ಸವ

ಮೂಲ್ಕಿ: ರಾಷ್ಟ್ರೀಯ ಸ್ವಯಂಸೇವಕ ಸಂಘ ಮೂಲ್ಕಿ ನಗರ ಇದರ ವತಿಯಿಂದ ಗುರುಪೂಜಾ-ಗುರುದಕ್ಷಿಣಾ ಉತ್ಸವ ಭಾನುವಾರ ಬಪ್ಪನಾಡಿನ ಜ್ಞಾನಮಂದಿರದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮೂಲ್ಕಿಯ ಉದ್ಯಮಿ ಅತುಲ್ ಕುಡ್ವ...

Close