ಅಂಗರಗುಡ್ಡೆ-ಶಿಮಂತೂರು ರಸ್ತೆ ಅವ್ಯವಸ್ಥೆ

ಮೂಲ್ಕಿ: ಸುಮಾರು ಐದುವರೆ ಕೋಟಿ ವೆಚ್ಚದಲ್ಲಿ ಪ್ರದಾನ ಮಂತ್ರಿ ಸಡಕ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಆರುವರೆ ಕಿಮೀ ಉದ್ದದ ಅಂಗರಗುಡ್ಡೆಯಿಂದ ಶಿಮಂತೂರು ಶಾಲೆಯವರೆಗಿನ ಕಾಮಗಾರಿ ಅವ್ಯವಸ್ಥೆಯ ಆಗರವಾಗಿದೆ.ಸಂಸದ ನಳಿನ್ ಕುಮಾರ್ ಕನಸಿನಕೂಸಾದ ಈ ರಸ್ತೆಯ ಕಾಮಗಾರಿಯನ್ನು ದಾವಣಗೆರೆ ಮೂಲದ ವ್ಯಕ್ತಿಯೊಬ್ಬರು ಟೆಂಡರು ವಹಿಸಿಕೊಂಡಿದ್ದು ಕಾಮಗಾರಿಯಲ್ಲಿ ಅಸಮರ್ಪಕತೆಯಿಂದ ಸ್ಥಳೀಯರ ಸ್ಥತಿ ಡೋಲಾನಮಾಯವಾಗಿದೆ
ಅರ್ದಂಬರ್ದ ಕಾಮಗಾರಿಯಿಂದ ಸಂಕಷ್ಟ
ಶಿಮಂತೂರು ಶಾಲೆಯಿಂದ ಕಳೆದ ಕೆಲ ತಿಂಗಳ ಹಿಂದೆ ಕುಂಟುತ್ತಾ ಸಾಗುತ್ತಿರುವ ಸಾಗುತ್ತಿರುವ ಕಾಮಗಾರಿ ಇದೀಗ ಮಳೆಗಾಲದ ನಿಮಿತ್ತ ನಿಲ್ಲಿಸಿದ್ದು ಅಲ್ಲಲ್ಲಿ ರಸ್ತೆಯಿಡೀ ಕೆಸರುಮಯವಾಗಿ ಪ್ರಯಾಣಿಕರಿಗೆ ಓಡಾಡಲು ಅಸಾದ್ಯವಾಗಿದೆ. ರಸ್ತೆ ಸಮತಟ್ಟು ಮಾಡಲು ಶೇಡಿ ಮಣ್ಣನ್ನು ಉಪಯೋಗಿಸಿದ್ದು ಕೆಸರುಮಯ ವಾತಾವರಣ ನಿರ್ಮಾಣವಾಗಿದೆ ಎಂದು ಸ್ಥಳೀಯ ಪ್ರಕಾಶ ಎಳತ್ತೂರು ಆರೋಪಿಸಿದ್ದಾರೆ.ಅದರಲ್ಲೂ ಶಿಮಂತೂರು ದೇವಸ್ಥಾನದ ಬಳಿ ರಸ್ತೆ ಬಿರುಕು ಬಿಟ್ಟಿದ್ದು ಅಪಾಯವನ್ನು ಆಹ್ವಾನಿಸುತ್ತಿದೆ.ಪ್ರತಿನಿತ್ಯ ಸಾವಿರಾರು ಪ್ರಯಾಣಿಕರಲ್ಲದೆ ಚಿಕ್ಕ ಮಕ್ಕಳು ಈ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದು ಹೇಳುವವರು ಕೇಳುವವರು ಯಾರೂ ಇಲ್ಲದಂತೆ ಆಗಿದೆ ಎಂದು ಸ್ಥಳೀಯ ಅಶ್ವಿನ್ ಭಟ್ ಆಕ್ರೋಶ ವ್ಯಕ್ತಪಡಿಸುತ್ತಾರೆ.
ಶಿಮಂತೂರು ದೇವಸ್ಥಾನದಿಂದ ಅಂಗರಗುಡ್ಡೆಗೆ ಹೋಗುವ ರಸ್ತೆಯಂತೂ ಕೆಸರಿನಿಂದ ತುಂಬಿ ಹೋಗಿದ್ದು ಸ್ಥಳೀಯರ ಮನೆ ಸಾಮಾಗ್ರಿಗಳ ಕೊಂಡು ಟಿಪ್ಪರುಗಳ ಹಾವಳಿಯಿಂದ ರಸ್ತೆ ಕಂಗಾಲಾಗಿ ಹೋಗಿದೆ. ಶಿಮಂತೂರು ಪರಿಸರದ ವಾಸಿಗಳಿಗೆ ಕಿನ್ನಿಗೋಳಿ, ಎಳತ್ತೂರು,ಮೊಯಿಲೊಟ್ಟು,ಫಲಿಮಾರಿಗಾಗಿ ಉಡುಪಿ,ಬಜಪೆ ಕಡೆಗೆ ಹೋಗಲು ಇದು ಹತ್ತಿರದ ದಾರಿಯಾಗಿದ್ದು ಸಂಸದರ ಯೋಜನೆ ಗುತ್ತಿಗೆದಾರರ ನಿರ್ಲ್ಯಕ್ಷದಿಂದ ನೀರುಪಾಲಾಗುತ್ತಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಚಿವರ ಮಾತಿಗೆ ಬೆಲೆಯಿಲ್ಲ
ಕಳೆದ ದಿನಗಳ ಹಿಂದೆ ಜಿಲ್ಲಾಧಿಕಾರಿಗಳು ಮೂಲ್ಕಿಗೆ ಭೇಟಿ ನೀಡಿದ ಸಂದರ್ಭ ಶೀಮಂತೂರು ದೇವಸ್ಥಾನದ ಬಳಿಯಲ್ಲಿ ಅಂಗರಗುಡ್ಡೆಗೆ ಹೋಗುವ ರಸ್ತೆಗೆ ಸ್ಥಳೀಯರು ರಸ್ತೆಗೆ ಹಾಕಿರುವ ತಡೆ ಬೇಲಿಯನ್ನು ತೆರವುಗೊಳಿಸಲು ಅಧಿಕಾರಿಗಳಿಗೆ ಸೂಚಿಸಿದ್ದರೂ ಅದಿಕಾರಿಗಳು ಕ್ಯಾರೇ ಮಾಡಿಲ್ಲ.ಹಾಗೆಯೇ ಶಿಮಂತೂರಿನ ದೇವಸ್ಥಾನದ ಈ ರಸ್ತೆಯಿಂದ ಪಂಜಿನಡ್ಕ ಎಂಬಲ್ಲಿಗೆ ತಿರುಗುವ ರಸ್ತೆಯಿಡೀ ಈ ಕಾಮಗಾರಿಯಿಂದ ಕೆಸರುಮಯವಾಗಿದ್ದು ಪಂಜಿನಡ್ಕ ನಿವಾಸಿಗಳೂ ಗುತ್ತಿಗೆದಾರನಿಗೆ ಹಿಡಿಶಾಪ ಹಾಕುವಂತಾಗಿದೆ.
ಪ್ರತಿಭಟನೆಗೆ ಸಿದ್ದತೆ
ಅರ್ದಂಬರ್ದ ಹಾಗೂ ಅಸಮರ್ಪಕ ರಸ್ತೆ ಕಾಮಗಾಯಿಂದ ಕಂಗಾಲಾಗಿರುವ ಶಿಮಂತೂರು,ಎಳತ್ತೂರು,ಪಂಜಿನಡ್ಕ ಗ್ರಾಮದ ಗ್ರಾಮಸ್ಥರು ಗುತ್ತಿಗೆದಾರನ ವಿರುದ್ದ ಸದ್ಯದಲ್ಲೇ ಪ್ರತಿಭಟನೆಗೆ ಸಜ್ಜಾಗಿದ್ದು ಕೂಡಲೇ ಕೆಸರನ್ನು ತೆಗೆಸಿ ಮಳೆ ನೀರು ಹೋಗಲು ಮೋರಿಯನ್ನು ಹಾಕಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಸ್ಥಳೀಯರಾದ ಶಾಂತಾರಾಮ ಹೆಗ್ಡೆ,ಪ್ರಕಾಶ ಎಳತ್ತೂರು,ಹರೀಶ ಪರಂಕಿಲ,ಕಿಶೋರ್ ಶೆಟ್ಟಿ ತೆಂಗಾಳಿ,ಸಂತೋಷ ಶೆಟ್ಟಿ ಶಿಮಂತೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Kinnigoli 21071401 Kinnigoli 21071402

Puneetha Krishna

 

Comments

comments

Comments are closed.

Read previous post:
Kinnigoli-20071409
ಕಿನ್ನಿಗೋಳಿ ರೋಟರ‍್ಯಾಕ್ಟ್ ಪದಗ್ರಹಣ

 ಕಿನ್ನಿಗೋಳಿ : ಯುವ ಜನತೆ ದುಶ್ಚಟಗಳಿಗೆ ಮಾರು ಹೋಗದೆ ಸಮಾಜ ಸೇವಾ ಸಂಘಟನೆ ಮೂಲಕ ಸಮಾಜದ ಏಳಿಗೆಗಾಗಿ ಶ್ರಮಿಸಬೇಕು ಎಂದು ರೋಟರ‍್ಯಾಕ್ಟ್ ಜಿಲ್ಲಾ ಸಭಾಪತಿ ಮಂಜುನಾಥ ಉಪಾಧ್ಯಾಯ ಹೇಳಿದರು....

Close