ಗ್ರಾಮೀಣ ಕ್ರೀಡೆಗಳಿಗೆ ಯುವಕರ ಪ್ರೋತ್ಸಾಹ ಅಗತ್ಯ

ಮೂಲ್ಕಿ: ಇಂದಿನ ಆಧುನಿಕ ತಂತ್ರಜ್ಞಾನದಂತಹ ಯುಗದಲ್ಲಿ ಗ್ರಾಮೀಣ ಕ್ರೀಡೆಗಳು ಕಣ್ಮರೆಯಾಗುತ್ತಿದ್ದು ಇಂದಿನ ಯುವಕರು ಕ್ರೀಡೆಯನ್ನುಉಳಿಸಿ ಬೆಳೆಸಲು ಪ್ರಯತ್ನಪಡಬೇಕು ಎಂದು ಮಾಜೀ ಪೋಲೀಸ್ ಅಧಿಕಾರಿ ಹಾಗೂ ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷರಾದ ಕೆ.ಎನ್. ಕೋಟ್ಯಾನ್ ಹೇಳಿದರು.

ಅವರು ಕಕ್ವ ಫ್ರೆಂಡ್ಸ್ ಕಕ್ವ ಇದರ ವತಿಯಿಂದ ಪ್ರಥಮ ಬಾರಿಗೆ ಕಕ್ವ ದೋಲೇಮಾರ್ ಗದ್ದೆಯಲ್ಲಿ ‘ಕಂಡೊಡೊಂಜಿ ದಿನ’ ಕಾರ‍್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಿಲ್ಪಾಡಿ ಗ್ರಾಮಪಂಚಾಯತ್ ಸದಸ್ಯ ಜಯಕುಮಾರ್ ಮಟ್ಟು ವಹಿಸಿದ್ದರು. ಸಭೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಸತೀಶ ಕಕ್ವ,ಸದಸ್ಯ ವಿಶ್ವನಾಥ ಆಚಾರ‍್ಯ, ನುರಿತ ಕೃಷಿಕ ಶೇಖರ ಕಕ್ವ,ಮಾಜೀ ಪಂಚಾಯತ್ ಸದಸ್ಯ ದೊಂಬ ಕೋಟ್ಯಾನ್ ಉಪಸ್ಥಿತರಿದ್ದರು. ದಿವಾಕರ ಕಕ್ವ ಸ್ವಾಗತಿಸಿ ವಂದಿಸಿದರು.ಬಳಿಕ ಸ್ಥಳೀಯರಿಗೆ ವಿವಿದ ಸ್ಫದೆಗಳು ನಡೆದು ಬಹುಮಾನ ವಿತರಿಸಲಾಯಿತು.

Kinnigoli 21071402

Puneeth Krishna

Comments

comments

Comments are closed.

Read previous post:
Kinnigoli 21071402
ಅಂಗರಗುಡ್ಡೆ-ಶಿಮಂತೂರು ರಸ್ತೆ ಅವ್ಯವಸ್ಥೆ

ಮೂಲ್ಕಿ: ಸುಮಾರು ಐದುವರೆ ಕೋಟಿ ವೆಚ್ಚದಲ್ಲಿ ಪ್ರದಾನ ಮಂತ್ರಿ ಸಡಕ್ ಯೋಜನೆಯಡಿ ನಿರ್ಮಾಣವಾಗುತ್ತಿರುವ ಆರುವರೆ ಕಿಮೀ ಉದ್ದದ ಅಂಗರಗುಡ್ಡೆಯಿಂದ ಶಿಮಂತೂರು ಶಾಲೆಯವರೆಗಿನ ಕಾಮಗಾರಿ ಅವ್ಯವಸ್ಥೆಯ ಆಗರವಾಗಿದೆ.ಸಂಸದ ನಳಿನ್...

Close