ಮೌಲ್ಯಧಾರಿತ-ಶಿಸ್ತು ಸಂಸ್ಕಾರದ ನೈತಿಕ ಶಿಕ್ಷಣ ಅಗತ್ಯ

ಕಿನ್ನಿಗೋಳಿ: ಇಂದಿನ ತಂತ್ರಜ್ಞಾನದ ಯುಗದಲ್ಲಿ ಮೌಲ್ಯಧಾರಿತ ಹಾಗೂ ಶಿಸ್ತು ಸಂಸ್ಕಾರದ ನೈತಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ| ವಿನ್ಸೆಂಟ್ ಮೊಂತೆರೊ ಹೇಳಿದರು.
ಕಿನ್ನಿಗೋಳಿ ಚರ್ಚ್ ಸಭಾಭವನದಲ್ಲಿ ಕಥೊಲಿಕ್ ಸಭಾ ಕಿನ್ನಿಗೋಳಿ ವಲಯದ ವಿದ್ಯಾರ್ಥಿಗಳಿಗೆ ಭಾನುವಾರ ನಡೆದ ವೃತ್ತಿ ಮಾರ್ಗದರ್ಶನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಹಾಯಕ ಧರ್ಮಗುರು ಫಾ| ರಾಯನ್ ಕ್ರಾಸ್ತ ಶುಭ ಹಾರೈಸಿದರು. ಪ್ರೊ| ಸ್ಟೀಫನ್ ಕ್ವಾಡ್ರಸ್ ಉಪನ್ಯಾಸವಿತ್ತರು. ಕಿನ್ನಿಗೋಳಿ ವಲಯ ಕೆಥೋಲಿಕ್ ಸಭಾ ಅಧ್ಯಕ್ಷ ಹರ್ಬಟ್ ವಿಲಿಯಂ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಕೆಥೋಲಿಕ್ ಸಭಾದ ವತಿಯಿಂದ ವಲಯದ ಪ್ರತಿಭಾವಂತ ೬೦ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.
ವಿನ್ನಿಫ್ರೆಡ್ ಪಿಂಟೊ ವಂದಿಸಿದರು. ಹೆರಿಕ್ ಪಾಯಸ್ ಕಾರ್ಯಕ್ರಮ ನಿರೂಪಿಸಿದರು.

Kinnigoli 22071403

Comments

comments

Comments are closed.

Read previous post:
Kinnigoli 22071402
ವೇದಮೂರ್ತಿ ಗುರುರಾಜ ಉಪಾಧ್ಯಾಯರಿಗೆ ಸನ್ಮಾನ

ಕಿನ್ನಿಗೋಳಿ: ಪುರೋಹಿತ ವಾಚಸ್ಪತಿ, ಮಾಧ್ವತತ್ವದ ಸಾರವನ್ನು ಅಸಂಖ್ಯಾತ ಆಸ್ತಿಕ ಬಂಧುಗಳಿಗೆ ಉಣಬಡಿಸಿದ ರೆಂಜಾಳ ಮಜಲು ವೇದಮೂರ್ತಿ ಗುರುರಾಜ ಉಪಾಧ್ಯಾಯರವನ್ನು ಜುಲೈ 24 ಗುರುವಾರದಂದು ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ಯುಗಪುರುಷ ಸಂಸ್ಥಾಪಕ...

Close