ಸ್ವಉದ್ಯೋಗದಲ್ಲಿ ಆರ್ಥಿಕ ಸ್ವಾವಲಂಬನೆ ಸಾಧ್ಯ

ಕಿನ್ನಿಗೋಳಿ: ಸ್ವಉದ್ಯೋಗದಲ್ಲಿ ವಿಫುಲ ಅವಕಾಶಗಳಿದ್ದು ಆರ್ಥಿಕ ಸ್ವಾವಲಂಬನೆ ಸಾಧ್ಯ ಯುವ ಮಹಿಳೆಯರು ಇದನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು ಎಂದು ಐಕಳ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪದ್ಮಿನಿ ವಸಂತ್ ಹೇಳಿದರು.
ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು ಹಾಗೂ ಪಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸಹಯೋಗದಲ್ಲಿ ನರ್ಬಾಡ್ ಯೋಜನೆಯಡಿ ಪಟ್ಟೆ ಸಂಘದ ಆವರಣದಲ್ಲಿ ಇತ್ತೀಚೆಗೆ ನಡೆದ ಹೈನುಗಾರಿಕೆಯಲ್ಲಿ ಯುವ ಮತ್ತು ಮಹಿಳೆಯರ ಪಾತ್ರ ವಿಚಾರ ಸಂಕೀರ್ಣ ಉದ್ಘಾಟಿಸಿ ಮಾತನಾಡಿದರು.
ಹಾಲು ಮಹಾ ಮಂಡಳಿಯ ನಿವೃತ್ತ ವ್ಯವಸ್ಥಾಪಕ ಡಿ.ಎಸ್. ಹೆಗ್ಡೆ ಹಾಗೂ ಮೂಡಬಿದ್ರಿ ಪಶು ವೈದ್ಯಾಧಿಕಾರಿ ಡಾ| ಚಂದ್ರ ಶೇಖರ್ ಭಟ್ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಪಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ವಿನೋದ ಅಂಚನ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ದೇವಕಿ ಸ್ವಾಗತಿಸಿ ವಲಯ ವಿಸ್ತರಣಾಧಿಕಾರಿ ಯಮುನ ಕಾರ್ಯಕ್ರಮ ನಿರೂಪಿಸಿದರು.

Kinnigoli 22071404

Comments

comments

Comments are closed.

Read previous post:
Kinnigoli 22071403
ಮೌಲ್ಯಧಾರಿತ-ಶಿಸ್ತು ಸಂಸ್ಕಾರದ ನೈತಿಕ ಶಿಕ್ಷಣ ಅಗತ್ಯ

ಕಿನ್ನಿಗೋಳಿ: ಇಂದಿನ ತಂತ್ರಜ್ಞಾನದ ಯುಗದಲ್ಲಿ ಮೌಲ್ಯಧಾರಿತ ಹಾಗೂ ಶಿಸ್ತು ಸಂಸ್ಕಾರದ ನೈತಿಕ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ನೀಡಬೇಕು ಎಂದು ಕಿನ್ನಿಗೋಳಿ ಚರ್ಚ್‌ನ ಧರ್ಮಗುರು ಫಾ| ವಿನ್ಸೆಂಟ್ ಮೊಂತೆರೊ ಹೇಳಿದರು. ಕಿನ್ನಿಗೋಳಿ...

Close